ಕೊಡಗು | ನಟ ಚೇತನ್, ಪತ್ರಕರ್ತರು ಸೇರಿದಂತೆ ಹೋರಾಟಗಾರರಿಗೆ ಅರಣ್ಯ ಇಲಾಖೆ ನೊಟೀಸ್; ನಾಳೆ ವಿಚಾರಣೆಗೆ ಹಾಜರು

Date:

Advertisements

ಕೊಡಗು ಜಿಲ್ಲೆ, ಪೊನ್ನಂಪೇಟೆ ತಾಲ್ಲೂಕು ಕರಡಿಕಲ್ಲು ಅತ್ತೂರು ಕೊಲ್ಲಿ ಹಾಡಿಯಲ್ಲಿ ಸರಿಸುಮಾರು 52 ಆದಿವಾಸಿ ಬುಡಕಟ್ಟು ಸಮುದಾಯದ ಕುಟುಂಬಗಳು ‘ ಇದು ನಮ್ಮ ಪೂರ್ವಜರ ಭೂಮಿ, ಇಲ್ಲಿಯೇ ಬದುಕಲು ಅವಕಾಶ ಕೊಡಿ ‘ ಎಂದು ದಿನಾಂಕ-05-05-2025 ರಂದು ಪ್ರವೇಶ ಮಾಡಿದ್ದರು. ಅದೇ ಸಮಯದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಬೆಂಬಲಿಸಿದ್ದ ನಟ ಚೇತನ್ ಅಹಿಂಸಾ, ಇಬ್ಬರು ಪತ್ರಕರ್ತರು, ಹೋರಾಟಗಾರರು ಸೇರಿದಂತೆ ಐವರ ಮೇಲೆ ಪ್ರಕರಣ ದಾಖಲಿಸಿ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಅರಣ್ಯ ಇಲಾಖೆ ನೊಟೀಸ್ ನೀಡಿದೆ.

ಆದಿವಾಸಿ ಬುಡಕಟ್ಟು ಸಮುದಾಯ ‘ ನಮ್ಮ ಕಾಡು, ನಮ್ಮ ಹಕ್ಕು ‘ ನಾವಿಲ್ಲಿಯೇ ಇರುತ್ತೇವೆ, ಕಾಡಿನಿಂದ ಹೊರ ನಡೆಯುವುದಿಲ್ಲ. ಇದ್ದರೂ ಇಲ್ಲಿಯೇ, ಸತ್ತರು ಇಲ್ಲಿಯೇ ಇದು ನಮ್ಮ ಪೂರ್ವಜರು ಬಾಳಿ ಬದುಕಿದ ಜಾಗ ನಾವಿಲ್ಲಿಯೇ ಇರುತ್ತೇವೆ ಎಂದು ಮರಳಿ ತಮ್ಮ ಸ್ಥಾನಕ್ಕೆ ಪ್ರವೇಶ ಮಾಡಿದ್ದರು.

ಅರಣ್ಯ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಶಿವು ಮಾತನಾಡಿ “ಆದಿವಾಸಿ ಬುಡಕಟ್ಟು ಸಮುದಾಯ ಅರಣ್ಯ ವಾಸಿಗಳಾಗಿದ್ದು ತಲಾ ತಲಾಂತರಗಳಿಂದ ಕಾಡಿನಲ್ಲಿಯೇ ಹುಟ್ಟಿ ಬೆಳೆದ ಕಾಡಿನ ಮಕ್ಕಳು. ಅವರದ್ದೇ ಆದ ದೈವಗಳು, ಸಾಂಪ್ರದಾಯಿಕ ಗಡಿಗಳು, ಆಚರಣೆ, ಪೂರ್ವಜರನ್ನು ಮಣ್ಣು ಮಾಡಿದ ಸ್ಥಳಗಳಾಗಿವೆ. ಕಾಡಿನಲ್ಲೇ ಹುಟ್ಟಿ, ಕಾಡಿನಲ್ಲೇ ಬೆಳೆದು ಅರಣ್ಯ ಕಾಯ್ದೆ ಕಾರಣಕ್ಕಾಗಿ ಹೊರ ದೂಡಲ್ಪಟ್ಟ ಜನ. “

