ಗುಬ್ಬಿ | ರಸ್ತೆ ಬದಿಯಲ್ಲಿ ಬಲಿಗಾಗಿ ಕಾದು ನಿಂತ ಬೃಹತ್ ಒಣ ಮರಗಳು : ತೆರವುಗೊಳಿಸದ ಬಗ್ಗೆ ರೈತ ಸಂಘ ಆಕ್ರೋಶ

Date:

ಗುಬ್ಬಿ ತಾಲ್ಲೂಕಿನ ಹಲವು ಪ್ರಮುಖ ರಸ್ತೆಯ ಬದಿಯಲ್ಲಿ ಒಣಗಿ ನಿಂತ ಮರಗಳು ಜೀವ ಬಲಿಗೆ ಕಾದಿವೆ. ಒಣ ಮರಗಳು, ಒಣಗಿದ ಕೊಂಬೆಗಳು ತೆರವು ಮಾಡದಿದ್ದಲ್ಲಿ ಅಮಾಯಕರ ಪ್ರಾಣ ಹಾನಿ ಖಂಡಿತ. ಕೂಡಲೇ ರಸ್ತೆಯ ಎರಡೂ ಬದಿಯಲ್ಲಿ ಒಣಗಿದ ಮರಗಳನ್ನು ತೆರವು ಮಾಡಬೇಕು ಎಂದು ರೈತ ಸಂಘ ಒತ್ತಾಯ ಮಾಡಿದೆ.

- Advertisement -

ನಿಟ್ಟೂರು ಕಡಬ ಮಾರ್ಗವಾಗಿ ಕಲ್ಲೂರು ಕ್ರಾಸ್ ಮಾರ್ಗ, ಚೇಳೂರು ಹೊಸಕೆರೆ ಮಾರ್ಗ, ನಿಟ್ಟೂರು ಚೇಳೂರು ಮಾರ್ಗ, ಸಿ.ಎಸ್.ಪುರ ಮಾರ್ಗ ಹೀಗೆ ಎಲ್ಲಾ ಪ್ರಮುಖ ರಸ್ತೆಗಳ ಬದಿಯಲ್ಲಿರುವ ನೂರಾರು ವರ್ಷದ ಮರಗಳು ಈಗಾಗಲೇ ಒಣಗಿ ನಿಂತಿವೆ. ರಸ್ತೆ ಬದಿಯಲ್ಲೇ ಸುಮಾರು ಹದಿನೈದು ಇಪ್ಪತ್ತು ಅಡಿ ಎತ್ತರದ ಒಣ ಮರಗಳು ಯಾವ ಕ್ಷಣದಲ್ಲಾದರೂ ರಸ್ತೆಗೆ ಬಿದ್ದು ವಾಹನ ಸವಾರರನ್ನು ಬಲಿ ಪಡೆಯುವುದು ಖಚಿತ. ಈ ವಿಚಾರ ಹಲವು ಬಾರಿ ಅರಣ್ಯ ಮತ್ತು ಲೋಕೋಪಯೋಗಿ ಇಲಾಖೆಗೆ ತಿಳಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್ ದೂರಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...
WhatsApp Image 2024 09 22 at 16.06.22 44d176fe

ನಿಟ್ಟೂರು ಕಲ್ಲೂರು ಕ್ರಾಸ್ ರಸ್ತೆಯೊಂದರಲ್ಲೇ ಇಪ್ಪತ್ತು ಮರಗಳು ಸಂಪೂರ್ಣ ಒಣಗಿ ನಿಂತಿವೆ. ಸರಿ ಸುಮಾರು ಮೂವತ್ತು ನಲವತ್ತು ವರ್ಷ ವಯಸ್ಸಿನ ವಿವಿಧ ಕಾಡು ಜಾತಿಯ ಮರಗಳು ಒಣಗಿರುವ ಕಾರಣ ತೆರವು ಮಾಡಲು ಯಾವ ಕಸುಬುದಾರರು ಮುಂದಾಗಿಲ್ಲ. ಕೇವಲ ಸೌದೆಯಾಗಿ ಬಳಕೆಯಾಗುವ ಮರವನ್ನು ತೆರವು ಮಾಡಲು ಯಾರೋ ಬರುತ್ತಿಲ್ಲ ಎಂಬ ಕಾರಣವನ್ನು ನೆಪ ಮಾಡಿಕೊಂಡು ಅರಣ್ಯ ಇಲಾಖೆ ವಿಳಂಬ ಅನುಸರಿಸಿದೆ. ವಾಸ್ತವದಲ್ಲಿ ಜೋರು ಮಳೆ ಬಂದರೆ ಒಣ ಮರಗಳು ಧರೆಗುರುಳುವುದು ನಿಶ್ಚಿತ. ಉರುಳುವ ವೇಳೆ ಗ್ರಹಚಾರ ಯಾರ ಪ್ರಾಣಬಲಿ ಕಾದಿದೆಯೋ ತಿಳಿಯದು ಎಂದು ಸ್ಥಳೀಯರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

