ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ತಾಲ್ಲೂಕು, ಬೊಮ್ಮಲಾಪುರ ಗ್ರಾಮ ವ್ಯಾಪ್ತಿಯಲ್ಲಿ ಹುಲಿ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ಹುಲಿ ಹಿಡಿಯಲು ಬೋನಿರಿಸಿದ್ದರು. ಇದುವರೆಗೆ ಹುಲಿ ಸೆರೆ ಹಿಡಿಯಲಿಲ್ಲ ಎನ್ನುವ ಕಾರಣಕ್ಕೆ ಗ್ರಾಮಸ್ಥರು ಅರಣ್ಯ ಸಿಬ್ಬಂದಿಗಳನ್ನು ಬೋನಿನಲ್ಲಿ ಕೂಡಿಟ್ಟ ಘಟನೆ ವರದಿಯಾಗಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಹುಲಿ ಉಪಟಳ ಹೆಚ್ಚಿದೆ. ಕಾಡಂಚಿನ ಗ್ರಾಮಗಳಲ್ಲಿ ಆಗಿಂದಾಗ್ಗೆ ಹುಲಿ ಕಾಣಿಸಿಕೊಳ್ಳುತ್ತಿರುವುದು ಗ್ರಾಮಸ್ಥರಿಗೆ ಭಯದ ವಾತಾವರಣ ಸೃಷ್ಟಿಸಿದೆ. ಇದೇ ಕಾರಣಕ್ಕೆ ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದು ಹುಲಿ ಹಿಡಿಯುವಂತೆ ಒತ್ತಾಯಿಸಿದ್ದರು.

ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ಇಲಾಖೆಯವರು ಬೊಮ್ಮಲಾಪುರ ಗ್ರಾಮದಲ್ಲಿ ಹುಲಿ ಹಿಡಿಯಲು ಬೋನು ಇರಿಸಿದ್ದರು. ಆದರೇ, ಹುಲಿ ಬೋನಿಗೆ ಬಿದ್ದಿರಲಿಲ್ಲ. ಇದರಿಂದ ಹತಾಶರಾಗಿದ್ದ ಗ್ರಾಮಸ್ಥರು ಗ್ರಾಮಕ್ಕೆ ಬಂದ ಅರಣ್ಯ ಸಿಬ್ಬಂದಿಗಳನ್ನು ಹುಲಿಗಿಟ್ಟ ಬೋನಿನಲ್ಲಿ ಕೂಡಿ ಹಾಕಿದ್ದಾರೆ.
ಡಿ ಆರ್ ಎಫ್ ಓ ಶಿವಕುಮಾರ್ ಅವರು ಈದಿನ.ಕಾಮ್ ಜೊತೆ ಮಾತನಾಡಿ ಬೊಮ್ಮಲಾಪುರ ಗ್ರಾಮದಲ್ಲಿ ಗ್ರಾಮಸ್ಥರು ಅರಣ್ಯ ಸಿಬ್ಬಂದಿಗಳನ್ನು ಹುಲಿ ಬೋನಿನಲ್ಲಿ ಕೊಡಿಟ್ಟಿದ್ದು ವಿಷಾಧನಿಯ. ಅರಣ್ಯ ಇಲಾಖೆ ಗ್ರಾಮಸ್ಥರ ಒತ್ತಾಯದ ಅನುಸಾರ ಹತ್ತು ಕಡೆ ಸಿಸಿ ಟಿವಿ ಇರಿಸಿ ಹುಲಿ ಪತ್ತೆಗೆ ಪ್ರಯತ್ನಿಸಲಾಗುತ್ತಿದೆ. ಅದಲ್ಲದೇ, ದ್ರೋಣ್ ಮೂಲಕವು ಪತ್ತೇಗಾಗಿ ಪ್ರಯತ್ನಿಸುತ್ತಿದ್ದು ಇದುವರೆಗೆ ಹುಲಿ ಕಂಡು ಬಂದಿಲ್ಲ. ಪ್ರತಿ ದಿನ ಅಲ್ಲದಿದ್ದರೂ ಹುಲಿ ಕಂಡು ಬಂದ ಮಾಹಿತಿ ಅನುಸರಿಸಿ ಕೂಂಬಿಂಗ್ ನಡೆಸಲಾಗುತ್ತಿದ್ದರು ಹುಲಿ ಪತ್ತೆಯಾಗಿಲ್ಲ.
ವಿಡಿಯೋ ವೀಕ್ಷಿಸಿ : https://x.com/eedinanews/status/1965349342564524524?t=9SsKvJq-EfWZ9jxVeVPdEg&s=19

ಇಂದು ಸಹ ಆನೆ ಕರಿಸಲಾಗಿತ್ತು. ಆದರೇ, ಗ್ರಾಮಸ್ಥರು ಗ್ರಾಮಕ್ಕೆ ತೆರಳಿದ್ದ ಅರಣ್ಯ ಇಲಾಖೆ ಸಿಬ್ಬಂದಿಯವರನ್ನೆಲ್ಲ ಅದೇ ಬೋನಿನಲ್ಲಿ ಕೂಡಿ ಹಾಕಿದ್ದು ಸರಿಯಲ್ಲ. ಮೇಲಾಧಿಕಾರಿಗಳ ಜೊತೆ ಚರ್ಚಿಸಿ ಪ್ರಕರಣದ ಕುರಿತಾಗಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.