Advertisements

” ನಾಗರೀಕತೆ ಕಾಣದ, ಆಧುನಿಕ ಜಗತ್ತಿಗೆ ತೆರೆದುಕೊಳ್ಳದ, ಎಲ್ಲರಂತೆ ಸಹಜವಾಗಿ ಇರಲಾರಾದ ಬದುಕು ಇವರದ್ದು. ಎಂತಹದ್ದೇ ಐಶರಾಮಿ ಜೀವನವೇ ಆಗಲಿ ಒಗ್ಗಿಕೊಳ್ಳಲಾರರು. ಅವರಿಗೆ ಕಾಡು, ಕಾಡು ಪ್ರಾಣಿಗಳ ನಡುವಿನ ಜೀವನವೇ ಅತ್ಯಂತ ಸಂತಸದ ಬದುಕು. ಕಾಡಿನಲ್ಲಿ ತಮ್ಮದೇ ಬದುಕು ಕಟ್ಟಿಕೊಳ್ಳುವ, ವನ್ಯಜೀವಿಗಳ ನಡುವೆ ಉತ್ತಮ ಬಾಂಧವ್ಯ ಹೊಂದಿರುವ ಜನ. ಎಂದಿಗೂ ಇವರ ನಡುವೆ ಮಾನವ – ವನ್ಯಜೀವಿ ಸಂಘರ್ಷ ಏರ್ಪಟ್ಟಿಲ್ಲ. ಹಾಗೆಯೇ ಅರಣ್ಯಕ್ಕೆ ಇವರಿಂದ ಯಾವ ದಕ್ಕೆಯು ಆಗಿಲ್ಲ. ಹೀಗಿರುವಾಗ ಅರಣ್ಯ ಇಲಾಖೆ, ಅಧಿಕಾರಿಗಳ ದರ್ಪ ಕಂಗೆಡಿಸಿದೆ. ಅರಣ್ಯವಲ್ಲದ ಜಾಗ ಅರಣ್ಯ, ಕಾಡು ಎಂತಲೂ ಕರೆದು. ಇಲ್ಲಿರಲು ನಿಮಗೆ ಅವಕಾಶವಿಲ್ಲ ಎಂದು ಕಾನೂನಿನ ಅಸ್ತ್ರ ಬಳಸಿ ಹೊರ ಹಾಕುವ ಪ್ರವೃತ್ತಿ ಹೆಚ್ಚಾಗಿದೆ. ಇತ್ತೀಚಿಗೆ ಅದರಿಂದ ಸಾವಿರಾರು ಕುಟುಂಬಗಳು ನೊಂದಿವೆ. ಪ್ರಾಣ ಕಳೆದುಕೊಂಡಿವೆ. “

” ಅರಣ್ಯ ಇಲಾಖೆ ದೃಷ್ಟಿಯಲ್ಲಿ ಅತ್ತೂರು ಕೊಲ್ಲಿ ಕಾಡು. ಆದರೇ, ದಾಖಲೆಗಳ ಅನುಸಾರ ಅದು ಹಾಡಿ (ಗ್ರಾಮ) ದಾಖಲೆಗಳು ಇರುವಾಗ ಅದು ಹೇಗೆ ಕಾಡಾಗಲು ಸಾಧ್ಯ ಎನ್ನುವ ಪ್ರಶ್ನೆಗಳು ಹೆಚ್ಚಿವೆ. ಅರಣ್ಯ ಇಲಾಖೆ ಪರಿಶೀಲನೆ ಮಾಡಿ ಯಾವುದೇ ದಾಖಲೆ ಇಲ್ಲದೆ ಇದ್ದಾಗ ಹೇಳಬಹುದಿತ್ತು. ಆದರೇ, ಅದನ್ನ ಯಾವುದು ಮಾಡದೆ ಏಕಾಏಕಿ ಗುಡಿಸಲು ಕಿತ್ತು, ಪ್ಲಾಸ್ಟಿಕ್ ಹೊದಿಕೆ, ಬಂಬು, ಬಡಿ ಎಲ್ಲವನ್ನು ಹೊತ್ತೋಯ್ದರು. ಇದೆಲ್ಲವೂ ಸರಿಯಾ?”