WhatsApp Image 2024 09 22 at 16.04.11 472621fd

ಸಾರ ಕಳೆದುಕೊಂಡು ಒಣಗಿದ ಮರಕ್ಕೆ ಸತ್ವ ಇಲ್ಲದ ಬೇರು ಇರುತ್ತದೆ. ಮಳೆಗಾಲದಲ್ಲಿ ಸಡಿಲವಾಗುವ ಮಣ್ಣು ಬೇರು ಸಹಿತ ಒಣ ಮರ ಬೀಳುತ್ತದೆ. ರಸ್ತೆಗೆ ಬಿದ್ದರೆ ಬಲಿ ಖಚಿತ. ಪಕ್ಕದ ವಿದ್ಯುತ್ ಕಂಬಗಳು, ವೈರ್ ಗಳ ಮೇಲೆ ಬಿದ್ದರೆ ಮತ್ತೊಂದು ತಲೆ ನೋವು ಕಟ್ಟಿಟ್ಟ ಬುತ್ತಿ. ಈ ಎಲ್ಲಾ ತೊಂದರೆ ವಿಸ್ತರಿಸಿ ಮೌಖಿಕವಾಗಿ ಮತ್ತು ಲಿಖಿತವಾಗಿ ದೂರು ನೀಡಿದರೂ ಕ್ರಮ ಕೈಗೊಳ್ಳುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಪ್ರಾಣ ಹಾನಿಯಾದಲ್ಲಿ ಅರಣ್ಯ ಹಾಗೂ ಲೋಕೋಪಯೋಗಿ ಇಲಾಖೆ ಹೊಣೆ ಹೊರಬೇಕು ಎಂದು ಆಗ್ರಹಿಸಿರುವ ರೈತ ಸಂಘ ಬೆಲೆ ಬಾಳುವ ಮರಗಳನ್ನು ಕ್ಷಣಾರ್ಧದಲ್ಲಿ ಕಡಿದುರುಳಿಸುವ ಮಂದಿ ಇರುವಾಗ್ಗೆ ಕೇವಲ ಸೌದೆಗೆ ಬರುವ ಮರಗಳನ್ನು ಕಡಿಯಲು ಜನವೇ ಬರುತ್ತಿಲ್ಲ ಎನ್ನುವ ಇಲಾಖೆ ಸಾರ್ವಜನಿಕ ಹಿತಾಸಕ್ತಿ ಮೇಲೆ ಕೂಡಲೇ ತಾಲ್ಲೂಕಿನ ಪ್ರಮುಖ ರಸ್ತೆಯಲ್ಲಿ ಒಣಗಿ ನಿಂತ ಮರಗಳನ್ನು ತೆರವು ಮಾಡಬೇಕು ಎಂದು ಆಗ್ರಹಿಸಿದರು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಗೃಹಜ್ಯೋತಿ ದಾಖಲೆ ಮರುಪರಿಶೀಲನೆಗೆ ಅ.31ರವರೆಗೆ ಕಾಲಾವಕಾಶ ವಿಸ್ತರಣೆ: ರಮೇಶ್ ಕಾಂಚನ್

ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ದಾಖಲೆಗಳ ಮರುಪರಿಶೀಲನಾ ಪ್ರಕ್ರಿಯೆಯ ಅವಧಿಯನ್ನು ಅಕ್ಟೋಬರ್ 31ರವರೆಗೆ...

ಉಡುಪಿ | ನೆಟ್‌ವರ್ಕ್ ಸಮಸ್ಯೆ ಬಗೆಹರಿಸಿ, ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡಿ: ಕೋಟ ಶ್ರೀನಿವಾಸ ಪೂಜಾರಿ

ಬಿ.ಎಸ್.ಎನ್.ಎಲ್. ಸಂಸ್ಥೆಯು ನೆಟ್‌ವರ್ಕ್ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಿ, ಖಾಸಗಿ ಟೆಲಿಕಾಂ ಕಂಪನಿಗಳಿಗೆ...

ಕಾರವಾರ | ಅಕ್ಟೋಬರ್ 16ರಂದು ಹಾರವಾಡದಿಂದ ಮಾಜಾಳಿವರೆಗೆ ಮೀನುಗಾರಿಕೆಗೆ ನಿರ್ಬಂಧ

ಕಾರವಾರ: ಗೌರವಾನ್ವಿತ ಉಪರಾಷ್ಟ್ರಪತಿ ಹಾಗೂ ರಾಜ್ಯಪಾಲರು ಅಕ್ಟೋಬರ್ 16ರಂದು ಉತ್ತರ ಕನ್ನಡ...