ಗುಬ್ಬಿ | ಜಾತಿ ಕಾಡು ಗೊಲ್ಲ, ಧರ್ಮ ಬುಡಕಟ್ಟು ಬರೆಸಿ : ಡಾ. ಬಸವ ರಮಾನಂದ ಸ್ವಾಮೀಜಿ

Date:

Advertisements

ಪರಿಶಿಷ್ಟ ಪಂಗಡಕ್ಕೆ ಸೇರಬೇಕಾದ ಕಾಡು ಗೊಲ್ಲ ಜನಾಂಗ ವಿಶಿಷ್ಟ ಆಚರಣೆ ವಿಚಾರ ಮೂಲಕ ಅಲೆಮಾರಿಗಳಾಗಿ ಬುಡಕಟ್ಟು ಸಂಸ್ಕೃತಿ ಹೊಂದಿರುವ ಹಿನ್ನಲೆ ಕಾಡು ಗೊಲ್ಲ ಜನಾಂಗದವರು ಜಾತಿ ಗಣತಿದಾರರ ನಮೂನೆಯ 541 ಕಾಲಂ ನಲ್ಲಿ ಜಾತಿಯನ್ನು ಕಾಡು ಗೊಲ್ಲ, ಉಪ ಜಾತಿಯನ್ನು ಕಾಡು ಗೊಲ್ಲ, ಧರ್ಮ ಬುಡಕಟ್ಟು ಎಂದು ನಮೂದಿಸಿ ಎಂದು ಹೆಗ್ಗುಂದ ವನಕಲ್ಲು ಮಠದ ಡಾ.ಶ್ರೀ ಬಸವ ರಮಾನಂದ ಸ್ವಾಮೀಜಿ ತಿಳಿಸಿದರು.

ಗುಬ್ಬಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಯಾವುದೇ ಜಾತಿ ಪರ ವಿರೋಧ ನಮ್ಮಲ್ಲಿಲ್ಲ. ನಮ್ಮದು ಬುಡಕಟ್ಟು ಸಂಸ್ಕೃತಿ ಪರಂಪರೆ ಬೆಳೆಸಿದ ಕಾಡುಗೊಲ್ಲರು ನಾಗರೀಕ ಸಮಾಜದಿಂದ ದೂರ ಉಳಿದು ಹಟ್ಟಿಗಳ ನಿರ್ಮಾಣ ಮಾಡಿಕೊಂಡು ಪಶುಪಾಲನೆ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಲು ಅರ್ಹತೆ ಪಡೆದರೂ ನಮ್ಮಲ್ಲಿ ಒಗ್ಗಟ್ಟು ಕಾಣದೇ ಯಾವುದೇ ಸವಲತ್ತು ಗಳಿಸಲಾಗಿಲ್ಲ. ಈ ಹಿನ್ನಲೆ ಕಾಡು ಗೊಲ್ಲ ಸಂಸ್ಕೃತಿಯನ್ನು ಪ್ರತ್ಯೇಕವಾಗಿ ಬಿಂಬಿಸಿ ಜಾತಿಗಣತಿಯಲ್ಲಿ ಕಾಡು ಗೊಲ್ಲ ಎಂದೇ ಬರೆಸಿ ಎಂದು ಮನವಿ ಮಾಡಿದರು.

ಮೊದಲಿನಿಂದಲೂ ಕಾಡು ಗೊಲ್ಲ ಜಾತಿಯ ಹೆಸರು ನಮೂದಿಸಲಾಗಿತ್ತು. ದೇಶ ವಿದೇಶಿ ಇತಿಹಾಸಕಾರರ ಬರವಣಿಗೆಯಲ್ಲಿ ಕಾಡು ಗೊಲ್ಲ ಜನಾಂಗ ಹೆಸರು ಕಂಡು ಬಂದಿತ್ತು. 1930 ರಲ್ಲಿ ಮೈಸೂರು ಸಂಸ್ಥಾನ ಯಾದವ ಅಥವಾ ಗೊಲ್ಲ ಹೆಸರು ಪ್ರಸ್ತುತಗೊಂಡಿತ್ತು. ಇದೇ ಕಾಡು ಗೊಲ್ಲ ಅಸ್ಥಿತ್ವಕ್ಕೆ ಬಿದ್ದ ಕೊಡಲಿ ಪೆಟ್ಟು ಇದಾಗಿದೆ. ಧಾರ್ಮಿಕ, ಸಾಮಾಜಿಕ ಆಚಾರ ವಿಚಾರದಲ್ಲಿ ವಿಭಿನ್ನತೆ ಬುಡಕಟ್ಟು ಸಂಸ್ಕೃತಿ ತೋರುತ್ತದೆ. ಈ ಹಿನ್ನಲೆ ಎಸ್ಟಿ ಮೀಸಲಾತಿ ಸವಲತ್ತು ನಮಗೆ ದೊರೆಯಬೇಕಿದೆ. ನಮ್ಮ ಜನಾಂಗದವರು ಕಾಡು ಗೊಲ್ಲ ಎಂದೇ ಬರೆಸಿ ಎಂದು ಮತ್ತೊಮ್ಮೆ ಮನವಿ ಮಾಡಿದರು.