” ಇಂತಹ ದುಸ್ಥಿತಿ ಸಮಯದಲ್ಲಿ ಅತ್ತೂರು ಕೊಲ್ಲಿ ಹೋರಾಟಕ್ಕೆ ಸಾಮಾಜಿಕ ಹೋರಾಟಗಾರರು, ಪತ್ರಕರ್ತರು, ಸಮುದಾಯದ ಮೇಲಿನ ಅಭಿಮಾನ ಉಳ್ಳವರು ಬೆಂಬಲಿಸಿ ನಾವಿರುವಲ್ಲಿಗೆ ಬಂದರು. ಬೆಂಬಲ ನೀಡಿದರು. ಇದನ್ನ ಅರಿಯದೆ ಇಲ್ಲ ಸಲ್ಲದ
ಆರೋಪಗಳನ್ನು ಮಾಡಿ ನಟ ಚೇತನ್ ಅಹಿಂಸ ಅವರನ್ನು ಸೇರಿದಂತೆ, ಎಲ್ಲರ ಮೇಲೆ ಪ್ರಕರಣ ದಾಖಲಿಸಿ ತೊಂದರೆ ಮಾಡಿದ್ದಾರೆ ” ಎಂದು ಆರೋಪಿಸಿದರು.

ಆ ವೇಳೆಯಲ್ಲಿ ಚಲನಚಿತ್ರ ನಟ ಹಾಗೂ ಪ್ರಗತಿಪರ ಚಿಂತಕರಾದ ಚೇತನ್ ಅಹಿಂಸಾ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ನೀಡಿದ್ದರು. ಇವರ ಜೊತೆಗೆ ರಾಷ್ಟ್ರೀಯ ಆದಿವಾಸಿ ಒಕ್ಕೂಟದ ವಿಜಯ ಸಿಂಗ್ ರೋನಾಲ್ಡ್ ಡೇವಿಡ್, ಸಿಎನ್ಎಪಿಎ ಹಾಗೂ ಅರಣ್ಯ ಹಕ್ಕುಗಳ ಕಾಯಿದೆ ಸಲಹೆಗಾರ ರಾಜಾರಾಮನ್, ಮಕ್ತೂಬ್ ಮಾಧ್ಯಮ ಸಂಸ್ಥೆಯ ಪತ್ರಕರ್ತೆ ನಿಕಿತಾ ಜೈನ್, ಹಾಗೂ ಸಾರ್ತಾಜ್ ಅಲಿ ಬರ್ಕಾತ್ ಇವರುಗಳಿಗೆ ನಾಗರಹೊಳೆ ಎಸಿಎಫ್ ನೊಟೀಸ್ ನೀಡಿ ಆಗಸ್ಟ್. 8 ರಂದು ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿರುತ್ತಾರೆ.

ನಾಗರಹೊಳೆ ವನ್ಯಜೀವಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಿಂದ ವನ್ಯಜೀವಿ (ರಕ್ಷಣೆ) ಕಾಯ್ದೆ 1972 ರ ಸೆಕ್ಷನ್ 50(8) ರ ಅಡಿಯಲ್ಲಿ ದಿನಾಂಕ-06-05-2025 ರಂದು ಬಾಳೆಕಾವು ವಿಭಾಗದ ಅತ್ತೂರು ಕೊಲ್ಲಿ ಅರಣ್ಯ ಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸಿದಕ್ಕಾಗಿ ಮತ್ತು ಸಂರಕ್ಷಿತ ಪ್ರದೇಶದೊಳಗಿನ ಅರಣ್ಯ ಭೂಮಿಯ ಅಕ್ರಮ ಪ್ರವೇಶ ಮತ್ತು ಅತಿಕ್ರಮಣಕ್ಕೆ ಪ್ರಚೋದನೆ ನೀಡಿದಕ್ಕಾಗಿ ನಿಮ್ಮಗಳ ವಿರುದ್ಧ ವನ್ಯಜೀವಿ ಅಪರಾಧ ಪ್ರಕರಣ ದಾಖಲಿಸಲಾಗಿದೆ.

ವನ್ಯಜೀವಿ (ರಕ್ಷಣೆ) ಕಾಯ್ದೆ 1972 ರ ಸೆಕ್ಷನ್ U/S 27(1) R/W ಸೆಕ್ಷನ್ 2(21),2(24A), 2(26) ಮತ್ತು ಸೆಕ್ಷನ್ 35,50,51 ಮತ್ತು 55 ರ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ ಎಂದು ಮಾಹಿತಿ ಉಲ್ಲೇಖತವಾಗಿದೆ. ಪ್ರಕರಣ ಸಂಖ್ಯೆ: WLOR-02/2025-26. ದಿನಾಂಕ-07-05-2025 ಆಗಿರುತ್ತದೆ.

ರಾಷ್ಟ್ರೀಯ ಆದಿವಾಸಿ ಒಕ್ಕೂಟದ ವಿಜಯ ಸಿಂಗ್ ರೋನಾಲ್ಡ್ ಡೇವಿಡ್ ಅವರು ಈದಿನ. ಕಾಮ್ ಜೊತೆ ಮಾತನಾಡಿ ” ನಾವುಗಳು ಊರು ಬಿಟ್ಟು ಎಲ್ಲಿಯೂ ಹೋಗಿಲ್ಲ. ಹೋಗುವವರು ಅಲ್ಲ. ನಾವು ಇವತ್ತಲ್ಲ ಹಲವು ದಶಕಗಳಿಂದ ಆದಿವಾಸಿಗಳ ಜೊತೆ ಕೆಲಸ ಮಾಡುತ್ತಾ ಇರುವವರು. ಈಗ ನಾಗರಹೊಳೆ ಅರಣ್ಯ ಇಲಾಖೆ ಅಧಿಕಾರಿಗಳು ಅತಿಕ್ರಮ ಪ್ರವೇಶ ಮಾಡಿದ್ದೀರಿ ಅಂತ ನಮ್ಮ ಮೇಲೆ ಪ್ರಕರಣ ದಾಖಲು ಮಾಡಿದ್ದರು. ನಾವುಗಳು ನಿರೀಕ್ಷಣಾ ಜಾಮೀನು ಪಡೆದಿದ್ದೇವೆ. ನಾಳೆ (ಆಗಸ್ಟ್. 8) ಎಸಿಎಫ್ ಅವರ ಮುಂದೆ ವಿಚಾರಣೆಗೆ ಹಾಜರಾಗುತ್ತೇವೆ. “

ಈಗೇನು ಅರಣ್ಯ ಅಧಿಕಾರಿಗಳು ಪ್ರಕರಣ ದಾಖಲಿಸಿ ಕಾಡಿನೊಳಗೆ ಅತಿಕ್ರಮಣ ಪ್ರವೇಶ ಮಾಡಿದ್ದಾರೆ, ಕಾಡಿನೊಳಗೆ ಆದಿವಾಸಿಗಳು ತೆರಳಲು ಪ್ರಚೋದನೆ ನೀಡಿದ್ದಾರೆ ಅಂತೇಳಿ ಸುಳ್ಳು ಮೊಕದ್ದಮೆ ಹೂಡಿದ್ದಾರೆ ಇದು ಖಂಡನಿಯ. ” ಯಾಕಂದ್ರೆ ಆದಿವಾಸಿಗಳು ಕಾಡಿನೊಳಗೆ ಹೋಗಾಗಿತ್ತು. ಅವರು ಬೆಂಬಲ ಕೋರಿದಾಗ ಹೋರಾಟಗಾರರಾಗಿ ನಾವುಗಳು ಅದುವೇ ಅರಣ್ಯ ಇಲಾಖೆ ಅಧಿಕಾರಿಗಳು, ಐಟಿಡಿಪಿ ಅಧಿಕಾರಿಗಳು ಇರಿವಾಗಲೇ ಸ್ಥಳಕ್ಕೆ ಹೋಗಿದ್ದು. ಅದು ಹೇಗೆ ಅತಿಕ್ರಮಣ ಪ್ರವೇಶ ಆಗುತ್ತೆ. ನಾವು ಕಾಡಿನೊಳಗೆ ಹೋಗಿ ಪ್ರಾಣಿ ಬೇಟೆ, ಮರಗಳ್ಳತನ ಇನ್ನಿತರೇ ಯಾವುದೇ ಕಾನೂನು ಬಾಹಿರ ಕೆಲಸ ಮಾಡಿದ್ದರೆ ಅದನ್ನ ಒಪ್ಪಬಹುದಿತ್ತೇನೋ. ಆದರೇ, ನಾವು ಪ್ರತಿಭಟನಾಕಾರರ ಬೆಂಬಲಕ್ಕೆ ತೆರಳಿದ್ದವರು. “

