ವಿಜಯಪುರ | ಅರ್ಧ ಶತಮಾನದ ಉರ್ದು ಶಾಲೆಗೆ ಬೇಕಿದೆ ಮೂಲ ಸೌಕರ್ಯ

Date:

ಈ ಶಾಲೆಯ ಮಕ್ಕಳಿಗೆ ಶೌಚಾಲಯ, ಶುದ್ಧ ಕುಡಿಯುವ ನೀರು, ಆಟದ ಮೈದಾನ ಇಲ್ಲ. ಇನ್ನು ಶಾಲೆಗೆ ಕಾಂಪೌಂಡ್‌ ವ್ಯವಸ್ಥೆ ಇಲ್ಲದ ಕಾರಣ ಪ್ರಾಣಿಗಳ ಆಶ್ರಯ ತಾಣವಾಗಿ ಮಾರ್ಪಟ್ಟಿದೆ. ಶಿಥಿಲಗೊಂಡ ಕೋಣೆಯಲ್ಲಿ ಭಯದಲ್ಲೇ ಕುಳಿತು ಮಕ್ಕಳು ಪಾಠ ಕೇಳಬೇಕಾದ ಅನಿವಾರ್ಯ.

- Advertisement -

ಹೌದು, ಇದು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕು ಕೇಂದ್ರದ ಹೃದಯಭಾಗದಲ್ಲಿರುವ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಗನಕ್ಕೇರಿದ ಅಕ್ಕಿ ಬೆಲೆ: ತತ್ತರಿಸಿದ ಬಡ, ಮಧ್ಯಮ ವರ್ಗದ...

ರಾಜ್ಯಾದ್ಯಂತ ತೀವ್ರ ಮಳೆ ಕೊರತೆ ಮತ್ತು ಬರಗಾಲದ ಕರಿಛಾಯೆ ಕೃಷಿ ಕ್ಷೇತ್ರವನ್ನು ತತ್ತರಿಸುವಂತೆ ಮಾಡಿದೆ. ಅನ್ನದಾತನ ಬದುಕನ್ನು ಸಂಕಷ್ಟಕ್ಕೆ ನೂಕಿದ್ದ ಈ ಬರಗಾಲದ ಬಿಸಿ ಇದೀಗ ನೇರವಾಗಿ ಜನಸಾಮಾನ್ಯರ ತಟ್ಟೆಗೆ ತಟ್ಟಿದ್ದು, ಅಕ್ಕಿಯ...

ಬೆಳಗಾವಿ | ಬಿಸಿಲಿಗೂ ಕುಗ್ಗದೆ ಕಬ್ಬಿಗೆ ₹5500 ಬೆಲೆಗಾಗಿ...

ಕಬ್ಬಿಗೆ ಪ್ರತಿ ಟನ್‌ಗೆ ₹5,500 ಬೆಲೆ ನೀಡಬೇಕು, ಸಕ್ಕರೆಗೆ ಪ್ರತಿ ಕೆ.ಜಿ.ಗೆ ₹60 ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿಪಡಿಸಬೇಕು ಹಾಗೂ ಸ್ವಾಮಿನಾಥನ್‌ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಬೆಳಗಾವಿ ಜಿಲ್ಲೆಯ...

ಈ ದಿನ ಕವಿತೆ | ನನ್ನವ್ವನ ನೋಟ್ ಪುಸ್ತಕ...

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಈ ಬಾರಿ ಗುಜರಾತಿನ ಕವಿ, ಕಲಾವಿದರಾದ ಜಯಂತ್ ಪರ್ಮಾರ್ ಅವರ ಒಂದು ಉರ್ದು ಕವನದ ಇಂಗ್ಲಿಷ್ ಅನುವಾದವನ್ನು ಕನ್ನಡಕ್ಕೆ ತಂದಿದ್ದಾರೆ ಹಿರಿಯ ಅನುವಾದಕಿ ಸಿ ಎಚ್‌ ಭಾಗ್ಯ ಬೇವಿನ...

ಪಟ್ಟಣ ಪಂಚಾಯಿತಿ ಬಳಿಯ ವಾರ್ಡ- 6 ರಲ್ಲಿರುವ ಈ ಶಾಲೆ 1ರಿಂದ 7ನೇ ತರಗತಿವರೆಗೆ ಇದೆ. ಒಟ್ಟು 65 ಮಕ್ಕಳು ಓದುತ್ತಿದ್ದಾರೆ. ಮುಖ್ಯಗುರು ಸೇರಿ ನಾಲ್ಕು ಶಿಕ್ಷಕರಿದ್ದಾರೆ. ಆದರೆ ಕೊಠಡಿಗಳ ಕೊರೆತೆಯಿಂದ ಇಲ್ಲಿನ ಮಕ್ಕಳು ಸುಸಜ್ಜಿತ ತರಗತಿ ಕೋಣೆ ಸೇರಿದಂತೆ ಅಗತ್ಯ ಮೂಲಸೌಕರ್ಯದಿಂದ ವಂಚಿತವಾಗಿದೆ.

ʼ1964 ರಲ್ಲಿ ಪ್ರಾರಂಭವಾದ ಈ ಶಾಲೆ ನಿಡಗುಂದಿಯ ಹೃದಯ ಭಾಗದಲ್ಲಿತ್ತು. ಆದರೆ, 2003ರಲ್ಲಿ ಶಾಸಕರ ಅನುದಾನದಿಂದ ಬೇರೆ ಸರ್ಕಾರಿ ಜಾಗದಲ್ಲಿ ಎರಡು ಹೊಸ ಕಟ್ಟಡದೊಂದಿಗೆ ನಿರ್ಮಾಣ ಮಾಡಲಾಗಿತ್ತು. ಆರು ದಶಕ ಹಳೆಯ ಉರ್ದು ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಅರ್ಧ ಶತಮಾನದ ಈ ಶಾಲೆ ಇಂದು ಮೂಲಭೂತ ಸೌಕರ್ಯಗಳಿಲ್ಲದೇ ಸೊರಗಿರುವುದು ಬೇಸರದ ಸಂಗತಿʼ ಎಂಬುದು ಇಲ್ಲಿಯ ಸ್ಥಳೀಯರ ಅಭಿಪ್ರಾಯ.

WhatsApp Image 2024 07 24 at 8.31.19 PM
ದುಸ್ಥಿತಿಯಲ್ಲಿರುವ ಶಾಲಾ ಶೌಚಾಲಯ

ʼಕಳೆದ 20 ವರ್ಷಗಳ ಹಿಂದೆ ನಿರ್ಮಿಸಿಲಾದ ಶಾಲಾ ಕಟ್ಟಡ ಕಳಪೆ ಕಾಮಗಾರಿಯಿಂದ ಬಹುತೇಕ ಶಿಥಿಲಾವಸ್ಥೆಗೆ ತಲುಪಿದೆ. ಮೂರು ಕೊಠಡಿಗಳು ಮಳೆ ಬಂದರೆ ಸೋರುತ್ತವೆ. ಎರಡು ಕೋಣೆ ಕಳಪೆ ಕಾಮಗಾರಿಯಿಂದ ಕುಸಿದು ಬಿದ್ದಿವೆ. ಒಂದು ಕೊಠಡಿಗೆ ಛಾವಣಿ ಇಲ್ಲದಿರುವುದರಿಂದ ತಗಡಿನ ಶೀಟ್ ಹಾಕಿ ನಡೆಸುತ್ತಿದ್ದೇವೆ. ಆದರೆ, ಮಳೆ ಬಂದರೆ ತರಗತಿ ನಡೆಸಲು ತೊಂದರೆಯಾಗುತ್ತಿದೆʼ ಎಂದು ಹೆಸರು ಹೇಳಲು ಇಚ್ಚಿಸದ ಶಿಕ್ಷಕರೊಬ್ಬರು ಮಾಹಿತಿ ನೀಡಿದ್ದಾರೆ.

ಕುಡಿಯುವ ನೀರು, ಶೌಚಾಲಯ ಇಲ್ಲ

ಈ ಶಾಲೆಯ ಮಕ್ಕಳಿಗೆ ಕುಡಿಯುವ ನೀರಿಲ್ಲ, ಹೀಗಾಗಿ ಮನೆಯಿಂದಲೇ ಬಾಟಲಿ ನೀರು ತರಬೇಕಾದ ಪರಿಸ್ಥಿತಿ ಇದೆ. ಇನ್ನು ಶೌಚಾಲಯ ಇಲ್ಲದ ಕಾರಣ ಮಕ್ಕಳ ಶೌಚಕ್ಕೆ ಬಯಲೇ ಗತಿಯಾಗಿದೆ. ಇಂತಹ ಮೂಲ ಸೌಕರ್ಯ ಕೊರತೆಯಿಂದ ಕೂಡಿದ ಶಾಲೆಯ ಬಗ್ಗೆ ಉತ್ಸಾಹ ತೋರದ ಪೋಷಕರು, ಪ್ರಸಕ್ತ ಸಾಲಿನಲ್ಲಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿದ್ದಾರೆ.

