ತುಮಕೂರು | ಮಳೆಗೆ ಗುಬ್ಬಿ ಸರ್ಕಾರಿ ಆಸ್ಪತ್ರೆ ಜಲಾವೃತ : ರೋಗಿಗಳ ಪರದಾಟ!

Date:

ಸೋಮವಾರ ರಾತ್ರಿ ಸುರಿದ ಜೋರು ಮಳೆಗೆ ಗುಬ್ಬಿ ಪಟ್ಟಣದ ಸರ್ಕಾರಿ ಆಸ್ಪತ್ರೆ ಸಂಪೂರ್ಣ ಜಲಾವೃತಗೊಂಡು ಕೆಳಂತಸ್ತಿನ ಒಳ ರೋಗಿಗಳ ವಾರ್ಡ್‌ನಲ್ಲಿದ್ದ ರೋಗಿಗಳು ಪರದಾಡಿದ ಘಟನೆ ನಡೆದಿದೆ.

- Advertisement -

ರಾತ್ರಿ 8 ಗಂಟೆಯ ಸಮಯದಲ್ಲಿ ಆರಂಭವಾದ ಮಳೆ ಒಂದೇ ವೇಗದಲ್ಲಿ ಸುರಿದು ಹೆದ್ದಾರಿ ಬದಿಯ ತಗ್ಗು ಪ್ರದೇಶದ ಸರ್ಕಾರಿ ಸಮುದಾಯ ಆಸ್ಪತ್ರೆಗೆ ಮಳೆ ನೀರು ಹರಿದಿದೆ. ಪ್ರತಿ ನಿಮಿಷಕ್ಕೆ ಹೆಚ್ಚಾದ ನೀರು ಅರ್ಧ ಗಂಟೆಯಲ್ಲಿ ಮೊದಲ ಅಂತಸ್ತಿನ ಕಟ್ಟಡ ತುಂಬಾ ನೀರು ಶೇಖರಣೆಯಾಗಿದೆ. ತಕ್ಷಣಕ್ಕೆ ಆತಂಕ ಮೂಡಿಸಿದ ಮಳೆ ನೀರು ನೋಡ ನೋಡುತ್ತಿದ್ದಂತೆ ಒಳ ರೋಗಿಗಳ ವಾರ್ಡ್ ಗಳತ್ತ ಹರಿದು ನಂತರ ಐಸಿಯು ಘಟಕದತ್ತ ನೀರು ಹರಿದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ಒಳ ರೋಗಿಗಳ ದಾಖಲಾತಿ ಪ್ರಕಾರ 11 ಪುರುಷರು, 5 ಮಂದಿ ಮಹಿಳಾ ರೋಗಿಗಳನ್ನು ಮೇಲಂತಸ್ತಿಗೆ ಶಿಫ್ಟ್ ಮಾಡಿದ ಸಿಬ್ಬಂದಿ ತಕ್ಷಣಕ್ಕೆ ಪರ್ಯಾಯ ವ್ಯವಸ್ಥೆ ಮಾಡಿ ಬೆಳಗ್ಗೆ ಮಳೆ ನೀರು ಹೊರ ಹಾಕುವ ಕೆಲಸ ಮಾಡಲಾಯಿತು.

1001222783

100 ಹಾಸಿಗೆಯ ಸುಸಜ್ಜಿತ ಸರ್ಕಾರಿ ಆಸ್ಪತ್ರೆ ಎನ್ನುವ ಅಂಶಕ್ಕೆ ಕಳಂಕವಾಗಿ ಮಳೆ ನೀರು ವ್ಯವಸ್ಥಿತವಾಗಿ ಹರಿಸುವ ಚರಂಡಿ ಇಲ್ಲದಿರುವುದು ವಿಪರ್ಯಾಸ. ಒಳ ಹೊಕ್ಕ ನೀರು ನಮಗೆ ಭಯ ತಂದಿತು ಎಂದು ರೋಗಿಗಳ ಜೊತೆ ಇದ್ದ ಸಂಬಂಧಿಕರ ಅಳಲು ತೋಡಿಕೊಂಡರು.

ಹೆದ್ದಾರಿ ರಸ್ತೆಗಿಂತ ತಗ್ಗಿನಲ್ಲಿ ಆಸ್ಪತ್ರೆಯ ಕಟ್ಟಡ ಇದ್ದು, ಈ ಹಿಂದೆ ರಸ್ತೆಯಲ್ಲಿ ಹರಿಯುವ ನೀರು ಆಸ್ಪತ್ರೆಯ ಅವರಣಕ್ಕೆ ಬರುತ್ತಿತ್ತು. ಇದರ ನಿಯಂತ್ರಣಕ್ಕೆ ಕೆಲ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದರೂ ಜೋರು ಮಳೆಗೆ ಇಡೀ ಕಟ್ಟಡ ಜಲ ದಿಗ್ಬಂಧನಕ್ಕೆ ಒಳಗಾಯಿತು. ತಗ್ಗು ಪ್ರದೇಶದ ಕಟ್ಟಡಕ್ಕೆ ಮಳೆ ನೀರು ಬಾರದಂತೆ ಕೂಡಲೇ ವೈದ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನ | ಪ್ರತಿಭಟನೆ ಹತ್ತಿಕ್ಕುವ ಪ್ರಜಾಪ್ರಭುತ್ವ ವಿರೋಧಿ ಕ್ರಮ ಖಂಡಿಸಿ ಜನಪರ ಒಕ್ಕೂಟ ಪ್ರತಿಭಟನೆ 

ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಜಾಪ್ರಭುತ್ವ ವಿರೋಧಿ ಕ್ರಮವನ್ನು ಖಂಡಿಸಿ ಹಾಸನದ ಹೇಮಾವತಿ ಪ್ರತಿಮೆಯ...

ಚಿಕ್ಕಮಗಳೂರು | SIR ವಿರೋಧ: ಫಾರಂ – 7ರಲ್ಲಿ ತಪ್ಪು ಮಾಹಿತಿ ನೀಡಿ, ಮತವಂಚಿಸಲಾಗಿದೆ; ಎದ್ದೇಳು ಕರ್ನಾಟಕ 

SIR ವಿರೋಧಿಸಿ, ಚುನಾವಣಾ ಆಯುಕ್ತರಾದ ಜ್ಞಾನೇಶ್‌ಕುಮಾರ್‌ರವರನ್ನು ವಜಾಗೊಳಿಸಲು ಮತ್ತು ಫಾರಂ ನಂ.7...

ಗದಗ | ಮಾಜಿ ಗ್ರಾ. ಪಂ ಸದಸ್ಯನ ಬರ್ಬರ ಹತ್ಯೆ

ಲಕ್ಕುಂಡಿ ಗ್ರಾಮದ ಹೊರವಲಯದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರೊಬ್ಬರನ್ನು ಬರ್ಬರವಾಗಿ ಹತ್ಯೆ...

ಹಾವೇರಿ‌ | ಬಾಲಕರ ವಸತಿ ನಿಲಯಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ

ಚುನಾವಣಾ ಸಂಬಂಧಿತ ಕಾರ್ಯಗಳ ಪರಿಶೀಲನೆಯ ಜೊತೆಗೆ, ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ...