ಗದಗ | ಶತಮಾನ ಕಂಡ ಮುನ್ಸಿಪಲ್ ಪ್ರೌಢಶಾಲೆಯ ದುಃಸ್ಥಿತಿ

Date:

ಗದಗದ ಮುನ್ಸಿಪಲ್ ಪ್ರೌಢಶಾಲೆ ಶತಮಾನಗಳನ್ನು ಕಂಡ ಶಾಲೆ. ಆದರೆ, ಸದ್ಯ ಶಾಲೆಯ ಸ್ಥಿತಿ ಸಂಪೂರ್ಣ ಹದಗೆಟ್ಟಿದ್ದು, ನಗರಸಭೆ ಪಕ್ಕದಲ್ಲಿಯೇ ಇದ್ದರೂ, ಅವರು ಈ ಶಾಲೆ ಕಡೆ ತಿರುಗಿ ನೋಡುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

- Advertisement -

ದಶಕದ ಹಿಂದೆ ಮುನ್ಸಿಪಲ್ ಶಾಲೆ ತುಂಬಾ ಹೆಸರು ಮಾಡಿದ ಶಾಲೆಯಾಗಿತ್ತು. ಆದರೆ, ಈಗ ಈ ಶಾಲೆಗೆ ಬರಲು ಮಕ್ಕಳು ಹಿಂದೇಟು ಹಾಕುತ್ತಿದ್ದಾರೆ. ಶಾಲೆಯಲ್ಲಿ ಮೂಲಸೌಕರ್ಯ ಇಲ್ಲ. ಹದಗೆಟ್ಟ ಕಟ್ಟಡ, ಶಿಕ್ಷಕರ ಕೊರತೆ ಇದ್ದು ಶಾಲೆ ಸಮಸ್ಯೆಗಳ ಆಗರವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ತಿಪಟೂರು | ಕೊಬ್ಬರಿ ವ್ಯಾಪಾರದಲ್ಲಿ ಅಂಡರ್ ಬಿಲ್ಲಿಂಗ್ ಆಟ;...

ತಿಪಟೂರು ಕೊಬ್ಬರಿ ವ್ಯಾಪಾರದಲ್ಲಿ ಅಂಡರ್ ಬಿಲ್ಲಿಂಗ್ ಆಟ ಜೋರಿದೆ. ಟೆಂಡರ್ ದರ ಒಂದಾದರೆ, ಸುತ್ತಮುತ್ತಲಿನ ಮಾರುಕಟ್ಟೆಗಳಲ್ಲಿ ನೇರ ಖರೀದಿ (URD) ಮತ್ತು ರವಾನೆ ಕೊಬ್ಬರಿ ಖರೀದಿಗೆ ಮತ್ತೊಂದು ಬೆಲೆ ನಿಗದಿಯಾಗಿದೆ. ಅಂಡರ್ ಬಿಲ್ಲಿಂಗ್...

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

ದಶಕದ ಹಿಂದೆ ತುಂಬಿ ತುಳುಕುತ್ತಿದ್ದ ಶಾಲೆ, ಈಗ ಮಕ್ಕಳಿಲ್ಲದೇ ಬಿಕೋ ಎನ್ನುತ್ತಿದೆ. ಶತಮಾನ ಕಂಡ ಶಾಲೆಯ ಮೇಲ್ಛಾವಣಿ ಹಾರಿ ಹೋಗಿದೆ. ಯಾವಾಗ ಕುಸಿದು ಬೀಳುತ್ತೋ ಅನ್ನೋ ಸ್ಥಿತಿ ತಲುಪಿದೆ. ಇಂಥ ಹದಗೆಟ್ಟ ಕಟ್ಟಡದಲ್ಲೇ ಬಡ ಮಕ್ಕಳು ಶಿಕ್ಷಣ ಕಲಿಯುತ್ತಿದ್ದಾರೆ. ಶಾಲೆಯ ಮೇಲ್ಚಾವಣಿ ಗಾಳಿ, ಮಳೆ ರಭಸಕ್ಕೆ ಹಾರಿಹೋಗಿ ವರುಷಗಳೇ ಉರುಳಿವೆ. ಇವುಗಳನ್ನು ದುರಸ್ತಿಗೊಳಿಸುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿಲ್ಲ. ವಿದ್ಯಾರ್ಥಿಗಳು ಭಯದಲ್ಲೇ ಪಾಠ ಕೇಳುವಂತಹ ಸ್ಥಿತಿ ಇದೆ.

‘ಮಳೆ ಬಂದರೆ ನಮಗೆ ಪಾಠ ಕೇಳಲು ತುಂಬಾ ತೊಂದರೆ. ನಮ್ಮ ಡ್ರಾಯಿಂಗ್ ಕೊಠಡಿ ಸಂಪೂರ್ಣವಾಗಿ ಹಾಳಾಗಿದೆ. ಕೂಡಲೇ ಸಂಬಂಧಪಟ್ಟವರು ಕಟ್ಟಡವನ್ನು ಸರಿಪಡಿಸಿ ನಮ್ಮ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು’ ಎಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ.

