ಗದಗ | ಧುತ್ತರಗಿ ಅವರು ನಾಟಕಗಳ ಮೂಲಕ ಪ್ರೇಮ, ಬಂಧುತ್ವ ಬಿತ್ತುವ ಕೆಲಸ ಮಾಡಿದರು: ಆರ್.ಕೆ.ಬಾಗವಾನ

Date:

“ಧುತ್ತರಗಿಯವರು ತಮ್ಮ ನಾಟಕಗಳ ಮೂಲಕ ರಾಷ್ಟೀಯ ಪ್ರೇಮ, ಭಾತ್ರತ್ವ, ಬಂಧುತ್ವ ಬಿತ್ತುವ ಕೆಲಸ ಮಾಡಿದರು” ಎಂದು ಶಿಕ್ಷಕ ಆರ್.ಕೆ.ಬಾಗವಾನ ಹೇಳಿದರು.

- Advertisement -

ಗದಗ ಜಿಲ್ಲೆಯ ರೋಣ ತಾಲೂಕಿನ ನರೇಗಲ್ಲ ಪಟ್ಟಣದ ಶ್ರೀ ಅನ್ನದಾನೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಗುರುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪಿ.ಬಿ.ಧುತ್ತರಗಿ ಪ್ರತಿಷ್ಠಾನ ಬಾಗಲಕೋಟೆ ಸಹಯೋಗದಲ್ಲಿ ಹಮ್ಮಿಕೊಂಡ ಪಿ.ಬಿ.ಧುತ್ತರಗಿ ಅವರ ಸರ್ವಮಂಗಳ ನಾಟಕದ ಓದು-ಸಂವಾದ ಕಾರ್ಯಕ್ರಮದಲ್ಲಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

“ನಾಟಕಗಳ ರಚನೆ ಮೂಲಕ ರಂಗಭೂಮಿಗೆ ಹೊಸ ಹುರುಪನ್ನು ತಂದು, ಪ್ರಸ್ತುತ ಆಧುನಿಕ ಮಾಧ್ಯಮಕ್ಕೆ ಸವಾಲು ಒಡ್ಡುವಂತೆ ರಂಗಭೂಮಿಯನ್ನು ಬೆಳೆಸಿದವರಲ್ಲಿ ಪಿ.ಬಿ ಧುತ್ತಗಿರಿ ಅವರು ಪ್ರಮುಖರು. ತಮ್ಮ ನಾಟಕದ ಮೂಲವಕೇ ಜನರಿಗೆ ರಂಗಭೂಮಿಯ ಬಗ್ಗೆ ಆಸಕ್ತಿಹೊಂದುವಂತೆ ಮಾಡಿದವರು. ಸಿನಿಮಾಕ್ಕೂ ಇವರ ನಾಟಕ್ಕೂ ಒಂದಕ್ಕೊಂದು ಸಂಬಂಧ ಇದ್ದು ಇದಕ್ಕೆ ‘ಸಂಪತ್ತಿಗೆ ಸವಾಲ್’ ಒಂದು ಉತ್ತಮ ಉದಾಹರಣೆಯಾಗಿದೆ” ಎಂದರು.

Advertisements

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರವೀಂದ್ರನಾಥ ದೊಡ್ಡಮೇಟಿ ಅವರು ಮಾತನಾಡಿ, “ಜನಸಾಮಾನ್ಯರ ಬದುಕಿನಲ್ಲಿ ಪರಿವರ್ತನೆ ತರುವ ಮೂಲಕ ಪಿ.ಬಿ.ಧುತ್ತರಗಿಯವರು ಕನ್ನಡ ನಾಟಕ ಕ್ಷೇತ್ರದಲ್ಲಿ ಹೊಸ ಅಲೆ ಹುಟ್ಟು ಹಾಕಿದರು. ಕಳೆದ ಶತಮಾನದ ಎಪ್ಪತ್ತರ ದಶಕದಲ್ಲಿಯೇ ಸಾಮಾಜಿಕ ವ್ಯವಸ್ಥೆ ಪ್ರಶ್ನಿಸುವ, ಜಮೀನ್ದಾರಿ ಧೋರಣೆಗೆ ಸೆಡ್ಡು ಹೊಡೆಯುವ ನಾಟಕಗಳನ್ನು ರಚಿಸಿ ಹೋರಾಟದ ಪ್ರಜ್ಞೆ ಮೂಡಿಸಿದರು” ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪಿ ಬಿ ದುತ್ತರಗಿ ಅವರ ಹೆಸರಿನಲ್ಲಿ ಬಾಗಲಕೋಟೆಯಲ್ಲಿ ಒಂದು ಸುಸಜ್ಜಿತ ರಂಗ‌ ಮಂದಿರ ನಿರ್ಮಾಣ ಮಾಡಬೇಕು. ಅವರ ಎಲ್ಲ ನಾಟಕಗಳು ಮರು ಮುದ್ರಣವಾಗಬೇಕು. ಹಾಗೂ ಉತ್ತರ ಕರ್ನಾಟಕದ ಯಾವುದಾದರೊಂದು ವಿಶ್ವ ವಿದ್ಯಾಲಯದಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕು” ಎಂದು ಸರಕಾರಕ್ಕೆ ಒತ್ತಾಯಿಸಿದರು.

ಸಂಸ್ಥೆಯ ಚೇರಮನ್ನರು ಡಾ. ಎಸ್. ಎ. ಪಾಟೀಲ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “”ನಾಟಕ ಮೂಲಕ ಅನುಭವದ ಕಲಿಕೆಯು ವಿದ್ಯಾರ್ಥಿಗಳ ಜ್ಞಾನವನ್ನು ವಿಸ್ತರಿಸಲು ಒಂದು ಪರಿಣಾಮಕಾರಿ ಮಾರ್ಗವಾಗಿದೆ. ಇದು ಸಾಂಪ್ರದಾಯಿಕ ಬೋಧನೆಗಳನ್ನು ಮೀರಿ ತಮ್ಮದೇ ಆದ ತಿಳುವಳಿಕೆಯನ್ನು ಗಮನಿಸಲು, ಅನ್ವೇಷಿಸಲು, ಅನ್ವೇಷಿಸಲು ಮತ್ತು ಅಭಿವೃದ್ಧಿಪಡಿಸಲು ಅನುವು ಮಾಡಿಕೊಡುತ್ತದೆ. ಕಲಿಯುವವರಿಗೆ ನಿಜ ಜೀವನದ ಸಂದರ್ಭಗಳಲ್ಲಿ ಅನುಭವಕ್ಕೆ ಬರುತ್ತವೆ, ದುತ್ತರಗಿ ಅವರು ಬಹುಪಾಲು ತಮ್ಮ ಅನುಭವಕ್ಕೆ ಬಂದ ವಿಷಯಗಳನ್ನೇ ನಾಟಕವಾಗಿ ಬರೆದಿದ್ದಾರೆ” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟನ ಸದಸ್ಯರು ಚಿದಾನಂದ ಧೂಪದ ಮಾತನಾಡಿ, “ಆಯಾ ಕಾಲಕ್ಕೆ ತಕ್ಕ ಹಾಗೆ ಜಲ್ವಂತ ಸಮಸ್ಯೆಗಳನ್ನು ಎತ್ತಿಕೊಂಡು ನಾಟಕ ಬರೆದ ಕೀರ್ತಿ ಧುತ್ತರಗಿಯವರದ್ದಾಗಿದೆ  ಇವರು ಓದಿದ್ದು 4ನೇ ತರಗತಿ, ಬರೆದ ನಾಟಕಗಳ ಸಂಖ್ಯೆ 56. ವಿಚಿತ್ರವೆಂದರೇ, ಚಲನಚಿತ್ರವಾದ ‘ಸಂಪತ್ತಿಗೆ ಸವಾಲ್’ ಸೇರಿದಂತೆ ಅನೇಕ ನಾಟಕಗಳನ್ನು ಬರೆದಿದ್ದ ಹಿರಿಯ ರಂಗಕರ್ಮಿ ಪಿ.ಬಿ. ಧುತ್ತರಗಿ ಅವರ ಬದುಕಿನ ಕೊನೆ ಕ್ಷಣಗಳೂ ಸಹಾ ಒಂದು ನಾಟಕವೇ ಆಗಿ ಹೋಯಿತು” ಎಂದರು.

ನಂತರ ಸರ್ವಮಂಗಳ ನಾಟಕದ ಸನ್ನವೇಶಗಳನ್ನು ಓದಿದ, ಅಭಿಪ್ರಾಯ ಹಂಚಿಕೊಂಡ ಹಾಗೂ ಸಂವಾದದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಎಸ್ ಜಿ ಕೇಶಣ್ಣವರ, ಡಾ ಡಿ ಎಲ್ ಪವಾರ, ಬಸವರಾಜ ಪಲ್ಲೇದ ಟ್ರಸ್ಟನ ಸದಸ್ಯರಾದ ಡಾ ಸಿದ್ದಪ್ಪ ಮಾದರ, ಶ್ರೀಮತಿ ಸುನಂದಾ ಕಂದಗಲ್ಲ ಇದ್ದರು. ಪ್ರೊ ಪುಂಡಲಿಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು ಡಾ ಕಲ್ಲಯ್ಯ ಹಿರೇಮಠ ಅವರು ನಿರೂಪಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ಹಬ್ಬಕ್ಕೆ ಹೊಸ ಬಟ್ಟೆ ಖರೀದಿಸಲು ಹೋಗಿ ಯುವಕ ಸಾವು 

ಜಿಲ್ಲೆಯ ಅಜ್ಜಂಪುರ ತಾಲೂಕಿನ ನವರಾತ್ರಿ ಸಡಗರದಲ್ಲಿದ್ದ ವೇಳೆ ಬಟ್ಟೆ ಖರೀದಿಸಲು ಹೋಗಿದ್ದ...

ವಿಜಯಪುರ | ಮತದಾರರ ಹಕ್ಕು ಕಸಿಯುವ ಪ್ರಯತ್ನ: ಎಸ್‌ಐಆರ್ ವಿರುದ್ಧ ವಿಜಯಪುರದಲ್ಲಿ ತಿರಂಗ ಯಾತ್ರೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯು ಪ್ರಜಾಪ್ರಭುತ್ವದ ಮೂಲ...

ಉತ್ತರ ಕನ್ನಡ | ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ: ಜಿಲ್ಲೆಯಲ್ಲಿ ಶೇ.76.52ರಷ್ಟು ಮತದಾನ

ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಉತ್ತರ ಕನ್ನಡ...

ಚಿಕ್ಕಮಗಳೂರು | ಮಳೆ ಅಬ್ಬರ: ಜಾಲವೃತಗೊಂಡ ಪಟ್ಟಣ 

ತರೀಕೆರೆ ತಾಲೂಕಿನಲ್ಲಿ ವರುಣನ ಭರ್ಜರಿಯಾಗಿ ಆರ್ಭಟಿಸಿದ್ದು, ನಿನ್ನೆ ಮಧ್ಯಾಹ್ನ ಆರಂಭವಾದ ಮಳೆ...