ಈ ಸುದ್ದಿ ಓದಿದ್ದೀರಾ? ಮೈಸೂರು | ಪ್ರತಾಪ್ ಸಿಂಹ ಇತಿಹಾಸ ಗೊತ್ತಿರದ ಮೂರ್ಖ ವ್ಯಕ್ತಿ : ಅಬ್ದುಲ್ ಮಜೀದ್

ಈಗ ನಮ್ಮಗಳ ಮೇಲೆ ವಿನಾಕಾರಣ ಇಲ್ಲಸಲ್ಲದ ಆರೋಪ ಹೊರಿಸಲಾಗಿದೆ. ನಾಳೆಯ ವಿಚಾರಣೆಗೆ ಹಾಜರಾಗಿ ಅವರ ಪ್ರಶ್ನೆಗಳಿಗೆ ಉತ್ತರ ನೀಡುತ್ತೇವೆ. ನಾವುಗಳು ಇವತ್ತಿಗೂ, ನಾಳೆಗೂ ಆದಿವಾಸಿ ಬುಡಕಟ್ಟು ಜನರ ಪರವಾಗಿ ಕೆಲಸ ಮಾಡುತ್ತೇವೆ, ಅವರ ಹಕ್ಕುಗಳಿಗೆ ಹೋರಾಟ ಮಾಡುತ್ತೇವೆ ” ಎಂದು ಹೇಳಿದರು.

WhatsApp Image 2025 02 05 at 18.09.20
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಬಳ್ಳಾಪುರ | ದೇಶದಲ್ಲೇ ಮೊದಲ ಬಾರಿಗೆ AI ತಂತ್ರಜ್ಞಾನದಿಂದ ಸೇವೆ ನೀಡಲು ಮುಂದಾದ ಜಿಲ್ಲಾ ಪೊಲೀಸ್

ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಂಡು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ...

ಬಾಗೇಪಲ್ಲಿ | ಡಿ.ದೇವರಾಜ ಅರಸುರವರ ಆಶಯ, ಚಿಂತನೆಗಳು ಇಂದಿಗೂ ಮಾದರಿ: ತಹಶೀಲ್ದಾರ್ ಮನೀಷ್ ಎನ್ ಪತ್ರಿ

ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಆಶಯಗಳು, ಚಿಂತನೆಗಳು ಇಂದಿಗೂ ಮಾದರಿಯಾಗಿವೆ....

ಮಂಡ್ಯ | ಹಿಂದುಳಿದ ಸಮುದಾಯದವರ ಬದುಕು ಕಟ್ಟಿಕೊಡಲು ಶ್ರಮಿಸಿದ ಮಹಾನ್ ನಾಯಕ ಡಿ.ದೇವರಾಜ ಅರಸು: ಜಿಲ್ಲಾಧಿಕಾರಿ ಡಾ.ಕುಮಾರ

ಸಾಮಾಜಿಕವಾಗಿ ಹಿಂದುಳಿದ ಎಲ್ಲ ಸಮುದಾಯದ ಜನರಿಗೆ ಬದುಕು ಕಟ್ಟಿಕೊಡಲು ಶ್ರಮಿಸಿದ ಮಹಾನ್...

ಚಿಂತಾಮಣಿ | ವಿಶೇಷಚೇತನರಿಗೆ ಶೇ.5ರಷ್ಟೂ ಮೀಸಲಾಗದ ಅನುದಾನ; ಎಲ್ಲಿಯೂ ಕಾಣದ ರ್‍ಯಾಂಪ್‌ ವ್ಯವಸ್ಥೆ

ವಿಶೇಷಚೇತನರಿಗೆ ಅನುಕಂಪ ಬೇಡ. ಅವರಿಗೆ ಅವಕಾಶಗಳನ್ನು ರೂಪಿಸಿ ಎನ್ನುವುದು ಕೇವಲ ಬಾಯಿ...

Download Eedina App Android / iOS

X