ಗದಗ | ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ರಾಮೇನಹಳ್ಳಿ ಶಾಲೆಯಲ್ಲಿ ಪರಿಸರ ವಚನ ವಾಚನ ಗೋಷ್ಠಿ

Date:

“ಮಕ್ಕಳಲ್ಲಿ ಪರಿಸರ ಕುರಿತು‌ ಅರಿವು ಮೂಡಿಸದಿದ್ದರೆ ಭವಿಷ್ಯದಲ್ಲಿ ಉತ್ತಮ ಪರಿಸರ ನಿರೀಕ್ಷಿಸಲು ಸಾಧ್ಯವಿಲ್ಲ.  ಹಸಿರು ನಮ್ಮೆಲ್ಲರ ಉಸಿರಾಗಬೇಕು. ಶಾಲೆ, ಕಚೇರಿಗಳು, ಸಾರ್ವಜನಿಕ ಸ್ಥಳಗಳಲ್ಲಿ  ಅವಕಾಶವಿರುವಲ್ಲೆಲ್ಲ ಸರಿಗಳನ್ನು ನೆಟ್ಟು ಪೋಷಿಸಿ ಬೆಳೆಸಬೇಕು ಎಂದು” ಕ್ಷೇತ್ರಶಿಕ್ಷಣಾಧಿಕಾರಿ ಎಫ್.ಎಂ. ಫಡ್ನೇಸಿ ‌ಹೇಳಿದರು.

- Advertisement -

ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ  ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಮೇನಹಳ್ಳಿಯ  ಸರ್, ಜಗದೀಶಚಂದ್ರ ಭೋಸ್ ಇಕೋಕ್ಲಬ್ ವತಿಯಿಂದ  ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಡೆದ  ‘ಪರಿಸರ ವಚನ ವಾಚನಗೋಷ್ಟಿ’ಯನ್ನು ಉದ್ಘಾಟಿಸಿ ಮಾತನಾಡಿದರು. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಮೆರಿಕದ ಮಧ್ಯಂತರ ಚುನಾವಣೆ: ಬೆಲೆ ಏರಿಕೆ, ಇರಾನ್ ಯುದ್ಧದ...

ಅಮೆರಿಕದಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆ, ದುಬಾರಿಯಾಗುತ್ತಿರುವ ದಿನಬಳಕೆಯ ವಸ್ತುಗಳು ಹಾಗೂ ಇರಾನ್ ವಿರುದ್ಧದ ಯುದ್ಧದ ಆರ್ಥಿಕ ಪರಿಣಾಮಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ದೊಡ್ಡ ರಾಜಕೀಯ ಸವಾಲಾಗಿವೆ. ನವೆಂಬರ್ 3ರಂದು ನಡೆಯಲಿರುವ ಮಧ್ಯಂತರ...

ಖಾಲಿದ್‌ರಂತೆ ಸಿಜೆಪಿ ನಾಯಕರನ್ನೂ ದೀರ್ಘ ಜೈಲುವಾಸದ ಸುಳಿಯಲ್ಲಿ ಸಿಲುಕಿಸುವ...

ಚುನಾವಣಾ ಆಯೋಗದ ಅಕ್ರಮ ಪ್ರಶ್ನಿಸಿದ ಸಿಜೆಪಿ ನಾಯಕರ ವಿರುದ್ಧ ಸರಣಿ ದೂರು ದಾಖಲಿಸಲಾಗುತ್ತಿದೆ. ಮೋದಿ ಸರ್ಕಾರದ ಅವಧಿಯಲ್ಲಿ ‘ವಿಚಾರಣೆಯೇ ಒಂದು ಶಿಕ್ಷೆ’ ಎನ್ನುವ ತಂತ್ರ ಪುನರಾವರ್ತನೆಯಾಗುತ್ತಿದೆಯೇ? ಉಮರ್‌ ಖಾಲಿದ್‌ ರೀತಿಯಲ್ಲೇ ಸೌರವ್ ದಾಸ್,...

ಎಚ್ಚೆತ್ತುಕೊಳ್ಳುತ್ತಿವೆ DMK, YSRCP; ಡಿಲಿಮಿಟೇಷನ್‌ ಮಸೂದೆ ಮತ್ತೆ ಸೋಲುವ...

ಮೋದಿಯವರ ಅಹಂಕಾರದ ಆಡಳಿತಕ್ಕೆ ದಕ್ಷಿಣ ಭಾರತವು ಎಂದಿಗೂ ತಲೆಬಾಗುವುದಿಲ್ಲ, ಮತ್ತು ಈ ಬಾರಿಯ ಅವರ ಹತಾಶೆಯ ರಾಜಕೀಯ ಕುತಂತ್ರಗಳು ಅವರ ಪಾಲಿಗೆ ತಿರುಗುಬಾಣವಾಗಿ ದೇಶದ ಪ್ರಜಾಪ್ರಭುತ್ವವು ಗೆಲ್ಲುವುದು ಖಚಿತ ಮಹಿಳಾ ಮೀಸಲಾತಿ ಎಂಬ ಪವಿತ್ರ...

“ಪರಿಸರ ಪ್ರೇಮಿ ಸಿ.ಎಸ್ ಅರಸನಾಳ ಅವರ ರಚನೆಯ ‘ಹಸಿರಿಲ್ಲದೆ ಉಸಿರಿಲ್ಲ’ ಪರಿಸರ ವಚನಗಳ ಕೃತಿಯಿಂದ ಆಯ್ದ ವಚನಗಳನ್ನು ವಾಚಿಸುವ ಮೂಲಕ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಜಾಗೃತಗೊಳಿಸುತ್ತಿರುವುದು ಸ್ತುತ್ಯಾರ್ಹ ಕಾರ್ಯವಾಗಿದ್ದು ಮಕ್ಕಳು ವಚನಗಳಲ್ಲಿ ಪ್ರಸ್ತಾಪಿಸಿದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಆಚರಣೆಯಲ್ಲಿತರಬೇಕು” ಎಂದರು.

ಮುಖ್ಯ ಅತಿಥಿಗಳಾಗಿ ವಚನಕಾರ ಸಿ.ಎಸ್. ಅರಸನಾಳ ಮಾತನಾಡಿ, “ಕಪ್ಪತಗುಡ್ಡ ನಮ್ಮ ಅತ್ಯತ್ತಮ ಪರಿಸರ ತಾಣ. ಈ ತಾಣವನ್ನು ರಕ್ಷಿಸುವತ್ತ ಸದಾ ಜಾಗೃತಿವಹಿಸುವುದು ಅಗತ್ಯ” ಎಂದರು.

“ಈ ವರ್ಷದ ಜಾಗತಿಕ ಘೋಷವಾಕ್ಯದಂತೆ ಸಾಕಷ್ಟು ಅರಣ್ಯ ಬೆಳೆಸಬೇಕು ಹಾಗೂ ಪ್ಲಾಸ್ಟಿಕ್ ಬಳಕೆಯ ಬಗ್ಗೆ ಜಾಗೃತಿವಹಿಸಿ ಬಳಕೆಯನ್ನು ಕಡಿಮೆ ಮಾಡಬೇಕು” ಎಂದರು.

ಪ್ಲಾಸ್ಟಿಕ್ ಬಳಕೆಯಿಂದ ಆಗುವ ಅವಗಡಗಳ ಕುರಿತು, ಬಿಸಿಯಾದ ಆಹಾರವನ್ನು ಪ್ಲಾಸ್ಟಿಕ್ ನಲ್ಲಿ ಹಾಕಿ ಬಳಸದಿರುವ, ಪ್ಲಾಸ್ಟಿಕ್ ಸುಡದಿರುವ ಕುರಿತು ಹಲವು ದೃಷ್ಟಾಂತಗಳೊಂದಿಗೆ ಮಕ್ಕಳಿಗೆ ಮನಮುಟ್ಟುವಂತೆ ತಿಳಿಸಿದರು. 

ಪ್ಲಾಸ್ಟಿಕ್ಚೀಲಗಳ ಬದಲು ಬಟ್ಟೆ ಚೀಲ ಬಳಸುವುದು, ಹೊಟೆಲ್ ನಿಂದ ಪಾರ್ಸಲ್ ತರುವಾಗ ಮನೆಯಿಂದ ಡಬ್ಬ ಒಯ್ಯುವ ಕುರಿತು ಸಲಹೆ ನೀಡಿದರು. ತಾವು ಪರಿಸರದ ಕುರಿತು ಬರೆದ ವಚನಗಳನ್ನು ವಾಚಿಸಿ, ಮಕ್ಕಳು ವಾಚಿಸಿದುದರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. 

ಇನ್ನೋರ್ವ ಅತಿಥಿ ಕ್ಷೇತ್ರಸಂಪನ್ಮೂಲ ಕೇಂದ್ರದ  ಸಮನ್ವಯಾಧಿಕಾರಿ ಗಂಗಾಧರ ಅಣ್ಣಿಗೇರಿ ಮಾತನಾಡಿ, “ಮಕ್ಕಳು ಪರಿಸರದ ಕತೆ, ಕವಿತೆಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ನಾಡಿನ ಹೆಸರಾಂತ ಕವಿಗಳೆಲ್ಲ ಪ್ರಕೃತಿ ಪರಿಸರದ ಕುರಿತು ಕಾವ್ಯ ಕಟ್ಟಿದ್ದಾರೆ, ಕಥೆ ಬರೆದಿದ್ದಾರೆ. ಇಂತ ಸಾಹಿತ್ಯ ಓದಿನೊಂದಿಗೆ ಪರಿಸರ ಸ್ನೇಹಿಯಾಗಿ ಬೆಳೆಯುವಂತೆ ಶಾಲೆಯಲ್ಲಿ ಮಕ್ಕಳಿಗೆ ಮುಕ್ತ ವಾತಾವರಣ ಕಲ್ಪಿಸಿಕೊಟ್ಟಿರುವುದು ಮಕ್ಕಲಿಗೆ  ಸ್ವಯಂ ಕಲಿಕೆಗೆ ದಾರಿಮಾಡಿಕೊಡುತ್ತದೆ” ಎಂದರು. 

ಈ ಸುದ್ದಿ ಓದಿದ್ದೀರಾ? ಧಾರವಾಡ | ಕ್ರೂಸರ್ ವಾಹನ ಮರಕ್ಕೆ ಡಿಕ್ಕಿ; 5 ವರ್ಷದ ಬಾಲಕ ಸೇರಿ ಇಬ್ಬರ ಸಾವು

ವಿದ್ಯಾರ್ಥಿಗಳಾದ ಶ್ರೇಯಾ, ವಿಜಯಾ, ಶಶಿಧರ, ಮಮತಾ, ಅಮೃತಾ, ಯಲ್ಲಮ್ಮ, ಭರತ, ಸುಧಾ, ನಂದಿತಾ, ಶೃತಿ, ಕಾವೆರಿ, ಕುಮಾರಸ್ವಾಮಿ, ಕೊಟ್ರೆಶ್ ಮೊದಲಾದವರು  ಸಿ.ಎಸ್. ಅರಸನಾಳ ಅವರ ಪರಿಸರದ ವಚನಗಳನ್ನು ವಾಚಿಸಿದರು. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಮಹೇಶ ಬಾಗಳಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಮುಖ್ಯೋಪಾಧ್ಯಾಯ ಡಾ. ನಿಂಗು ಸೊಲಗಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಿ.ಎಚ್. ಹಲವಾಗಲಿ, ಶಿವಲೀಲಾ ಅಬ್ಬಿಗೇರಿ ಉಪಸ್ಥಿತರಿದ್ದರು. ಶಿಕ್ಷಕಿ ಶ್ರೀಮತಿ ಪಿ.ಆರ್. ಗಾಡದ ಸ್ವಾಗತಿಸಿದರು. ಪಿ.ಎಂ.ಲಾಂಡೆ  ಕಾರ್ಯಕ್ರಮ ನಿರೂಪಿಸಿದರು. ಎಂ.ಆರ್. ಗುಗ್ಗರಿ ವಂದಿಸಿದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಂಡೀಪುರ ಅರಣ್ಯದಲ್ಲಿ ಹೆಣ್ಣಾನೆ ಕಳೇಬರ ಪತ್ತೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದ ಮಾರಿಕಟ್ಟೆ ಕೆರೆ ಸಮೀಪದ...

ಬಂಡೀಪುರದಲ್ಲಿ ಉರುಳು ಹಾಕಿ ಹುಲಿ ಕೊಂದ ಆರೋಪ: ವ್ಯಕ್ತಿ ಬಂಧನ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಉರುಳು ಹಾಕಿ ಹುಲಿಯನ್ನು ಕೊಂದ ಪ್ರಕರಣಕ್ಕೆ...

ವಿಚಾರವಾದಿಗಳು ಕಂಡ ಗಾಂಧೀ-ಟಿಪ್ಪು ಮತ್ತು ಕೋಮುವಾದಿಗಳ ತಿರುಚುವಿಕೆ!

ಇತಿಹಾಸದ ಕುರಿತು ಪ್ರಶ್ನೆಗಳನ್ನು ಎತ್ತುವುದು ಪ್ರಜಾಪ್ರಭುತ್ವದ ಲಕ್ಷಣ. ಆದರೆ ಪ್ರಶ್ನೆಗಳನ್ನು ಎತ್ತುವ...

ವಿಜಯಪುರ | ಸಾಧಕ ಗಣ್ಯರಿಗೆ ರಾಜ್ಯೋತ್ಸವ ಸನ್ಮಾನದ ಗೌರವ; ಅರ್ಜಿ ಆಹ್ವಾನ

2026 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ನ. 1ರಂದು ವಿಜಯಪುರ...