ಕೊಡಗು ಜಿಲ್ಲೆ ಮಡಿಕೇರಿಯ ರಾಜಾಸೀಟು ನಲ್ಲಿ ನಿರ್ಮಾಣವಾಗಬೇಕಿದ್ದ ಸರಿಸುಮಾರು ₹15 ಕೋಟಿ ರೂಪಾಯಿ ವೆಚ್ಚದ ಗ್ಲಾಸ್ ಬ್ರಿಡ್ಜ್ ಹಾಗೂ ಫುಡ್ ಕೋರ್ಟ್ ನಿರ್ಮಾಣ ಯೋಜನೆಯನ್ನು ಜನರ ವ್ಯಾಪಕ ಆಕ್ರೋಶದಿಂದಾಗಿ ಸರ್ಕಾರ ಕೈಬಿಟ್ಟಿದೆ ಎಂದು ಶಾಸಕ ಡಾ ಮಂತರ್ ಗೌಡ ಮಾಹಿತಿ ನೀಡಿದ್ದಾರೆ.
ಕೊಡಗಿನ ಪ್ರವಾಸೋಧ್ಯಮಕ್ಕೆ ಮೆರಗು ನೀಡುವ ಉದ್ದೇಶದಿಂದ ಸರ್ಕಾರ ಭೂ ಕುಸಿತ ಪ್ರದೇಶದಲ್ಲಿಯೇ ಯೋಜನೆಯನ್ನು ಕೈಗೊಳ್ಳಲು ಮುಂದಾಗಿತ್ತು. ಬೆಟ್ಟದಂಚಿನಲ್ಲಿ ಆಳವಾಗಿ ಕೊರೆದು ಬ್ರಿಡ್ಜ್ ನಿರ್ಮಾಣ ಮಾಡುವುದು ಮುಂಬರುವ ದಿನಗಳಲ್ಲಿ ಗುಡ್ಡ ಕುಸಿದರೆ ಅಪಾಯ ಎಂದು ಜನಾಕ್ರೋಶ ಕೇಳಿಬಂದಿತ್ತು.
ಮಡಿಕೇರಿಯ ರಾಜಾಸಿಟ್ ಕೊಡಗಿನಲ್ಲಿ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ತಾಣ. ಇಂತಹ ಸ್ಥಳದಲ್ಲಿ ಸ್ಕೈವಾಕ್ ಗ್ಲಾಸ್ ಬ್ರಿಡ್ಜ್ ಮಾಡಲು ಬೆಟ್ಟದಲ್ಲಿ ಆಳವಾಗಿ ಕೊರೆದು ಪಿಲ್ಲರ್ ಅಳವಡಿಕೆ ಮಾಡಬೇಕಿತ್ತು. ಇದರ ಸುತ್ತ ಪರ ವಿರೋಧ ಚರ್ಚೆ ನಡೆದು ಸಾರ್ವಜನಿಕರು ವಿರೋಧ ಮಾಡಿದ್ದರು. ತೋಟಗಾರಿಕೆ ಇಲಾಖೆ ಟೆಂಡರ್ ಕರೆದು ಯೋಜನೆ ಆರಂಬಿಸಲು ಒಂದು ಹಂತದ ಸಿದ್ಧತೆ ಕೂಡ ಮಾಡಿಕೊಂಡಿತ್ತು.

ಯೋಜನೆಯನ್ನು ಕೈಗೆಟ್ಟಿಕೊಳ್ಳುವ ಮೊದಲು ಸ್ಥಳಕ್ಕೆ ಸಂಬಂಧಪಟ್ಟ ಭೂ ವಿಜ್ಞಾನಿಗಳು, ಪರಿಸರ ಇಲಾಖೆ ತಜ್ಞರು ಪರೀಕ್ಷಿಸಿ ವರದಿ ಸಂಗ್ರಹಿಸಿ, ಜಾಗದ ಸುರಕ್ಷತೆ ಬಗ್ಗೆ ಮಾಹಿತಿ ನೀಡಬೇಕಿತ್ತು. ಆದರೇ, ಇದ್ಯಾವುದು ನಡೆದಿರಲಿಲ್ಲ. ಸರ್ಕಾರ ಗಂಭೀರವಾಗಿ ಪರಿಗಣಿಸಿ ಗ್ಲಾಸ್ ಬ್ರಿಡ್ಜ್ ನಿರ್ಮಿಸಿದರೆ ಅಪಾಯ ಸಂಭವಿಸುವ ಸಾಧ್ಯತೆಯಿದೆ ಎಂದು ಮನಗಂಡು ಈ ಯೀಜನೆಯನ್ನು ಕೈಬಿಟ್ಟಿದೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಓರ್ವನ ರಕ್ತದಾನದಿಂದ ಮೂವರ ಪ್ರಾಣ ಉಳಿಸಬಹುದು : ಸುರೇಶ್
ಗ್ಲಾಸ್ ಬ್ರಿಡ್ಜ್ ಹಾಗೂ ಫುಡ್ ಕೋರ್ಟ್ ಆದರೇ ಪ್ರವಾಸಿಗರ ಸಂಖ್ಯೆ ಗಣನಿಯವಾಗಿ ಹೆಚ್ಚಬಹುದು, ವಾಹನಗಳ ಓಡಾಟ, ಒತ್ತಡದಿಂದ ಅನಾಹುತಕ್ಕೆ ಎಡೆಮಾಡಿಕೊಟ್ಟಂತಾಗಬಹುದು ಎಂದು ವಿಶ್ಲೇಷಸಲಾಗಿತ್ತು. ಈ ಕುರಿತಾಗಿಯೂ ಹಲವಾರು
ಹೋರಾಟಗಳು ಸ್ಥಳೀಯವಾಗಿ ನಡೆದಿತ್ತು.