ಪ್ರೌಢಶಾಲೆಗೆ ವಿಶಾಲವಾದ ಮೈದಾನವಿದ್ದರೂ ಅದು ಕುಡುಕರ ಅಡ್ಡೆಯಾಗಿ ಬದಲಾಗಿದೆ. ಇಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.  ಈ ಹಿಂದೆ ಸ್ವಚ್ಛಂದವಾಗಿದ್ದ ಮೈದಾನದಲ್ಲಿ ವಾಯು ವಿಹಾರಕ್ಕೆಂದು ಸಾರ್ವಜನಿಕರು ಆಗಮಿಸುತ್ತಿದ್ದರು. ಸಾಯಂಕಾಲ ವಾಯು ವಿಹಾರಕ್ಕೆ ಬರುವ ಸಾರ್ವಜನಿಕರಿಗೆ ಇತ್ತೀಚಿನ ದಿನಗಳಲ್ಲಿ ಕುಡುಕರ ದರ್ಶನವಾಗುತ್ತಿದ್ದರಿಂದ ವಾಯು ವಿಹಾರಿಗಳ ಸಂಖ್ಯೆಯು ಕಡಿಮೆಯಾಗಿದೆ. ವಿಶಾಲವಾದ ಮೈದಾನದ ಸುತ್ತಲೂ ಗಿಡ-ಗಂಟೆಗಳು ಬೆಳೆದಿವೆ.

‘ನಾವು ಹಲವು ಬಾರಿ ಮನವಿಯನ್ನು ಸಲ್ಲಿಸಿದ್ದೇವೆ. ವ್ಯವಸ್ಥೆ ಸರಿಪಡಿಸುವ ಭರವಸೆಯನ್ನು ಮುನ್ಸಿಪಲ್ ಕಮಿಟಿ ಅಧ್ಯಕ್ಷರು ನೀಡಿದ್ದಾರೆ. ಈ ಹಿಂದಿನ ಅಧ್ಯಕ್ಷರು ದುರಸ್ತಿಗೊಳಿಸುವ ಭರವಸೆ ನೀಡಿದ್ದರು. ಈಗ ಅಧ್ಯಕ್ಷರು ಬದಲಾಗಿದ್ದಾರೆ. ಅವರಿಗೂ ಕೂಡ ಇಲ್ಲಿನ ವ್ಯವಸ್ಥೆಯ ಬಗ್ಗೆ ಮನವರಿಕೆ ಮಾಡಿದ್ದೇವೆ. ಅತೀ ಶೀಘ್ರದಲ್ಲಿ ಮುನ್ಸಿಪಲ್ ಪ್ರೌಢಶಾಲೆಯ ವ್ಯವಸ್ಥೆಯನ್ನು ಸರಿಪಡಿಸುವ ಭರವಸೆ ನೀಡಿದ್ದಾರೆ. ಕಾದು ನೋಡಬೇಕು’ ಎಂದು ಶಾಲೆಯ ಪ್ರಾಚಾರ್ಯ ಎಸ್.ಎಸ್. ಕುಲಕರ್ಣಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

‘ವಾರಕ್ಕೊಮ್ಮೆ ಶಾಲೆಯ ಕಸ ಗುಡಿಸಲಾತ್ತದೆ. ಅದು ಕೂಡ ವಿದ್ಯಾರ್ಥಿಗಳೇ ಕಸ ಗುಡಿಸಬೇಕು. ಇಲ್ಲದಿದ್ದರೆ ಅಡುಗೆ ಸಹಾಯಕರು ಗುಡಿಸಬೇಕು. ಇಂತಹ ಪರಿಸ್ಥಿತಿ ಶತಮಾನೋತ್ಸವ ಕಂಡ ಶಾಲೆಗೆ ಬಂದಿದ್ದು ದುರ್ದೈವದ ಸಂಗತಿ. ಸ್ಥಳೀಯ ಶಾಸಕರು, ಸಚಿವ ಎಚ್.ಕೆ. ಪಾಟೀಲ್ ಈ ಶಾಲೆಗೆ ಕಾಯಕಲ್ಪ ನೀಡಿ ಬಡ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಬೇಕು’ ಎನ್ನುತ್ತಾರೆ ಮಕ್ಕಳ ಪೋಷಕರು.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರೈತರ ಬೆನ್ನಿಗೆ ರಾಜ್ಯ ಸರ್ಕಾರ: ಸಚಿವ ಚಲುವರಾಯಸ್ವಾಮಿ ಭರವಸೆ

ರೈತರ ಸಮಸ್ಯೆಗಳಿಗೆ ಸ್ಪಂದಿಸುವುದರಿಂದ ರಾಜ್ಯ ಸರ್ಕಾರ ಹಿಂದೆ ಸರಿಯುವುದಿಲ್ಲ. ರೈತರ ಹಿತ...

ಬಾಗಲಕೋಟೆ | 77 ಪ್ರಕರಣ ದಾಖಲು, 53 ವಾಹನ ಜಪ್ತಿ; 104 ಆರೋಪಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ

ಬಡವರು ಮತ್ತು ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ತಲುಪಬೇಕಾದ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ...

ಹಾವೇರಿ | ಬರಪೀಡಿತ ಜಿಲ್ಲೆಯ ರೈತರಿಗೆ ಎಕರೆಗೆ ₹30,000 ಪರಿಹಾರ ನೀಡಲು ರೈತರು ಆಗ್ರಹ

"ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂಗಾರು ಮಳೆ ಕೈಕೊಟ್ಟಿದ್ದರಿಂದ, ಹಿಂಗಾರು ಬಿತ್ತನೆಯೂ ಕಷ್ಟವಾಗಿದೆ....

ಶಿವಮೊಗ್ಗದಲ್ಲಿ ಪರೀಕ್ಷಾ ಅಕ್ರಮ: KSOU ಕೇಂದ್ರದಲ್ಲಿ ಪುಸ್ತಕ, ಮೊಬೈಲ್ ಬಳಸಿ ‘ಕಾಪಿ’ ಮಾಡಲು ಅವಕಾಶ; ವಿಡಿಯೋ ವೈರಲ್

ಶಿವಮೊಗ್ಗದಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (KSOU) ಪ್ರಾದೇಶಿಕ ಪರೀಕ್ಷಾ ಕೇಂದ್ರದಲ್ಲಿ...