“ಭಗತ್ ಸಿಂಗ್ ಒಬ್ಬ ವ್ಯಕ್ತಿ ಅಷ್ಟೇ ಅಲ್ಲ, ಚಿಂತನೆ, ಕ್ರಾಂತಿ. ಅನ್ಯಾಯ ಅಸಮಾಧಾನ ಹಾಗೂ ಬ್ರಿಟಿಷರ ವಿರುದ್ದ ಹೋರಾಟ ಮಾಡಿ 23ನೇ ವಯಸ್ಸಿಗೆ ಪ್ರಾಣ ತ್ಯಾಗ ಮಾಡಿದನು” ಎಂದು ಟೀಚರ್ ಪತ್ರಿಕೆಯ ಉಪ ಸಂಪಾದಕ ಎಫ್ ಸಿ ಚೇಗರೆಡ್ಡಿ ಅವರು ಹೇಳಿದರು.
ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಸವಡಿ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಯುವ ವೇದಿಕೆ ವತಿಯಿಂದ ಭಗತ್ ಸಿಂಗ್ ಅವರ 118ನೇ ಜನ್ಮದಿನದ ಅಂಗವಾಗಿ ರಕ್ತದಾನ ಶಿಬಿರ ಹಾಗೂ ಶೋಭಯಾತ್ರೆಯಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
“ಭಗತ್ ಸಿಂಗ್ ಅವರ ತಂದೆ ಜೀವ ವಿಮಾ ಕಂಪನಿಯಲ್ಲಿ ಏಜೆಂಟರಾಗಿ ವೃತ್ತಿ ಮಾಡುತ್ತಿದ್ದ ತಂದೆ ಕಿಶನ್ ಸಿಂಗ್ ಕಿಶನ್ ಸಿಂಗ್ , ತಾಯಿ ವಿದ್ಯಾವತಿ, ಚಿಕ್ಕಪ್ಪ ಅಜಿತ್ ಸಿಂಗ್ ರವರ ಪ್ರಭಾವ ಆಗಿತ್ತು. ಚಿಕ್ಕಪ್ಪ ರೈತರನ್ನು, ಕಾರ್ಮಿಕರನ್ನು ಕಟ್ಟಿಕೊಂಡು ಚಳುವಳಿ ಮಾಡಿ ಬಂಧನಕ್ಕೆ ಒಳಗಾಗಿದ್ದರು. ಅವರ ಇಡೀ ಕುಟುಂಬವೇ ಚಳುವಳಿಯಲ್ಲಿ ತೊಡಗಿಸಿಕೊಂಡಿತ್ತು. ಅಂತಹ ಕುಟುಂಬದಲ್ಲಿ ಭಗತ್ ಸಿಂಗ್ ಜನಿಸಿದರು” ಎಂದು ಹೇಳಿದರು.
“ಬಾಲ್ಯದಲ್ಲಿಯೇ ಕ್ರಾಂತಿಯ ಕಿಡಿ ಹೊತ್ತಿತ್ತು. ಅಮೃತಸರದ ಜಲಿಯನ್ ವಾಲಾಬಾಗ 1919 ಏಪ್ರಿಲ್ 13 ಹತ್ಯಾಕಾಂಡ ನಡೆದಾಗ ಭಗತ್ ಸಿಂಗ್ ಹನ್ನೆರಡು ವಯಸ್ಸು. ವೈಸಾಕಿ ದಿನದಂದು ಗಾರ್ಡನಲ್ಲಿ ಸಭೆ ನಡೆದಿತ್ತು. ಅಲ್ಲಿ ಮಹಿಳೆಯರು, ಮಕ್ಕಳು ಎಲ್ಲರೂ ಸೇರಿದ್ದರು. ಅಲ್ಲಿಯೇ ನಾಯಕರು ರೌಲಟ್ ಕಾಯ್ದೆಯನ್ನು ವಿರೋಧಿಸಿ ಸಭೆ ಸೇರಿದ್ದರು. ರೌಲಟ್ ಕಾಯ್ದೆ ಏನು ಹೇಳುತ್ತೆ ಅಂದರೆ, ‘ಭಾರತದಲ್ಲಿ ನಡೆಯುವ ಯಾವುದೇ ಚಳುವಳಿಯಲ್ಲಿ ಭಾಗವಹಿಸಿದವರನ್ನು ಯಾವುದೇ ವಿಚಾರ ಇಲ್ಲದೇ, ಆಪಾದನೆ ಇಲ್ಲದೇ ಬಂದಿಸುವ ಕಾಯ್ದೆ ಆಗಿತ್ತು. ಅಲ್ಲಿರುವ ಜನರ ಮೇಲೆ ಪೊಲೀಸ್ ಅಧಿಕಾರಿ ಡಯರ್ ಬ್ರಿಟಿಷ್ ಸೈನಿಕರು ಕರೆದುಕೊಂಡು ಸುತ್ತಲೂ ನಿಂತಿದ್ದರು. ಜನರ ಮೇಲೆ ಗೋಲಿಬಾರ್ ಮಾಡಿದರು. ಅದರಲ್ಲಿ ಮಹಿಳೆಯರು, ಮಕ್ಕಳು ಎಷ್ಟೋ ಜನರು ಸತ್ತರು. ಈ ಘಟನೆ ಹನ್ನೆರಡು ವರ್ಷದ ಭಗತ್ ಸಿಂಗ್ ಮೇಲೆ ಪ್ರಭಾವ ಬೀರಿತು. ರಕ್ತಸಿಕ್ತ ಮಣ್ಣನ್ನು ಹುಸಿಗೋಳಿಸಲು ನಾನು ಬಿಡುವುದಿಲ್ಲ”ವೆಂದು ಪ್ರತಿಜ್ಞೆ ಮಾಡಿದನು” ಘಟನೆಯನ್ನು ಹೇಳಿದರು.
“ಸೈಮನ್ ಆಯೋಗದಲ್ಲಿ ಭಾರತದ ಯಾವ ಪ್ರಜೆಯು ಇರಲಿಲ್ಲ. ಇದನ್ನು ಇಡೀ ಭಾರತವೇ ‘ಸೈಮನ್ ಗೋ ಬ್ಯಾಕ್’ ಎಂದು ವಿರೋಧ ಮಾಡಿ ಪ್ರತಿಭಟನೆ ನಡೆಸಿತು. ನಂತರ ಅನೇಕ ಚಳುವಳಿಗಳು ನಡೆದವು. 1929 ಆಗಸ್ಟ್ 8ರಂದು ಭಗತ್ ಸಿಂಗ್, ಬಠುಕೇಶ್ವರ ದತ್, ಚಂದ್ರಶೇಖರ ಅಜಾದ್ ಮೂವರು ದೆಹಲಿಯ ಸೇಟ್ರಲ್ ಅಸೆಂಬ್ಲಿಗೆ ಹೋಗಿ ಬಾಂಬ್ ಹಾಕಿ, ಕರಪತ್ರಗಳನ್ನು ಚೆಲ್ಲಿ ಬ್ರಿಟಿಷರನ್ನು ಎಚ್ಚರಿಸುವುದಾಗಿತ್ತು. ಅವರನ್ನು ಬ್ರಿಟಿಷರು ಬಂಧಿಸಿ ಲಾವೋರನ ಜೈಲಿನಲ್ಲಿರಿಸಿದರು. ಅಲ್ಲಿಯೂ ಹೋರಾಟ ನಡೆಸಿದರು. 1931 ಮಾರ್ಚ್ 23ರಂದು ಗಲ್ಲಿಗೇರಿಸುವ ಸಮಯದಲ್ಲಿ” ಎಂದರು.
ಭಗತ್ ಸಿಂಗ್ ಹೇಳ್ತಾನೆ ‘ನಾನು ಯಾವುದೇ ಧರ್ಮಕ್ಕೆ ಸೇರಿಲ್ಲ. ನಾನು ಭಾರತೀಯ. ಕೇವಲ ಬ್ರಿಟಿಷರ ವಿರುದ್ದ ಅಷ್ಟೇ ಹೋರಾಟ ಮಾಡುವುದಲ್ಲ. ಭಾರತದ ಒಳಗೆ ಇರುವ ಅಸಮಾನತೆ, ತಾರತಮ್ಯ, ಲಿಂಗಬೇಧ, ಮೂಢನಂಬಿಕೆ, ಮೇಲು ಕೀಳು, ಅಂಧಕಾರ ಇವೆಲ್ಲದರ ವಿರುದ್ಧವು ಹೋರಾಟ ಮಾಡಬೇಕು. ಸಮಾಸಮಾಜ ನಿರ್ಮಾಣ ಮಾಡಬೇಕೆಂಬುದು ಭಗತ್ ಅವರ ಗುರಿ, ಸಂದೇಶ ಆಗಿತ್ತು. ಅವರ ಗುರಿ ಸಂದೇಶಗಳನ್ನು ಯುವಕರು ಅಳವಡಿಸಿಕೊಳ್ಳಬೇಕು. ಎಂದರು.
ಕಾರ್ಯಕ್ರಮದವನ್ನು ರೋಣ ಪಿಎಸ್ಐ ಪ್ರಕಾಶ ಬಣಕಾರ ಉದ್ಘಾಟಿಸಿ ಮಾತನಾಡಿದರು. ಜಿಮ್ಸ್ ಡಾ. ಮಲ್ಲಿಕಾರ್ಜುನ ಅವರು ರಕ್ತದಾನದ ಕುರಿತು ಮಾತನಾಡಿದರು. ಯುವಕ ಧನಂಜಯ ವೀರಣ್ಣವರ ಪ್ರಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷ ಯಲ್ಲವ್ವ ಯಾಲಿಗಾರ ವಹಿಸಿದ್ದರು. ಅತಿಥಿಗಳು ಮೇಘರಾಜ ಬಾವಿ, ಶ್ರೀಶೈಲ ಇಟಗಿ, ವೈದ್ಯಧಿಕಾರಿ ಡಾ. ಅರವಿಂದ ಕಂಬಳಿ, ಈದಿನ.ಕಾಮ್ ಪತ್ರಕರ್ತರು ಶರಣಪ್ಪ ಸಂಗನಾಳ, ಸಂಗಮೇಶ ಮಣ್ಣೂರು ಉಪಸ್ಥಿತರಿದ್ದರು. ಸಬಿ ಸಿ ಗುಳ್ಳೆದ ಅವರು ನಿರೂಪಿಸಿದರು.