ಡಾ.ಬಿ.ಆರ್.ಅಂಬೇಡ್ಕರ್ ಅವರ 153ನೇ ಜಯಂತೋತ್ಸವ ಕಾರ್ಯಕ್ರಮವನ್ನು ಗದಗ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ ನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿ ಜಿಲ್ಲಾ ಅಧ್ಯಕ್ಷ ಶಿವಾನಂದ ತಮ್ಮನ್ನವರ ನೇತೃತ್ವದಲ್ಲಿ ಅದ್ಧೂಯಾಗಿ ನಡೆಯಿತು.
ಕಾರ್ಯಕ್ರಮವನ್ನು ಡಾ.ಬಿ.ಆರ್.ಅಂಬೇಡ್ಕರ ಹಾಗೂ ಬುದ್ಧನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ. ರಾಮಚಂದ್ರ ಹಂಸನೂರು ಅವರು ಪ್ರಾಸ್ತಾವಿಕ ಮಾತನಾಡಿ, “ಮನುವಾದಿಗಳು ರಾಜಕೀಯದಲ್ಲಿ ನುಸುಳಿ ಸಂವಿಧಾನ ಬದಲು ಮಾಡುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ನಾವು ಸಂವಿಧಾನ ಉಳಿಸಿಲು ಇಂತಹ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಮನುವಾದಿಗಳಿಗೆ ತಕ್ಕ ಉತ್ತರ ಕೊಡೋಣ” ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಮುಖಂಡರು ಎಸ್ ಎನ್ ಬಳ್ಳಾರಿ ಮಾತನಾಡಿ, ನಮ್ಮ ಹಿರಿಯರನ್ನು ಈ ವ್ಯವಸ್ಥೆ ಪಶು-ಪಕ್ಷಿಗಳಿಗಿಂತ ಕಡೆಯಾಗಿ ಕಂಡಿದ್ದು, ನೋವುಗಳನ್ನು ಅನುಭವಿಸಿದ್ದಾರೆ. ನಮಗೆ ಯಾವುದೇ ಸ್ವಾತಂತ್ರ್ಯ ಇರಲಿಲ್ಲ. ಉತ್ತಮ ಬಟ್ಟೆ, ಆಹಾರ ಇರಲಿಲ್ಲ. ಶಿಕ್ಷಣವಂತೂ ಬಾಳ ದೂರವಿತ್ತು. ಇಂತಹ ಸಂಧರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಜಾತಿ ವ್ಯವಸ್ಥೆ ವಿರುದ್ಧ, ಅಸ್ಪೃಷ್ಯತೆ ವಿರುದ್ಧ ಹೋರಾಟ ನಡೆಸಿದರು. ಸಂವಿಧಾನವನ್ನು ಬರೆದು ಎಲ್ಲರಿಗೂ ಸಮಾನತೆಯಿಂದ ಬದುಕುವ ಹಕ್ಕನ್ನು ಕೊಟ್ಟಿದ್ದಾರೆ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಡಿಸ್ಎಸ್ ಜಿಲ್ಲಾಧ್ಯಕ್ಷ ಶಿವಾನಂದ ತಮ್ಮನ್ನವರು ಮಾತನಾಡಿ, “ಪ್ರತಿವರ್ಷ ಈ ಕಾರ್ಯಕ್ರಮ ಮಾಡಿಖಂಡು ಬರುತ್ತಿದ್ದೇವೆ ಸಂವಿಧಾನದ ಪೂರ್ವ ಪೀಠಿಕೆಯ ಆಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಉದ್ದೇಶದಿಂದ ಪ್ರತಿವರ್ಷ ಈ ಕಾರ್ಯಮವನ್ನು ಆಯೋಜನೆ ಮಾಡಲಾಗುತಗತದೆ. ಈ ಕಾರ್ಯಕ್ರಮದಲ್ಲಿ ಅರವತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದು, ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡಿದ್ದರು” ಎಂದು ಹೇಳಿದರು.

ಸಂವಿಧಾನ ಪೂರ್ವ ಪೀಠಿಕೆ ವಾಚನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ವಿದ್ಯಾರ್ಥಿನಿ ಲಕ್ಷ್ಮೀ ಉಮೇಶ ಲಮಾಣಿ (ಹತ್ತು ಸಾವಿರ ರೂ), ದ್ವಿತೀಯ ಬಹುಮಾನ ಸಮರ್ತ ರಾಮಚಂದ್ರ ಹಂಸನೂರು (ಸೈಕಲ್), ತೃತೀಯ ಬಹುಮಾನ ವೈಷ್ಣವಿ ಚಲವಾದಿ (ಸೈಕಲ್), ನಾಲ್ಕನೇ ಬಹುಮಾನ ಹರ್ಷಿಕ ಹೇಮಂತ ಕಾಳೆ ಅವರು ಆಯ್ಕೆ ಆಗಿದ್ದು, ಬಹುಮಾನಗಳನ್ನು ವಿತರಿಸಲಾಯಿತು.
ದಲಿತ ಕಲಾ ಮಂಡಿಳಿ ವತಿಯಿಂದ ಕ್ರಾಂತಿಗೀತೆ ಹಾಡಲಾಯಿತು. ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಪೆನ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ರಮೇಶ ಕೊಳೂರು, ಶಿವಸಂಗಮ ಸಮೂಹ ಸಂಸ್ಥೆ ಸಂಸ್ಥಾಪಕರು ಜಿ.ಎಮ್ ಪಲ್ಲೇದ, ರಾಘವೇಂದ್ರ ಬಿನ್ನಾಳ, ಬಿತೀಶ್ ಗಟ್ಟೆನ್ನವರ, ಶರಣು ಕಾಳೆ, ವಸಂತ ಶಿಂಗಾಡಿ, ವಿಜಯ್ ಹಿರೇಮನಿ, ಇನ್ನೂ ಅನೇಕ ಮುಖಂಡರು, ಯುವಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.




