“ರಾಜ್ಯದಲ್ಲಿ ಒತ್ತಾಯ ಪೂರ್ವಕವಾಗಿ ಹಿಂದಿ ಹೇರಿಕೆ ವಿರೋಧಿಸಿ ಬೆಂಗಳೂರಿನಲ್ಲಿ ಹೋರಾಟ ಮಾಡಿದ ಕರವೇ ಕಾರ್ಯಕರ್ತರನ್ನು ಬಂಧಿಸಿರುವ ಪೊಲೀಸ ಕ್ರಮವನ್ನು ಖಂಡಿಸುತ್ತೇವೆ. ಕೂಡಲೇ ಬಿಡುಗಡೆ ಮಾಡಬೇಕು” ಎಂದು ಕರವೇ ಜಿಲ್ಲಾಧ್ಯಕ್ಷ ಹಣಮಂತ ಅಬ್ಬಿಗೇರಿ ಆಗ್ರಹಿಸಿದರು.
ಗದಗ ಪಟ್ಟಣದ ಜಿಲ್ಲಾಡಳಿತ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ರಾಜ್ಯದಲ್ಲಿ ಹಿಂದಿ ಹೇರಿಕೆಯನ್ನು ವಿರೋಧಿಸಿ 41 ಜನರ ಕರವೇ ಕಾರ್ಯಕರ್ತರ ಬಂದಿಸಿರುವವರನ್ನು ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು.
“ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯನ್ನು ಖಂಡಿಸಿ, ನಮ್ಮ ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮ. ಕೇವಲ ಮೂನ್ನೂರು ವರ್ಷಗಳ ಇತಿಹಾಸವಿರುವ ಹಿಂದಿಯನ್ನು ರಾಷ್ಟ ಭಾಷೆ ಎಂದು ಹೇಳುತ್ತಿದ್ದು, ಆರು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ಯಾಕೆ ರಾಷ್ಟ ಭಾಷೆ ಆಗಬಾರದು” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ನಿನ್ನ ಬೆಂಗಳೂರು ನಗರದಲ್ಲಿ ಪ್ರತಿಷ್ಠ ಹೊಟೇಲ್ ತಾಜ್ ವೆಸ್ಟೆಂಡ್ ಹೋಟೇಲ್ನಲ್ಲಿ ಹಿಂದಿ ಹೇರಿಕೆಯ ಸಭೆ ನಡೆದಿದ್ದು, ನಮ್ಮ ರಾಜ್ಯದ ದುರ್ದೈವ. ಇಂತಹ ಸಭೆಯನ್ನು ತಡೆದಿದ್ದಕ್ಕಾಗಿ ನಮ್ಮ ಪೊಲೀಸ ಇಲಾಖೆ ನಮ್ಮ ಕಾರ್ಯಕರ್ತರನ್ನು ಬಂಧಿಸಿದ್ದು ಖಂಡನೀಯ. ಈ ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು” ಎಂದು ಆಗ್ರಹಿಸಿದರು.
“ಇಲ್ಲದಿದ್ದರೆ ನಮ್ಮ ರಾಜ್ಯಾಧ್ಯಕ್ಷರಾದ ಟಿ. ಎ. ನಾರಾಯಣಗೌಡರ ಆದೇಶದಂತೆ ಗದಗ ಜಿಲ್ಲೆಯಲ್ಲಿ ಮುಂದಿನ ದಿನಮಾನಗಳಲ್ಲಿ ಉಗ್ರವಾದ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕರವೇ ಮುಖಂಡರು ನಿಂಗನಗೌಡ ಮಾಲಿಪಾಟೀಲ್, ಮುತ್ತಣ್ಣ ಚವಡಣ್ಣವರ, ತೌಸಿಫ ಡಾಲಾಯತ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷರು ಲಕ್ಷ್ಮಿ ಹಿತ್ತಲಮನಿ, ವಿನಾಯಕ ಬದಿ, ಯಲ್ಲಪ್ಪ ಭೋವಿ, ಗಿರೀಶ್ ಕೆಗಡದಿನ್ನಿ, ರೆಹಮಾನ್ ದರ್ಗದ, ಯಶೋಧ ಬಾಲಾಜಿ, ಗಂಗಮ್ಮ ಕೇಳಿಕೆತರ್, ರೂಪಾ ಕುಲಕರ್ಣಿ, ಸಿರಾಜ್ ಹೊಸಮನಿ, ಈರಣ್ಣ ಹಿರೇಗೌಡ್ರು, ಯಲಪ್ಪ ನಾಗಸಮುದ್ರ ಇನ್ನೂ ಅನೇಕ ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.