“ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸುಮಾರು 450 ಜನ ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣ ಪಡೆಯಲು ಗಜೇಂದ್ರಗಡ ನಗರಕ್ಕೆ ಬರುತ್ತಿದ್ದಾರೆ ಆದರೆ ಕಾಲೇಜಿನಲ್ಲಿ ಸರಿಯಾಗಿ ಮೂಲಭೂತ ಸೌಕರ್ಯ ಇಲ್ಲದೆ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ” ಎಸ್.ಎಫ್.ಐ ವಿದ್ಯಾರ್ಥಿಗಳು ಪ್ರತಿಭಟನೆ ಮಾಡೆಸಿದರು.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಭಾರತ ವಿದ್ಯಾರ್ಥಿ ಫೆಡರೇಷನ್ ತಾಲೂಕ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಎಸ್. ಎಫ್. ಐ ರಾಜ್ಯ ಉಪಾಧ್ಯಕ್ಷ ಗಣೇಶ ರಾಠೋಡ ಮಾತನಾಡಿ, “ರಾಜ್ಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತಾಂತ್ರಿಕ ಶಿಕ್ಷಣ ವ್ಯವಸ್ಥೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಆದರೆ ರಾಜ್ಯದಲ್ಲಿರುವ 85 ಸರಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಸರಿಯಾಗಿ ಉಪನ್ಯಾಸಕರು ಇಲ್ಲದೆ ಸಾವಿರಾರು ವಿದ್ಯಾರ್ಥಿಗಳು ಪರಿಕ್ಷೆಯಲ್ಲಿ ಉತ್ತೀರ್ಣವಾಗುತ್ತಿಲ್ಲ. ತಾಂತ್ರಿಕ ಕಾಲೇಜುಗಳಲ್ಲಿ ಲ್ಯಾಬ್ ಸಾಮಗ್ರಿಗಳು ವಿದ್ಯಾರ್ಥಿಗಳ ಕೌಶಲ್ಯ ಬೆಳವಣಿಗೆ ಹಾಗೂ ಆಂತರಿಕ ಅಂಕ ಪಡೆಯಲು ಲ್ಯಾಬ್ ಸಾಮಗ್ರಿಗಳ ಅವಶ್ಯಕತೆ ತುಂಬಾ ಇದೆ. ಆದರೆ ಯಾವುದೇ ಲ್ಯಾಬ್ ಸಾಮಗ್ರಿಗಳು ಇಲ್ಲದೆ ಇರುವುದು” ಖಂಡನಿಯ ಎಂದು ಹೇಳಿದರು.
ಎಸ್.ಎಫ್.ಐ ಜಿಲ್ಲಾದ್ಯಕ್ಷ ಚಂದ್ರು ರಾಠೋಡ ಮಾತನಾಡಿ, “ವಿದ್ಯಾರ್ಥಿಗಳ ಶಾಲಾ- ಕಾಲೇಜು ಅಂದರೆ ದೇವಸ್ಥಾನ ಅಂತ ಕರೆಯುತ್ತೆವೆ. ಆದರೆ ಕಾಲೇಜಿನಲ್ಲಿ ಸರಿಯಾದ ಕಟ್ಟಡದ ಸ್ವಚ್ಚತೆ ಇಲ್ಲ, ಶೌಚಾಲಯಗಳ ಸ್ವಚ್ಚತೆ ಇಲ್ಲ, ಕೊಠಡಿಗಳಲ್ಲಿ ಸಂಪೂರ್ಣವಾಗಿ ವಿದ್ಯುತ್ ಸಂಪರ್ಕ ಕೂಡ ಇಲ್ಲದೆ ಇರುವುದು ಖೇದಕರ ಸಂಗತಿಯಾಗಿದೆ. ಗಜೇಂದ್ರಗಡದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಾರಂಭವಾಗಿ ಸುಮಾರು ೧೩ ವರ್ಷಗಳ ಕಾಲ ಗತಿಸಿದರೂ ಕೂಡ ಈವರೆಗೂ ಖಾಯಂ ಉಪನ್ಯಾಸಕರೆ ಸರ್ಕಾರದಿಂದ ಭರ್ತಿಯಾಗಿಲ್ಲ. ಸ್ವಚ್ಚತಾ ಸಿಬ್ಬಂದಿ, ಆಟದ ಸಾಮಗ್ರಿಗಳು ಏನು ಕಾಣದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.
“ತಾಲೂಕಿನಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸುತ್ತ ಮುತ್ತಲಿನ ಸುಮಾರು ಹಳ್ಳಿಗಳಿಂದ ವಿದ್ಯಾರ್ಥಿಗಳು ಬಸ್ ಮೂಲಕ ಗಜೇಂದ್ರಗಡ ತಲುಪುತ್ತಾರೆ. ಆದರೆ ಪಾಲಿಟೆಕ್ನಿ ಕಾಲೇಜು ಬಸ್ ನಿಲ್ದಾಣದಿಂದ ಸುಮಾರು ಮೂರು ಕೀ.ಮಿ ದೂರದಲ್ಲಿದ್ದು, ಯಾವುದೇ ಸ್ಟೇಜ್ ಇಲ್ಲದ ಕಾರಣ ಬಸ್ ನಿಲುಗಡೆ ಮಾಡುವುದಿಲ್ಲ. ಈ ಕುರಿತು ಮಾನ್ಯ ಡಿಪೋ ಮ್ಯಾನೇಜರ ಅವರಿಗೆ ಸುಮಾರು ಬಾರಿ ಮನವಿ ಮೂಲಕ ವಿನಂತಿಸಿದರು ಸರಿಪಡಿಸಲು ಮುಂದಾಗಿಲ್ಲ. ಇದರಿಂದ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಲು ಆಗುತ್ತಿಲ್ಲ ಆ ಕಾರಣದಿಂದ ಈ ಹೋರಾಟವನ್ನ ಹಮ್ಮಿಕೊಂಡಿದ್ದೇವೆ” ಎಂದರು.