WhatsApp Image 2024 07 24 at 8.30.06 PM
ಕೋಣೆ ಮೇಲ್ಛಾವಣಿಯ ಸಿಮೆಂಟ್‌ ಕಳಚಿ ಬಿದ್ದಿರುವುದು

ʼಶಾಲೆಗೆ ಅಗತ್ಯವಾದ ಮೂಲ ಸೌಕರ್ಯ ಕೊರತೆಯ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದರೆ, ಇಲ್ಲಿಯವರೆಗೆ ಹೊಸ ಕೋಣೆ ಸೇರಿದಂತೆ ಯಾವುದೇ ಮೂಲ ಸೌಲಭ್ಯ ಒದಗಿಸಲು ಕ್ರಮ ಕೈಗೊಂಡಿಲ್ಲʼ ಎಂದು ಶಾಲೆಯ ಮುಖ್ಯ ಗುರು ಅಬ್ದುಲ್ ರಝಾಕ್ ಹೇಳಿದರು.

ಕ್ಷೇತ್ರ ಶಿಕ್ಷಣದಿಕಾರಿ ವಸಂತ ರಾಠೋಡ್ ಈ ದಿನ.ಕಾಮ್‌ ಜೊತೆಗೆ ಮಾತನಾಡಿ, “ಶಾಲೆಯ ಸಮಸ್ಯೆಗಳ ಬಗ್ಗೆ  ನಮ್ಮ ಗಮನದಲ್ಲಿವೆ. ಜಿಲ್ಲಾ ಪಂಚಾಯತ್‌ ಸಿಇಒ ಅವರು ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆದಷ್ಟು ಬೇಗ ಶಾಲೆಯ ಸಮಸ್ಯೆಗಳು ಬಗೆಹರಿಸಲಾಗುವುದು” ಎಂದು ಭರವಸೆ ನೀಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ದೇಶದಲ್ಲೇ ಅತಿಹೆಚ್ಚು ಪಿಂಚಣಿ ನೀಡುತ್ತಿರುವ ರಾಜ್ಯ ಕರ್ನಾಟಕ: ಕೃಷ್ಣ ಬೈರೇಗೌಡ

ಸ್ಥಳೀಯ ಜನಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಶಾಲೆಯ ಸಮಸ್ಯೆ ಬಗೆಹರಿಸಿ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡುವರೇ ಎಂದು ಕಾದು ನೋಡಬೇಕಿದೆ.

?s=150&d=mp&r=g
ರಮೇಶ್ ಹೊಸಮನಿ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಮದರಕಲ್ ಅಂಬಾ ಮಠದ ವಿರುದ್ಧ ಸುಳ್ಳು ಆರೋಪ: ಅಮರೇಶ್ ಪಾಟೀಲ್

ದೇವದುರ್ಗ ತಾಲ್ಲೂಕು ಮದರಕಲ್‌ ಗ್ರಾಮದ ಅವದೂತ ರಾಜಯೋಗಿ ಸಂತ ನಾಮದೇವಗೌಡ ಶರಣರ...

ಉಡುಪಿ | ಕರಾವಳಿ ಇಲ್ಲದೆ ಕರ್ನಾಟಕದ ಅಸ್ಮಿತೆ ಇಲ್ಲ: ಸಿಎಂ ಡಿ ಕೆ ಶಿವಕುಮಾರ್ ಬಣ್ಣನೆ

"ಕರಾವಳಿ ಇಲ್ಲದೆ ಕರ್ನಾಟಕ ಪೂರ್ಣವಾಗುವುದಿಲ್ಲ. ಈ ಭಾಗದ ಧಾರ್ಮಿಕ, ಸಾಂಸ್ಕೃತಿಕ ಹಾಗೂ...

ಪಡಿತರ ಚೀಟಿದಾರರಿಗೆ ಇ-ಕೆವೈಸಿ ಮಾಡಿಸಲು ಅ. 20ರವರೆಗೆ ಕಾಲಾವಕಾಶ ವಿಸ್ತರಣೆ

ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ಪಡೆಯುತ್ತಿರುವ ಆದ್ಯತಾ...

ಗದಗ | ಯುವ ಸಂಸತ್ತು ಪೂರ್ವಭ್ಯಾಸ ಕಾರ್ಯಕ್ರಮ ಯಶಸ್ವಿಯಾಗಿ ಆಯೋಜಿಸಲು ಜಿಲ್ಲಾಧಿಕಾರಿ ಸೂಚನೆ

"ಜಿಲ್ಲಾ ಮಟ್ಟದ ಮಾದರಿ ಯುವ ಸಂಸತ್ತು ಪೂರ್ವಭ್ಯಾಸ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಹಾಗೂ...