ಗದಗ | ಧಾರ್ಮಿಕ ಸಾಮರಸ್ಯದ ಬದುಕಿಗೆ ಗದಗ ಜಿಲ್ಲೆಯ ಕೊಡುಗೆ ಅಪಾರ: ಪ್ರೊ ಎಸ್. ಯು. ಸಜ್ಜನಶೆಟ್ಟರ್

Date:

Advertisements

“ಧಾರ್ಮಿಕ ಸಾಮರಸ್ಯ ಬದುಕಿಗೆ ಗದಗ ಜಿಲ್ಲೆಯ ಕೊಡೆಗೆ ಅಪಾರ. ಶರಣ ಸಾಹಿತ್ಯ ಚಳುವಳಿಯು ಪ್ರಾಚೀನ ಕಾಲದಿಂದಲೂ ತನ್ನ ಮೌಲ್ಯವನ್ನು ಉಳಿಸಿಕೊಂಡು ಬಂದಿದೆ” ಎಂದು ಪ್ರೊ. ಎಸ್. ಯು. ಸಜ್ಜನಶೆಟ್ಟರ್ ಹೇಳಿದರು.

ಗದಗ ಪಟ್ಟಣದ ಕೆಎಲ್ಇ ಸಂಸ್ಥೆಯ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯದ ಕನ್ನಡ ವಿಭಾಗ ಹಾಗೂ ಡಾ. ಎಂ ಎಂ ಕಲಬುರ್ಗಿ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಶರಣ ಸಾಹಿತ್ಯದ ಕುರಿತು ಏಳು ಸರಣಿ ಉಪನ್ಯಾಸವನ್ನು ಆಯೋಜಿಸಲಾಗಿದ್ದು, ಗದಗ ಜಿಲ್ಲೆಯ ಶರಣರ ಸಾಹಿತ್ಯದಲ್ಲಿ ಧಾರ್ಮಿಕ ಸಾಮರಸ್ಯದ ಕೊಡುಗೆಗಳು ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.

“ಗದಗನಲ್ಲಿ ಪ್ರಮುಖ ನಾಲ್ಕು ವಚನಕಾರರು ಬರುತ್ತಾರೆ. ರಜಗನ್ನ, ಮುಕ್ತಾಯಕ್ಕ ಜಿಲ್ಲೆಯ ಲಕ್ಕಂಡಿ ಗ್ರಾಮದವರು. ಲಕ್ಷ್ಮೇಶ್ವರದ ಆದಯ್ಯ ಮತ್ತು ಅರವಣಿಗೆ ಅಣ್ಣಯ್ಯ. ಅಜಗಣ್ಣ ಮಹಾತತ್ವಜ್ಞಾನಿ, ಕಾಯಕಯೋಗಿ, ಅನನ್ಯ ಶಿವಭಕ್ತ, ಶ್ರೇಷ್ಠ ವಚನಕಾರ. ಮುಕ್ತಾಯಕ್ಕನ ಅಣ್ಣ ಅಜಗಣ್ಣ ಆಗಿದ್ದನು. ವಿಪರ್ಯಾಸವೆಂದರೆ ಈವರೆವಿಗೂ ಅಜಗಣ್ಣನ ಒಂದೇ ಒಂದು ವಚನವೂ ಸಿಕ್ಕಿಲ್ಲ. ಆದರೆ ಮಹಾಜ್ಞಾನಿಯಾದ ಚೆನ್ನಬಸವಣ್ಣನ ವಚನವೂಂದು ಅಜಗಣ್ಣನ ವ್ಯಕ್ತಿತ್ವದ ಮಹಿಮೆಯನ್ನು ಸಾರುತ್ತದೆ.

ಆದ್ಯರ ಅರವತ್ತು ವಚನಕ್ಕೆ

ದಣ್ಣಾಯಕರ ಇಪ್ಪತ್ತು ವಚನ

ದಣ್ಣಾಯಕರ ಇಪ್ಪತ್ತು ವಚನಕ್ಕೆ

ಪ್ರಭುದೇವರ ಹತ್ತು ವಚನ

ಪ್ರಭುದೇವರ ಹತ್ತು ವಚನಕ್ಕೆ

ಅಜಗಣ್ಣನ ಐದು ವಚನ

ಅಜಗಣ್ಣನ ಐದು ವಚನಕ್ಕೆ

ಕೂಡಲ ಚೆನ್ನಸಂಗಯ್ಯನಲ್ಲಿ

ಮಹಾದೇವಿಯಕ್ಕಗಳ ಒಂಸು ವಚನ

ನಿರ್ವಚನ ಕಾಣಾ ಸಿದ್ದರಾಮಯ್ಯಾ 

ಈ ವಚನದ ಮೂಲಕ ನಮ್ಮ ಪರಿಸರದಲ್ಲಿ ಬದುಕಿದ ಅಜಗನ್ನ ಮುಕ್ತಾಯಕರು ಶರಣ ಸಾಹಿತ್ಯ ಪರಂಪರೆಯಲ್ಲಿ ಎಷ್ಟು ಮಹತ್ವದ ಸ್ಥಾನವನ್ನು ಪಡೆದಿದ್ದರೂ ಎಂಬುದು ತಿಳಿದು ಬರುತ್ತದೆ” ಎಂದರು.

“ಗದಗ ಜಿಲ್ಲೆ ಶರಣ ಸಾಹಿತ್ಯ ಚಳುವಳಿಯ ಪ್ರಮುಖ ಕೇಂದ್ರವಾಗಿ, ಧಾರ್ಮಿಕ ಸಾಮರಸ್ಯದಿಂದ ಬದುಕವ ಪ್ರದೇಶವಾಗಿ ಪ್ರಾಚೀನ ಕಾಲದಿಂದಲೂ ತನ್ನ ಮೌಲ್ಯವನ್ನು ಉಳಿಸಿಕೊಂಡು ಬಂದಿದೆ” ಎಂದು ವಿದ್ಯಾರ್ಥಿಗಳನ್ನು ಉಪದೇಶಿಸಿ ಉಪನ್ಯಾಸ ನೀಡಿದರು. 

“ಸಾಹಿತ್ಯ ಚರಿತ್ರೆಯಲ್ಲಿ ಬರುವ ಅತಿ ಹೆಚ್ಚು ಕವಿಗಳ ಬದುಕಿದ ಪರಿಸರ ನಮ್ಮದಾಗಿದೆ. ಪಂಪನಿಂದ ಹಿಡಿದು ಕುಮಾರ ವ್ಯಾಸರ ಆದಿಯಾಗಿ ಮೊದಲಾದ ಶ್ರೇಷ್ಠ ಕವಿಗಳೆಲ್ಲರೂ ಬದುಕಿದ್ದು ಇದೇ ನೆಲದಲ್ಲಿ. ಸಾಹಿತ್ಯದ ಹಾಗೂ ಮೌಲಿಕ ಬದುಕಿನ ಜೊತೆಗೆ ಸಾಂಸ್ಕೃತಿಕ ಅಂಶಗಳು ಇಲ್ಲಿ ವಿಶೇಷವಾಗಿ ಕಂಡುಬರುತ್ತದೆ. ಇಂತಹ ಶರಣ ಸಂಸ್ಕೃತಿಯನ್ನು ಹೊಂದಿರುವ ನಮ್ಮ ಪರಿಸರ ಇಂದಿನ ಯುವ ಪೀಳಿಗೆಯು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಹೋಗಬೇಕು” ಎಂದು ಕಿವಿಮಾತು ಹೇಳಿದರು.

ಉಪನ್ಯಾಸದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರು ಪ್ರೊ. ಜಿ ವಿಶ್ವನಾಥ್ ಪ್ರಸ್ತಾವಿಕ ನುಡಿಗಳನ್ನಾಡಿದರು. ವಿಭಾಗದ ಸಹಾಯಕ ಪ್ರಾಧ್ಯಾಪಕರು ಡಾ ನಾಗರಾಜ ವೀ ಬಳಿಗೇರ ವಂದನಾರ್ಪಣೆ ನೆರವೇರಿಸಿ ಕೊಟ್ಟರು. ಉಪನ್ಯಾಸಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಜೆಪಿಯ ಆತ್ಮವಂಚನೆ ಪ್ರತಿಭಟನೆಗಳು ಕಲಬುರಗಿಗೆ ಅಗತ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

ಧಾರವಾಡ | ಹಿಂದುಳಿದ ವರ್ಗಗಳ ಸಮೀಕ್ಷೆ; ಸಬ್‌ಜೈಲ್ ಸುತ್ತ ಪ್ರದೇಶಗಳಲ್ಲಿ ನೆಟವರ್ಕ್ ಸಮಸ್ಯೆ

ಧಾರವಾಡ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿಯಲ್ಲಿದ್ದು,...

ವಿಜಯಪುರ | ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಶಂಕರಗೌಡ ಸೋಮನಾಳ

ಪರಿಸರಕ್ಕೆ ಹಾನಿ ಮಾಡದಂತಹ ತಂತ್ರಜ್ಞಾನಗಳನ್ನು ನಾವು ಪ್ರೋತ್ಸಾಹಿಸಬೇಕು. ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ...

ಕೆಸಿ ವ್ಯಾಲಿ ಅಧಿಕಾರಿಗಳ ನಿರ್ಲಕ್ಷ್ಯ ರೈತರ ತೋಟಗಳಿಗೆ ನುಗ್ಗಿದ ನೀರು, ಲಕ್ಷಾಂತರ ರೂ ಬೆಳೆ ನಷ್ಟ

ಕೋಲಾರ: ಕೆ.ಸಿ ವ್ಯಾಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ರೈತರು ಬೀದಿಗೆ...

Download Eedina App Android / iOS

X