ಹೋರಾಟದ ಸ್ಥಳಕ್ಕೆ ಮಾನ್ಯ ಡಿಪೋ ಮ್ಯಾನೇಜರ್ ಬೇಟಿ ನೀಡಿ, “ಈಗಾಗಲೇ ಇಲ್ಲಿ ಸಬ್ ಸ್ಟೇಜ್ ಮಾಡಿದ್ದೆನೆ. ನನಗೆ ಸೋಮವಾರದ ತನಕ ಅವಕಾಶ ನೀಡಿ, ಎಲ್ಲಾ ಬಸ್ ನಿಲ್ಲಿಸಲು ವ್ಯವಸ್ಥೆ ಮಾಡುತ್ತೆನೆ. ಎಂದು ಭರವಸೆ ನೀಡಿದರು.
ಹೋರಾಟದ ಸ್ಥಳಕ್ಕೆ ಶಾಸಕರು ಮತ್ತು ಜಿಲ್ಲಾಧಿಕಾರಿಗಳು ಬರಲೇಬೇಕೆಂದು ಹೋರಾಟಗಾರರು ಸಂಜೆ 6 ಗಂಟೆಗಳ ತನಕ ಹೋರಾಟ ಮುಂದುವರಿಸಿದರು.
ಪೋಲಿಸ್ ಸಬ್ ಇನ್ಸ್‌ಪೆಕ್ಟರ್ ಮತ್ತು ತಹಶಿಲ್ದಾರರು ಹೋರಾಟದ ಸ್ಥಳಕ್ಕೆ ಬೇಟಿ ನೀಡಿ, ಹೋರಾಟಗಾರರ ಮನ ಒಲಿಸಿ, ಸಮಯಾವಕಾಶ ಕೊಡಿ ಜಿಲ್ಲಾಧಿಕಾರಿಗಳ ಮೂಲಕ ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಮತ್ತು ನಿರ್ದೇಶಕರಿಗೆ ಮನವಿ ಸಲ್ಲಿಸಿ ಬಗೆಹರಿಸಲು ಮುಂದಾಗುತ್ತವೆ. ಜೊತೆಗೆ ಶಾಸಕರ ಗಮನಕ್ಕೂ ತಂದು ಬಗೆಹರಿಸಲು ಮನವಿ ಮಾಡುತ್ತೆವೆ. ಎಂದು ಹೋರಾಟಗಾರರ ಮನ ಒಲಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಅತಿಥಿ ಉಪನ್ಯಾಸಕರು, ಪದವಿ ಶೈಕ್ಷಣಿಕ ಗೊಂದಲ ಪರಿಹರಿಸಲು ಎಐಡಿಎಸ್ಓ ಪ್ರತಿಭಟನೆ
“ತಹಶಿಲ್ದಾರರ ಮೂಲಕ ಮನವಿ ಸಲ್ಲಿಸಿದ ಹೋರಾಟಗಾರರು ಸಮಸ್ಯೆ ಬಗೆಹರಿಸದಿದ್ದರೆ ಮುಂದೆ ರಸ್ತೆ ತಡೆ ಹೋರಾಟ ಮಾಡುತ್ತೆವೆ” ಎಂದು ವಿದ್ಯಾರ್ಥಿಗಳ ಎಚ್ಚರಿಸಿದರು.
ಈ ಹೋರಾಟಕ್ಕೆ ಸಿ. ಐ.ಟಿ. ಯುಮುಖಂಡರು ಪೀರು ರಾಠೋಡ ಬೆಂಬಲಿಸಿದರು. ಪ್ರತಿಭಟನೆಯಲ್ಲಿ ಎಸ್ ಎಫ್ ಐ ತಾಲ್ಲೂಕು ಅಧ್ಯಕ್ಷ ಅನಿಲ್ ರಾಠೋಡ, ಮುಖಂಡರು ಶರಣು ಮಾಟರಂಗಿ, ಮಾಂತೇಶ ಪೂಜಾರ, ಕಾಲೇಜು ಘಟಕದ ಅಧ್ಯಕ್ಷ ಸೋಮಶೇಖರ ವಡ್ಡರ್, ಕಾರ್ಯದರ್ಶಿ ತನುಜಾ ರಾಯಬಾಗಿ, ಮುಖಂಡರು ಅನುಷಾ ತಳವಾರ, ಆಕಾಶ ಲಮಾಣಿ, ರವಿ ಮದಿ, ತೇಜಶ್, ವಿರೇಶ, ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.