“ಸಂವಿಧಾನ ಕೊಟ್ಟಿರುವ ಹಕ್ಕುಗಳನ್ನು ಹಿಂದುತ್ವವಾದಿಗಳು ಕಿತ್ತುಕೊಳ್ಳುತ್ತಿದ್ದಾರೆ. ಬಸವಣ್ಣ ಜನಿವಾರ ಕಿತ್ತೊಗೆದು ಹೊರಬಂದು ಸಮಾನತೆ ಸಾರಿದ. ಮತ್ತೆ ಈಗ ಇವರು ಬಸವಣ್ಣನಿಗೆ ಜನವಾರ ಹಾಕಲು ಹೊರಟಿದ್ದಾರೆ. ಜನರ ಮೇಲೆ ಹೇರಲು ಹೊರಟಿದ್ದಾರೆ. ಇದನ್ನ ನಾವು ಪ್ರಶ್ನಿಸಬೇಕು” ಎಂದು ಕಿಡಿಕಾರಿದರು.
ಗದಗ ಪಟ್ಟಣದ ಗಾಂಧಿ ವೃತ್ತದ ಬಳಿ ಸಮಾನತೆಗಾಗಿ ನಾವು ವೇದಿಕೆ ವತಿಯಿಂದ ‘ವಚನ ಅರಿವಿನ ಮಹಾಯಾನ’ ವಚನಗಳ ಸಾಮೂಹಿಕ ಪಠಣ ಹಾಗೂ ಸಂವಿಧಾನದ ಪೂರ್ವ ಪೀಠಿಕೆಯ ಸಮಾನತೆಯ ಉದ್ಘೋಷ ಕಾರ್ಯಕ್ರಮದಲ್ಲಿ ಅವರು ಪ್ರಾಸ್ತಾವಿಕ ಮಾತುಗಳನ್ನು ಆಡಿದರು.
“ಗಾಂಧಿಯ ಅಂಹಿಂಸಾ ತತ್ವವು ಬ್ರಿಟಿಷ್ ಸಾಮ್ರಾಜ್ಯ ಶಾಹಿಯನ್ನು ಏಕಾಂಗಿಯಾಗಿ ವಿರೋದಿಸಿತ್ತು. ಈ ದೇಶದಲ್ಲಿ ಗಾಂಧಿ ಪ್ರಬಲ ಶಕ್ತಿ ಯಾಗಿದ್ದರು. ಹಾಗೆಯೇ ಶರಣರು ರಚಿಸಿದ ವಚನಗಳಲ್ಲಿ ಸಮಾಜದಲ್ಲಿ ಅಡಗಿರುವ ಅಸಮಾನತೆಯ ತಪ್ಪನ್ನು, ಇದು ತಪ್ಪು ಎನ್ನುವ ಅಂತ ಶಕ್ತಿ ಶರಣರ ವಚನಗಳಲ್ಲಿ ಅಡಗಿತ್ತು” ಎಂದರು.
“ಶರಣರ ವಚನಗಳು ಎಲ್ಲವನ್ನು ಒಳಗೊಂಡಿದ್ದು, ಜಾತಿಯನ್ನು ಕಿತ್ತೊಗೆದು ಮನುಷ್ಯತ್ವವನ್ನು ಅಪ್ಪಿಕೊಂಡಿದ್ದವು. ಮನುಷ್ಯರನ್ನಾಗಿ ಕಾಣದ ವ್ಯವಸ್ಥೆ ಇತ್ತು. ಇಂತಹ ಎಲ್ಲವುಗಳನ್ನು ಮೀರಿ ಬಸವಣ್ಣನವರು ಎಲ್ಲರೂ ನನ್ನವರು ಎನ್ನುವ ಬಂಧುತ್ವ ಒಳಗೊಂಡಿತ್ತು. ಆದರೆ ಮನುಷ್ಯರನ್ನು ಬೇದ ಭಾವದಿಂದ ಒಡೆದವರು ಈ ಹಿಂದುತ್ವ ವೈದಿಕ ಶಾಹಿಯವರು” ಎಂದು ಹೇಳಿದರು.
“ಹಿಂದುತ್ವ ನಮ್ಮ ದೇಶದ ಪದವೇ? ಹಿಂದೂ ಧರ್ಮವಾಚಕ ಪದವೇ?, ಅಥವಾ ಪ್ರಾದೇಶಿಕ ಪದವೇ? ಅರ್ಥ ಮಾಡಿಕೊಳ್ಳಬೇಕು. ನಾವೂ ಹಿಂದೂಗಳಲ್ಲ, ಸಿಂಧೂಗಳು ಎಂದು ಹೇಳುಬೇಕು” ಎಂದರು.
“ಹಿಂದೂ ಧರ್ಮದ ಹೆಸರಿನಲ್ಲಿ ಜನರನ್ನು ಎತ್ತಿಕಟ್ಟುತ್ತಿದ್ದಾರೆ. ಹಿಂದೂ ಎನ್ನುವ ಪದವನ್ನು ಬೇರೆ ಕಡೆಯಿಂದ ತೆಗೆದುಕೊಂಡವರು. ಇಂತವರು ಒಂದು ಧಾರ್ಮಿಕ ಪದವನ್ನು ಹುಟ್ಟು ಹಾಕದವರು ಲಿಂಗಾಯತ ಧರ್ಮದ ಮೇಲೆ ಸಮರ ಸಾರಿದ್ದಾರೆ” ಎಂದರು.
“ಲಿಂಗಾಯತ ಧರ್ಮಕ್ಕೆ ಬಸವಣ್ಣ ಇದ್ದಾನೆ, ವಚನಗಳಿವೆ, ಪ್ರೀತಿ ಇದೆ, ಎಲ್ಲರೂ ಒಂದಾಗಿ ಕಾಣುವ ಧರ್ಮವೇ ಲಿಂಗಾಯತ. ನೀವು ಮನಷ್ಯ ಧರ್ಮವನ್ನು ಒಡೆದು ಹಾಕುತ್ತಿದ್ದರಿ. ನೀವು ಜಾತಿ, ಅಸಮದಾನ ಇರಬೇಕು ಎಂದು ಹೇಳಿತ್ತೀರಿ. ಆದರೆ ಲಿಂಗಾಯತ ಧರ್ಮ ಎಲ್ಲ ಜಾತಿಯನ್ನು ಒಡೆದು ಸಮಾನತೆ ತೋರುವ ಧರ್ಮ ಎಲ್ಲಿ, ಅಸಮಾನತೆ ತೊರುವ ನೀವೆಲ್ಲಿ? ಎಂದು ಹಿಂದುತ್ವವಾದಿಗಳನ್ನು ಪ್ರಶ್ನಿಸಿದರು.
“ಕೈಬೆರಳು ತೋರಿಸಿ ಅಸಮಾನತೆ ಇರಬೇಕು ಎಂದು ಹೇಳುತ್ತಿರಿ. ಆದರೆ ಅಂಬೇಡ್ಕರ, ಬುದ್ಧ, ಬಸವ ಸಮಾನತೆ ಸಾರಿದವರು. ಅಂಬೇಡ್ಕರ ಸಂವಿಧಾನದ ಮೂಲಕ ಕಾನೂನು ದೃಷ್ಟಿಯಲ್ಲಿ ಎಲ್ಲರೂ ಸಮಾನರು, ಯಾರು ಹೆಚ್ಚು ಅಲ್ಲ, ಯಾರ ಕಮ್ಮಿಯೂ ಅಲ್ಲ, ಎಲ್ಲರಿಗೂ ಸಮಾನತೆಯನ್ನು ಕೊಟ್ಟಿದೆ” ಎಂದು ಹೇಳಿದರು.
“ಹಾಗಾಗಿ ನಮ್ಮೊಳಗಿನ ಅರಿವನ್ನು ಹೆಚ್ಚಿಸಲು ವಚನಗಳ ಪಠಣ ಇಂದು ಮಾಡುತ್ತಿದ್ದೇವೆ. ಅಲ್ಲಮ, ಅಕ್ಕಮಾಹಾದೇವಿ ಸೇರಿದಂತೆ ಎಲ್ಲ ಶರಣರೂ ವಚನಗಳನ್ನು ರಚಿಸಿದ್ದಾರೆ. ಅವರ ವಚನಗಳನ್ನು ಪಠಣ ಮಾಡುವುದರ ಮೂಲಕ ಅರಿವಿನಕಡೆಗೆ ಹೋಗೋಣ” ಎಂದು ಬಸವರಾಜ ಸೂಳಿಬಾವಿ ಪ್ರಾಸ್ತಾವಿಕ ಮಾತುಗಳನ್ನು ಹೇಳಿದರು.
ಕಾರ್ಯಕ್ರಮದಲ್ಲಿ ಶಿವಾನಂದ ತಮ್ಮನ್ನವರ ಅವರು ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ ಆರಂಭವಾಯಿತು. ದಲಿತ ಕಲಾ ಮಂಡಳಿ ಶರೀಫ್ ಬಿಳಿಯಲಿ ತಂಡ ಕ್ರಾಂತಿ ಗೀತೆಗಳನ್ನು ಹಾಡಿದರು. ನಂತರ ಶರಣರ ವಚನಗಳನ್ನು ಸಾಮೂಹಿಕವಾಗಿ ಪಠಣ ಮಾಡಿದರು.
ಜಾಗತಿಕ ಲಿಂಗಾಯತ ಮಹಾಸಭಾ ಮುಖಂಡರು ಶೇಖಣ್ಣ ಕವಳಿಕಾಯಿ ಸ್ವಾಗತ ಭಾಷಣ ಮಾಡಿದರು. ಎ. ವಾಯ್ ನವಲಗುಂದ ಅವರು ವಚನ ವಾಚನಕ್ಕೆ ಚಾಲನೆ ನೀಡಿದರು. ಜಾಗತಿಕ ಲಿಂಗಾಯತ ಮಹಾಸಭಾ ಮುಖಂಡರು ಅಶೋಕ ಬರಗುಂಡಿ ಅವರು ಸಮಾರೋಪ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಎಸ್.ಎಸ್. ಹರ್ಲಾಪುರ, ಎಸ್.ಎನ್.ಬಳ್ಳಾರಿ, ಮುತ್ತು ಬಿಳಿಯಲಿ, ಸತೀಶ್ ಪಾಸಿ, ಬಸವರಾಜ ಕಡೆಮನಿ ಸೇರಿದಂತೆ ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.




