ಗದಗ | ಗುರುವಿಗೆ ಶರಣಾದರೆ ಜೀವನ ಸಾರ್ಥಕ : ಪ್ರೊ. ಕಸ್ತೂರಿ ದಳವಾಯಿ

Date:

Advertisements

“ತಾಯಿ, ತಂದೆ, ಗುರು ಪ್ರತಿಯೊಬ್ಬರ ಜೀವನದಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತಾರೆ. ಒಳ್ಳೆಯ ಸಂಸ್ಕಾರ ನೀಡಿ, ಮಾನವೀಯ ಮೌಲ್ಯ ತಿಳಿಸುತ್ತಾರೆ. ಈ ಮೂವರನ್ನು ಯಾವಾಗಲೂ ಗೌರವಿಸಬೇಕು. ಗುರುವಿಗೆ ಶರಣಾದರೆ ಜೀವನ ಸಾರ್ಥಕ” ಎಂದು ಪ್ರೊ. ಕಸ್ತೂರಿ ದಳವಾಯಿ ತಿಳಿಸಿದರು.

ಗದಗ ಪಟ್ಟಣದ ಕೆ.ಎಲ್.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಯಾಗಿ ಭಾಗವಹಿಸಿ ಮಾತನಾಡಿದರು.

“ತಮ್ಮ ಮುಂದಿನ ಭವಿಷ್ಯಕ್ಕಾಗಿ ಉತ್ತಮ ಜೀವನ ಮೌಲ್ಯಗಳನ್ನು ತಿಳಿದು ಮೌಲ್ಯಾಧಾರಿತ ಬದುಕು ತಮ್ಮದಾಗಿಸಿಕೊಳ್ಳಬೇಕು. ಹಿರಿಯರಿಗೆ ಗೌರವ ನೀಡುವ, ಅವರ ಹೇಳಿದ ಬುದ್ಧಿ ಮಾತುಗಳನ್ನು ಕೇಳಿ ಕಲಿಯಬೇಕು. ಕಲಿತ ವಿದ್ಯಾಲಯಕ್ಕೂ  ಹೆತ್ತವರಿಗೂ ಕೀರ್ತಿ ತರಬೇಕು” ಎಂದರು.

ಕಲಿಕೆಯು ನಿರಂತರ ಪ್ರಕ್ರಿಯೆಯಾಗಿದ್ದು, ಉತ್ತಮ ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಇದರಿಂದ ಜ್ಞಾನದ ವಿಕಾಸ ಆಗುವುದು. ಶೈಕ್ಷಣಿಕವಾಗಿ ಪದವಿ ಪೂರ್ವ ಹಂತದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಅತ್ಯಂತ ಮಹತ್ವದ ಮತ್ತು ಜೀವನ ತಿರುವಿನ ಘಟ್ಟ. ಈ ಹಂತದಲ್ಲಿ ಸತತ ಅಧ್ಯಯನ ಮಾಡಿ ಉತ್ತಮ ಜ್ಞಾನ ಹಾಗೂ ಅಂಕ ಪಡೆದರೆ ಬದುಕಿಗೊಂದು ಭದ್ರ ಬುನಾದಿ ಹಾಕಿದಂತೆ” ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ರಜನಿ ಪಾಟೀಲ ಮಾತನಾಡಿ, “ಗುಣಮಟ್ಟದ ಶಿಕ್ಷಣ ಎಂದರೆ ಹೆಚ್ಚು ಅಂಕಗಳ್ನು ಪಡೆದು ಉದ್ಯೋಗಕ್ಕೆ ಸೇರುವುದಲ್ಲ. ಬದಲಿಗೆ ಬದುಕಿನಲ್ಲಿ ಮೌಲ್ಯ ಮತ್ತು ಆದರ್ಶಗಳನ್ನು ಕಲಿಯುವುದಾಗಿದೆ. ಆದರೆ ಇಂದಿನ ದಿನಗಳಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಲ್ಲಿ ಮೌಲ್ಯಗಳನ್ನು ಕಾಣಲಾಗುತ್ತಿಲ್ಲ. ನಮ್ಮ ಪೂರ್ವಜರು ಮೌಲ್ಯ ಮತ್ತು ಗೌರವಕ್ಕಾಗಿ ಬದುಕಿದವರು. ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳಲು, ಆದರ್ಶ ಬದುಕನ್ನು ಕಟ್ಟಿಕೊಳ್ಳಲು, ಶಿಸ್ತನ್ನು ರೂಢಿಸಿಕೊಳ್ಳಲು ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆಗಳು ಸಹಕಾರಿಯಾಗಲಿವೆ” ಎಂದು ಹೇಳಿದರು.

“ಅಧ್ಯಾಪಕರು ಕಾಟಾಚಾರಕ್ಕೆ ತರಗತಿಗೆ ಬಂದು ಪಾಠ ಮಾಡಿದರೆ, ವಿದ್ಯಾರ್ಥಿಗಳು ಅವರಿಂದ ಪರಿಣಾಮಕಾರಿ ಬೋಧನೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ಜೀವನ ರೂಪಿಸುವಲ್ಲಿ ಗುರುಗಳ ಮಾರ್ಗದರ್ಶನ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಅಧ್ಯಾಪಕರು ಬೋಧನೆಯನ್ನು ಒಂದು ಕಲೆಯನ್ನಾಗಿ ಮಾಡಿಕೊಳ್ಳಬೇಕು. ತರಗತಿಗಳಲ್ಲಿ ವಿದ್ಯಾರ್ಥಿಗಳನ್ನು ತನ್ನತ್ತ ಆಕರ್ಷಿಸುವ ಮತ್ತು ಸಂವಾದಕ್ಕೆ ಒಳಪಡಿಸುವ ಕೆಲಸಗಳನ್ನು ಮಾಡಬೇಕು” ಎಂದು ಸಲಹೆ ನೀಡಿದರು.

“ಹಿಂದೆ ಶಿಕ್ಷಣ ಪಡೆಯಲು ಯಾವುದೇ ಸೌಲಭ್ಯಗಳು ಇರಲಿಲ್ಲ. ಆದರೆ ಇಂದು ಶಿಕ್ಷಣ ಪಡೆಯಲು ಸಾಕಷ್ಟು ಸೌಲಭ್ಯ ಮತ್ತು ಅವಕಾಶಗಳಿವೆ. ನಮಗೆ ಸಿಕ್ಕಿರುವ ಅವಕಾಶ ಮತ್ತು ಸೌಲಭ್ಯಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡು ಉತ್ತಮ ವಿದ್ಯಾರ್ಥಿಗಳಾಗಬೇಕು. ತರಗತಿಯ ಪಾಠದೊಂದಿಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನಮ್ಮಲ್ಲಿರುವ ಪ್ರತಿಭೆ ಪ್ರದರ್ಶಿಸಬೇಕು. ಇದರ ಜೊತೆಗೆ ವೇದಿಕೆ ಮೇಲೆ ನಿರರ್ಗಳವಾಗಿ ಮಾತನಾಡುವ ಹವ್ಯಾಸವನ್ನು ಬೆಳಸಿಕೊಳ್ಳಬೇಕು” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಹಾಜರಿದ್ದ ಎಲ್ಲರನ್ನು  ಪ್ರಾಚಾರ್ಯರು ಡಾ. ಶ್ರೀಮತಿ ಎ. ಕೆ. ಮಠ ಸ್ವಾಗತಿಸಿದರು. ಡಾ. ವೀಣಾ ಈ ಅತಿಥಿಗಳನ್ನು ಪರಿಚಯಿಸಿದರು.ಕು. ಸೋನಿಯಾ ಘೋಡ್ಕೆ ಮತ್ತು ಕು. ಸಹನಾ ಪ್ರಾರ್ಥಿಸಿದರು. ಕು. ಶೃತಿ ಅಳಗೊಂಡಿ, ಕು. ಸಹನಾ ಹಿರೇಮಠ ನೃತ್ಯ ಕಾರ್ಯಕ್ರಮ ನೀಡಿದರು.  ಕಳೆದ ವರ್ಷ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಡಾ. ವಿಠ್ಠಲ ಕೋಳಿ ವಿದ್ಯಾರ್ಥಿ ಒಕ್ಕೂಟ ಪರಿಚಯಿಸಿದರು. ಕು. ಮೇಘಾ ಮುದ್ದಿ, ಕು. ಗಾಯತ್ರಿ ಮಾದಗುಂಡಿ, ಕು. ಕೀರ್ತಿ ಕಲಬುರ್ಗಿ ಮಹಾವಿದ್ಯಾಲಯದ ಕುರಿತಾಗಿ ತಮ್ಮ ಸಿಹಿ ಅನುಭವಗಳನ್ನು ಹಂಚಿಕೊಂಡರು. ಪ್ರೊ. ವಿಶಾಲ ತೆಳಗಡೆ ವಂದಿಸಿದರು. ಮಹಾವಿದ್ಯಾಲಯದ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಎಲ್ಲ ವಿದ್ಯಾರ್ಥಿ ವೃಂದ ಹಾಜರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಜೆಪಿಯ ಆತ್ಮವಂಚನೆ ಪ್ರತಿಭಟನೆಗಳು ಕಲಬುರಗಿಗೆ ಅಗತ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

ಧಾರವಾಡ | ಹಿಂದುಳಿದ ವರ್ಗಗಳ ಸಮೀಕ್ಷೆ; ಸಬ್‌ಜೈಲ್ ಸುತ್ತ ಪ್ರದೇಶಗಳಲ್ಲಿ ನೆಟವರ್ಕ್ ಸಮಸ್ಯೆ

ಧಾರವಾಡ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿಯಲ್ಲಿದ್ದು,...

ವಿಜಯಪುರ | ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಶಂಕರಗೌಡ ಸೋಮನಾಳ

ಪರಿಸರಕ್ಕೆ ಹಾನಿ ಮಾಡದಂತಹ ತಂತ್ರಜ್ಞಾನಗಳನ್ನು ನಾವು ಪ್ರೋತ್ಸಾಹಿಸಬೇಕು. ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ...

ಕೆಸಿ ವ್ಯಾಲಿ ಅಧಿಕಾರಿಗಳ ನಿರ್ಲಕ್ಷ್ಯ ರೈತರ ತೋಟಗಳಿಗೆ ನುಗ್ಗಿದ ನೀರು, ಲಕ್ಷಾಂತರ ರೂ ಬೆಳೆ ನಷ್ಟ

ಕೋಲಾರ: ಕೆ.ಸಿ ವ್ಯಾಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ರೈತರು ಬೀದಿಗೆ...

Download Eedina App Android / iOS

X