ಗದಗ | ಕರ್ನಾಟಕ ದೇವದಾಸಿ ಪದ್ಧತಿ ತಡೆ ಮಸೂದೆ – 2025: ಸ್ವಾಗತಾರ್ಹ ಜಿಲ್ಲಾ ಸಮಿತಿ

Date:

“ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಹಕ್ಕು ಅಭಿವೃದ್ಧಿ ಇಲಾಖೆಯ ಮುತುವರ್ಜಿಯಿಂದ, ರಾಜ್ಯದಲ್ಲಿ ಸಾಮಾಜಿಕ ದೌರ್ಜನ್ಯದ ದೇವದಾಸಿ ಪದ್ಧತಿ ನಿರ್ಮೂಲನೆ ಮಾಡುವ ಮತ್ತು ದೇವದಾಸಿ ಮಹಿಳೆಯರ ಮಕ್ಕಳ ತಂದೆಯನ್ನು ಗುರುತಿಸುವ ಹಕ್ಕು ಸೇರಿದಂತೆ ಸಮಗ್ರ ಪುನರ್ವಸತಿ ಕಲ್ಪಿಸುವ ಕರ್ನಾಟಕ ದೇವದಾಸಿ ಪದ್ಧತಿ (ತಡೆಗಟ್ಟುವಿಕೆ, ನಿಷೇಧ, ಪರಿಹಾರ ಮತ್ತು ಪುನರ್ವಸತಿ) ಮಸೂದೆ – 2025 ಸ್ವಾಗತ” ಎಂದು ವಿಮೋಚನಾ ಸಂಘ ಗೌರವಧ್ಯಕ್ಷ ಬಾಲು ರಾಠೋಡ ಹೇಳಿದರು.

- Advertisement -

ಗದಗ ಜಿಲ್ಲೆಯಲ್ಲಿ ಗಜೇಂದ್ರಗಡ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಹಾಗು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಹೋರಾಟ ಸಮಿತಿಗಳ ಗದಗ ಜಿಲ್ಲಾ ಸಮಿತಿ ಗೌರವಧ್ಯಕ್ಷ ಬಾಲು ರಾಠೋಡ ಪತ್ರಿಕಾ ಹೇಳಿಕೆ ನೀಡಿದರು 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಾಲಿವುಡ್‌ ಮೇಲೆ ಭೂಗತ ಲೋಕದ ಕರಿನೆರಳು: ದಾವೂದ್ ಇಬ್ರಾಹಿಂನಿಂದ...

ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾಗಳಿಗೆ ಹಣ ಹೂಡುತ್ತಿದ್ದ, ನಟ-ನಟಿಯರ ವೃತ್ತಿಜೀವನದ ಮೇಲೆ ಪ್ರಭಾವ ಬೀರುತ್ತಿದ್ದ ಭೂಗತ ಲೋಕ, ಈಗ ಗುಂಡಿನ ದಾಳಿ ಮತ್ತು ಜೀವಬೆದರಿಕೆಗಳ ಮೂಲಕ ಮತ್ತೊಮ್ಮೆ ತನ್ನ ಅಸ್ತಿತ್ವ ಪ್ರದರ್ಶಿಸುತ್ತಿದೆ. ದಾವೂದ್...

ಲೋಕಸಭೆಯ ಬಲ 850ಕ್ಕೆ ಏರಿಕೆ: ಕಲಾಪದ ಸಮಯ ಹೆಚ್ಚಳವಿಲ್ಲದಿದ್ದರೆ...

ಲೋಕಸಭೆಯ ಸದಸ್ಯರ ಬಲವನ್ನು 550ರಿಂದ 850ಕ್ಕೆ ಹೆಚ್ಚಿಸುವ ‘ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ–2026’ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. ಜನಸಂಖ್ಯೆಗೆ ಅನುಗುಣವಾಗಿ ಸೀಟುಗಳ ಹೆಚ್ಚಳ ಅನಿವಾರ್ಯವಾದರೂ, ಸಂಸತ್ತಿನ ವಾರ್ಷಿಕ ಕಲಾಪದ ದಿನಗಳು ಮತ್ತು...

ಸೌದಿ ಅರೇಬಿಯಾದ ಕಂಠನಾಳಕ್ಕೇ ಕೈಹಾಕಿರುವ ಯೆಮನ್!

ಸೌದಿ ಅರೇಬಿಯಾದ ಜೀವನಾಡಿಗೇ ಕೈಹಾಕಿರುವ ಯೆಮನ್‌ನ ಈ ಪ್ರತಿರೋಧವು ಕೇವಲ ಒಂದು ಯುದ್ಧದ ಕಥೆಯಲ್ಲ; ಇದು ಮಧ್ಯಪ್ರಾಚ್ಯದ ರಾಜಕೀಯ ಇತಿಹಾಸವನ್ನೇ ಮರುಬರೆಯಬಹುದಾದ ಸಂಘರ್ಷವಾಗಿದೆ. ಅಲ್ಲಿಯವರೆಗೆ, ಯೆಮನ್ ಕೇವಲ ಅರಬ್ ಜಗತ್ತಿಗಷ್ಟೇ ಅಲ್ಲ, ಇಡೀ...

“ಸದರಿ ಕಾಯ್ದೆಯನ್ನು ರೂಪಿಸ ಬೇಕೆಂಬುದು ನಮ್ಮೆರಡು ಸಂಘಗಳ ಬಹು ವರ್ಷಗಳ ಹಕ್ಕೊತ್ತಾಯ ಮತ್ತು ಹೋರಾಟವಾಗಿತ್ತು. 2007 ರಿಂದಲೆ ಈ ಹಕ್ಕೊತ್ತಾಯವನ್ನು ಸರಕಾರದ ಮುಂದೆ ಮಂಡಿಸುತ್ತಾ ಬರಲಾಗಿದೆ. 15 ವರ್ಷಗಳ ಕಾಲ ವಿಳಂಬವಾಗಿಯಾದರೂ ಈ ಮಸೂದೆ ಈಗ ಹೊರಬರುತ್ತಿರುವುದು ಸಂತಸದ ವಿಷಯವಾಗಿದೆ” ಎಂದು ಎರಡು ಸಂಘಗಳು ಹರ್ಷ ವ್ಯಕ್ತಪಡಿಸಿವೆ  ಎಂದರು.

“ಸಾಮಾಜಿಕ ದೌರ್ಜನ್ಯ ಹಾಗು ತಾರತಮ್ಯದ ಭಾಗವಾಗಿ ಬಲವಂತವಾಗಿ ಜಾರಿಯಲ್ಲಿರುವ ಈ ಪದ್ಧತಿಯನ್ನು  ತಡೆಯಲು ಹಾಲಿ ಕಾಯ್ದೆಗಳು ಹಾಗು ಪುನರ್ವಸತಿ ಯೋಜನೆಗಳು ಅಸಮರ್ಪಕವಾಗಿವೆ. ಪರಿಶಿಷ್ಢ ಜಾತಿ ಹಾಗು ಪಂಗಡದ ಕುಟುಂಬಗಳ ಬಾಲಕಿಯರು ಮತ್ತು ದೇವದಾಸಿ ಮಹಿಳೆಯರ ಮಕ್ಕಳು ಈ ದೌರ್ಜನ್ಯಕ್ಕೆ ಬಲಿಯಾಗುವುದನ್ನು ತಡೆಯುವಲ್ಲಿ ಇವು ಪರಿಣಾಮಕಾರಿಯಾಗಿಲ್ಲ ಎಂಬುದನ್ನು ನಮ್ಮ ಸಂಘಗಳು ನಿರಂತರವಾಗಿ ರಾಜ್ಯ ಸರಕಾರದ ಗಮನಕ್ಕೆ ತರುತ್ತಾ  ಬಂದಿವೆ” ಎಂದು ತಿಳಿಸಿದರು.

“ನಮ್ಮ ಹಕ್ಕೊತ್ತಾಯ ಹಾಗು ಬಲವಾದ ಆಂದೋಲನದ ನಂತರವೆ, 2007 ರಲ್ಲಿ ಮತ್ತೊಂದು ಸಮೀಕ್ಷೆ ನಡೆಸಿ 46,650 ಮಹಿಳೆಯರನ್ನು ಗುರುತಿಸಿತಲ್ಲದೆ ಅದರಲ್ಲಿ ಕೇವಲ 24,284 ಜನರಿಗೆ ಮಾತ್ರ ಅಸಮರ್ಪಕ ಪುನರ್ವಸತಿ ಕಲ್ಪಿಸಿದೆ. ಗಣತಿಯಾಚೆ ಇರುವ ಸುಮಾರು 20,000 ಕ್ಕೂ ಅಧಿಕ ಮಹಿಳೆಯರು ಪರಿಗಣನೆಯಲ್ಲಿಲ್ಲ. ಗಣತಿಯಲ್ಲಿ ಉಳಿದ 22,376  ಮಹಿಳೆಯರಿಗೆ ಪುನರ್ವಸತಿ ಒದಗಿಸಲಿಲ್ಲ ! ಹಾಗಿದ್ದರೆ ಇವರೆಲ್ಲ 

ಹೇಗೆ ಬದುಕ ಬೇಕು? ನಾವು ಪ್ರತಿಭಟನೆ ನಡೆಸಿ ಒತ್ತಾಯಿಸದ ನಂತರವೇ ಮಕ್ಕಳ ಮದುವೆಗೆ ಪ್ರೋತ್ಸಾಹ ಧನವನ್ನು ಕಳೆದ 4 ವರ್ಷಗಳಿಂದ ನೀಡಲಾಗುತ್ತಿದೆ” ಎಂದರು.