ವಕೀಲ ಬಿ.ದೊಡ್ಡಯ್ಯ ಮಾತನಾಡಿ ಕಾಡು ಗೊಲ್ಲರ ಅಭ್ಯುದಯಕ್ಕೆ ಪ್ರಸ್ತುತ ನಡೆದಿರುವ ಜಾತಿ ಗಣತಿಯಲ್ಲಿ ಕಾಡು ಗೊಲ್ಲ ಎಂದೇ ನಮೂದಿಸಬೇಕಿದೆ. ರಾಜ್ಯದ 12 ಜಿಲ್ಲೆಯ 40 ತಾಲ್ಲೂಕಿನಲ್ಲಿ ವಾಸ್ತವ್ಯ ಕಾಣುವ ಕಾಡು ಗೊಲ್ಲರು ವಿಭಿನ್ನ ವಿಶಿಷ್ಟ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಈಗಾಗಲೇ ಮುಖ್ಯವಾಹಿನಿಯಿಂದ ದೂರ ಉಳಿದ ಕಾಡು ಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಮೀಸಲಾತಿ ಸೌಲಭ್ಯ ಕೂಡಾ ಸಿಕ್ಕಿಲ್ಲ. ಎಸ್ಟಿ ಪಟ್ಟಿಗೆ ಸೇರಿಸಲು ಬಿಡದ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಮಾತಿಗೆ ಗಮನ ಕೊಡದೆ ಜಾತಿ ಗಣತಿ ವೇಳೆ ಕಾಡು ಗೊಲ್ಲ ಎಂದೇ ನಮೂದಿಸಿ ಎಂದು ತಿಳಿಸಿದರು.

ಜಾತಿಗಣತಿ ಜಾಗೃತಿ ಜಿಲ್ಲಾ ಉಸ್ತುವಾರಿ ದೊಡ್ಡೇಗೌಡ ಮಾತನಾಡಿ ಕಾಡು ಗೊಲ್ಲರ ಅಸ್ತಿತ್ವ ಬಗ್ಗೆ ದನಿಯಾದ ರಾಜ್ಯ ಕಾಡು ಗೊಲ್ಲರ ಸಂಘ ಈಗ ಗಣತಿಯ ಜಾಗೃತಿಗೂ ಮುಂದಾಗಿದೆ. ಇದೇ ತಿಂಗಳ 22 ರಿಂದ ಸರ್ಕಾರ ನಡೆಸಿರುವ ಜಾತಿ ಗಣತಿಯಲ್ಲಿ ಜಾತಿ ಕಾಡುಗೊಲ್ಲ, ಉಪಜಾತಿ ಮತ್ತು ಪರ್ಯಾಯ ಜಾತಿ ಕೂಡಾ ಕಾಡು ಗೊಲ್ಲ ಎಂದು ಬರೆಸಿ ಧರ್ಮ ಕಾಲಂ ನಲ್ಲಿ ಬುಡಕಟ್ಟು ಎಂದು ನಮೂದಿಸಲು ಮನವಿ ಮಾಡಿದ ಅವರು ಜಿಲ್ಲೆಯಿಂದ ತಾಲ್ಲೂಕಿನ ಸಂಘ ಜಾಗೃತಿ ಮೂಡಿಸಲು ಸಿದ್ಧವಿದೆ. ಹೋಬಳಿಯಲ್ಲಿ ಸಮಿತಿ ರಚಿಸಿ ಪ್ರತಿ ಹಟ್ಟಿಯಿಂದ ಇಬ್ಬರು ಯುವಕರನ್ನು ನೇಮಿಸಿ ಜಾಗೃತಿ ಕೆಲಸ ಮಾಡಲಾಗುತ್ತಿದೆ ಎಂದರು.

ಮುಖಂಡ ಕಂಬೇರಹಟ್ಟಿ ನಾಗರಾಜು ಮಾತನಾಡಿ ಕಾಡು ಗೊಲ್ಲರ ಮುಂದಿನ ಪೀಳಿಗೆಗೆ ಶಿಕ್ಷಣ ಜೊತೆ ಎಲ್ಲಾ ಸವಲತ್ತು ಒದಗಿಸಲು ಪರಿಶಿಷ್ಟ ಪಂಗಡಕ್ಕೆ ಸೇರುವುದು ನಮ್ಮ ಹಕ್ಕಾಗಿದೆ. ಎಸ್ಟಿ ಪಟ್ಟಿಗೆ ಸೇರಿಸಲು ನಡೆದ ಹೋರಾಟ ತಾರ್ಕಿಕ ಅಂತ್ಯ ಕಾಣಲು ಜಾತಿ ಗಣತಿಯಲ್ಲಿ ಕಾಡು ಗೊಲ್ಲ ಎಂದೇ ನಮೂದಿಸಬೇಕಿದೆ. ಈ ಹಿನ್ನಲೆ ತಾಲ್ಲೂಕಿನ ಪ್ರತಿ ಕಾಡು ಗೊಲ್ಲರ ಹಟ್ಟಿಗೆ ಕರಪತ್ರ ಹಂಚಿ ಪ್ರತಿ ಮನೆಗೂ ತಿಳಿಸಿ ಕಾಡು ಗೊಲ್ಲ ಹೆಸರು ಬರೆಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯೆ ಯಶೋಧಮ್ಮ ಮುಖಂಡರಾದ ಶಿವಣ್ಣ, ಶಿರಾ ಈಶ್ವರಪ್ಪ, ಚಿಕ್ಕನಾಯಕನಹಳ್ಳಿ ಬಸವರಾಜು, ತಿಪಟೂರು ಬಾಲರಾಜು, ತುರುವೇಕೆರೆ ಬಸವರಾಜು, ರವೀಶ್, ನಾಗರಾಜು, ರವೀಶ್, ಅಯ್ಯಣ್ಣ, ಮಂಜುನಾಥ್, ನಿಂಗರಾಜು, ಮಹಾಲಿಂಗಯ್ಯ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊಪ್ಪಳ | ಪ್ರವಾದಿ ಮಹಮ್ಮದ್‌ ಸಂದೇಶವನ್ನು ನಾವು ಪಾಲನೆ ಮಾಡಬೇಕು: ಲಾಲ್ ಹುಸೇನ್ ಕಂದ್ಗಲ್

'ಖುರಾನ್' ಬರುವ ಪ್ರವಾದಿ ಮಹಮ್ಮದ್‌ ಅವರು ಹೇಳಿದ ಸತ್ಯವನ್ನೇ ಭಾರತೀಯ ಪುರಾಣಗಳು...

ಶಿವಮೊಗ್ಗದ ಸಂಚಾರ ವ್ಯವಸ್ಥೆಯಲ್ಲಿ ಅರಾಜಕತೆ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಾಗರಿಕರು ಹೈರಾಣು

ಒಮ್ಮೆ ಶಾಂತ, ಶಿಕ್ಷಣ ಹಾಗೂ ಸಂಸ್ಕೃತಿಯ ತಾಣವಾಗಿದ್ದ ಶಿವಮೊಗ್ಗ ನಗರ ಇತ್ತೀಚಿನ...

ತುಮಕೂರು | ಗಾಂಧೀ ತತ್ವಗಳಿಗೆ ವಿಶ್ವ ಮನ್ನಣೆ : ಡಾ. ಜಿ.ಪರಮೇಶ್ವರ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಅಹಿಂಸಾ ತತ್ವಗಳಿಗೆ ಇಡೀ ವಿಶ್ವದಲ್ಲಿಯೇ ಮನ್ನಣೆ ದೊರೆತಿದೆ...

ಶಿವಮೊಗ್ಗ | ಸತ್ಯ – ಅಹಿಂಸೆ ಪ್ರಬಲ ಅಸ್ತ್ರಗಳು : ಡಾ. ಟಿ. ಅವಿನಾಶ್

ಶಿವಮೊಗ್ಗ, ಭಾರತ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಡಲು ಮಹಾತ್ಮ ಗಾಂಧೀಜಿಯವರು ಬಳಸಿದ ಅಸ್ತ್ರಗಳೆಂದರೆ...

Download Eedina App Android / iOS

X