ಇದುವರೆಗಿನ ಕಾಯ್ದೆಗಳಲ್ಲಿ ಬಲವಂತದ ದೇವದಾಸಿ ಪದ್ಧತಿಯ ಫಲಾನುಭವಿಗಳನ್ನು ಬಂದಿಸದೆ ಕೇವಲ ದೌರ್ಜನ್ಯಕ್ಕೆ ತುತ್ತಾದ ಕುಟುಂಬದವರನ್ನೆ ಬಂದಿಸಲಾಗುತ್ತಿತ್ತು. ಅಷ್ಟೇ ಅಲ್ಲದೇ ಈ ಫಲಾನುಭವಿಗೆ ಯಾವುದೇ ಹೊಣೆಗಾರಿಕೆ ಇರಲಿಲ್ಲ. ಈಗಲೂ ರಾಜ್ಯ ಸರಕಾರ ಸಾಮಾಜಿಕ ದೌರ್ಜನ್ಯಕ್ಕೆ ತುತ್ತಾದ ಎಲ್ಲ ಪರಿಶಿಷ್ಟ ಜಾತಿ ಹಾಗು ಪಂಗಡಗಳ ಎಲ್ಲ ಸದಸ್ಯರ ಗಣತಿ ನಡೆಸಿ ಅವರೆಲ್ಲರ ಸ್ವಾವಲಂಬಿ ಬದುಕಿಗೆ ಪರಿಣಾಮಕಾರಿಯಾದ  ಪುನರ್ವಸತಿಯನ್ನು ಕೈಗೊಳ್ಳುವುದು ದೌರ್ಜನ್ಯದ ದೇವದಾಸಿ ಪದ್ಧತಿ ತಡೆಯಲು ಹಾಗು ಮಸಣ ಕಾರ್ಮಿಕರ ಬಿಟ್ಟಿ ಚಾಕರಿತಡೆಯಲು, ಮತ್ತು ಒಳಚರಂಡಿ, ಮಲಗುಂಡಿ ಶುಚಿ ಕೆಲಸಗಾರರನ್ನು ರಕ್ಷಿಸಲು ಇರುವ ಏಕೈಕ ದಾರಿಯಾಗಿದೆ” ಎಂದು ಹೇಳಿದರು.

“ಈ ಕೂಡಲೆ ಮಸೂದೆಯನ್ನು ಸಾರ್ವಜನಿಕ ಚರ್ಚೆಗೆ ಇಡಬೇಕು ಮತ್ತು ಅಲ್ಲಿನ ಅಭಿಪ್ರಾಯಗಳನ್ನು ಗಮನಿಸಿ, ಮತ್ತಷ್ಠು ವಿಳಂಬವಾಗುವುದನ್ನು ತಪ್ಪಿಸಿ, ಬೇಗನೆ ಕಾಯ್ದೆಯಾಗಿಸಬೇಕು” ಎಂದು ನಮ್ಮೆರಡು ಸಂಘಗಳು ಮನವಿ ಮಾಡುತ್ತವೆ ಎಂದು ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಲಾರ | ನನ್ನ ರಾಜಕೀಯ ಏಳಿಗೆಯಲ್ಲಿ ಮಾಜಿ ಸಚಿವ ಆರ್.ಎಲ್. ಜಾಲಪ್ಪ ಅವರ ಪಾತ್ರ ದೊಡ್ಡದು | ಸಿದ್ದರಾಮಯ್ಯ

ನಗರದ ಶ್ರೀದೇವರಾಜ ಅರಸು ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರ ಹಾಗೂ...

ಚಿಕ್ಕಮಗಳೂರು | ಭೀಕರ ಅಪಘಾತ: ಇಬ್ಬರಿಗೆ ಗಂಭೀರ 

ವಾಹನ ಅಪಘಾತ,ಜೆಸಿಬಿ ಮತ್ತು ಬೈಕ್ ನಡುವೆ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು...

ಬಾಗೇಪಲ್ಲಿ: ಅಂತರರಾಜ್ಯ ಮಟ್ಟದ ಬಹುಭಾಷಾ ದಸರಾ ಕವಿಗೋಷ್ಠಿ

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ಪಟ್ಟಣಕ್ಕೆ ಸಮೀಪದ ಗಡಿದಂ ರಾಜರಾಜೇಶ್ವರಿ...