ಹಾಸನ | ಕಸದ ರಾಶಿಯಲ್ಲಿ ಕಾಲೇಜು: ಸ್ವಚ್ಛತೆಗೆ ಯಾರು ಹೊಣೆ? ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆಯೇ?

Date:

ರಸ್ತೆ ಬದಿಯಲ್ಲಿ ಕಸದ ರಾಶಿ ಹಾಗೂ ದುರ್ವಾಸನೆ ಕಂಡು ವಿದ್ಯಾರ್ಥಿಗಳು, ಸಾರ್ವಜನಿಕರ ಆಕ್ರೋಶ 

- Advertisement -

ಓದಲು ಶಾಲಾ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಪ್ರಶಾಂತವಾದ ಗಾಳಿ ಹಾಗೂ ಒಳ್ಳೆಯ ಸ್ವಚ್ಛ ವಾತಾವರಣವಿದ್ದರೆ ಮತ್ತಷ್ಟು ಕಾಲೇಜಿನ ವಾತಾವರಣ ಕಂಗೊಳಿಸುತ್ತದೆ, ಶುದ್ಧ ಗಾಳಿಯಿಂದ ಒಳ್ಳೆಯ ಆರೋಗ್ಯ ವೃದ್ಧಿಯಾಗುತ್ತದೆ. ಆದರೇ, ಹಾಸನ ನಗರದ ಆರ್.ಸಿ. ರಸ್ತೆಯ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಗಂಧದಕೋಠಿ) ಆವರಣದ ಸಮೀಪ ರಸ್ತೆಯ ಬದಿಯಲ್ಲಿ ಪ್ಲಾಸ್ಟಿಕ್, ಆಹಾರದ ತ್ಯಾಜ್ಯ ಸೇರಿದಂತೆ ಕಸವನ್ನು ಎಲ್ಲೆಂದರಲ್ಲಿ ಎಸೆಯಲಾಗುತ್ತಿದೆ. ಕಸದ ರಾಶಿಯಿಂದ ದುರ್ವಾಸನೆ ಹರಡುತ್ತಿದ್ದು, ಸೊಳ್ಳೆ–ನೊಣಗಳ ಕಾಟ ಹೆಚ್ಚಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ಹನಿ ನೀರಿಗೂ ಪರದಾಡುತ್ತಿರುವ ದಣ್ಣೂರು...

ಎರಡು ನಳಗಳ ಮುಂದೆ ಖಾಲಿ ಕೊಡ ಹಿಡಿದು ಗಂಟೆಗಟ್ಟಲೆ ಕಾಯುವ ಮಹಿಳೆಯರು; ಬೆಳೆ ನಷ್ಟ, ಜಾನುವಾರು ಮಾರಾಟ, ಉದ್ಯೋಗದ ಕೊರತೆಯಿಂದ ಗ್ರಾಮ ತೊರೆಯುತ್ತಿರುವ ಕುಟುಂಬಗಳು ಒಂದು ಕೊಡ ನೀರಿಗಾಗಿ ಮನೆಮನೆಯ ಮುಂದೆ ಕಾಯಬೇಕು....

‘ನನ್ನೊಳಗೆ ನೀವೊ ನಿಮ್ಮೊಳಗೆ ನಾನೊ’

ಲೇಹ್ ಲಡಾಕಿನ ಪರ್ವತ ಶ್ರೇಣಿಗಳ ನಡುವೆ ನಮ್ಮ ಕಾರು ನಿಧಾನವಾಗಿ ಸಾಗುತ್ತಿತ್ತು. ಬೇರೆ ಬೇರೆ ಬಣ್ಣಗಳ ಪರ್ವತ ಶಿಖರಗಳು, ಕೆಳಗಡೆ ಕಿಲೋಮಿಟರ್ ಉದ್ದದ ಕಿರಿದಾದ ರಸ್ತೆ, ಪಕ್ಕದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಕಾಣುವ...

ಕಾರ್ಪೊರೇಟ್‌ ಕಾಳಗ | ಮಸ್ಕ್‌ನ ಸ್ಟಾರ್‌ಲಿಂಕ್ ಮಣಿಸಿ ಅಂಬಾನಿಯ...

ಎಲಾನ್ ಮಸ್ಕ್ ಒಡೆತನದ ‘ಸ್ಟಾರ್‌ಲಿಂಕ್’ ಉಪಗ್ರಹ ಇಂಟರ್ನೆಟ್ ಭಾರತಕ್ಕೆ ಕಾಲಿಡುತ್ತಿದ್ದಂತೆ ರಿಲಯನ್ಸ್ ಜಿಯೋದ ಮಾರುಕಟ್ಟೆ ಏಕಸ್ವಾಮ್ಯಕ್ಕೆ ಭಾರಿ ಪೈಪೋಟಿ ಎದುರಾಗುವಂತೆ ಕಾಣುತ್ತಿದೆ. ಈ ಬೆನ್ನಲ್ಲೇ, ರಾಷ್ಟ್ರೀಯ ಭದ್ರತೆ ಮತ್ತು ದತ್ತಾಂಶ ಸುರಕ್ಷತೆಯ ನೆಪವೊಡ್ಡಿ...
Screenshot 2026 09 10 08 08 27 50 7352322957d4404136654ef4adb64504
ಕಾಲೇಜಿನ ಆವರಣದಲ್ಲಿ ಕಸದ ರಾಶಿ

ಕಸದ ರಾಶಿಯಿಂದ ಪರಿಸರ, ಮಾನವನ ಆರೋಗ್ಯ ಮತ್ತು ಪ್ರಾಣಿ ಸಂಕುಲದ ಮೇಲೆ ಪರಿಣಾಮಗಳು ಉಂಟಾಗುತ್ತವೆ. ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ನಗರೀಕರಣದಿಂದಾಗಿ ಕಸದ ವಿಲೇವಾರಿ ಇಂದು ಜಾಗತಿಕ ಸಮಸ್ಯೆಯಾಗಿದೆ. ರೋಗಗಳ ಹರಡುವಿಕೆ ಹೆಚ್ಚಾಗುತ್ತದೆ, ಕಸದ ರಾಶಿಗಳು ಸೊಳ್ಳೆಗಳು, ನೊಣಗಳು, ಇಲಿಗಳು ಮತ್ತು ಜಿರಳೆಗಳ ಸಂತಾನೋತ್ಪತ್ತಿಗೆ ಪ್ರಮುಖ ತಾಣಗಳಾಗುತ್ತವೆ. ಇದರಿಂದ ಮಲೇರಿಯಾ, ಡೆಂಗ್ಯೂ, ಕಾಲರಾ, ಮತ್ತು ಪ್ಲೇಗ್‌ನಂತಹ ಮಾರಕ ರೋಗಗಳು ಎಲ್ಲೆಡೆ ಹರಡುತ್ತದೆ.

Screenshot 2026 09 11 12 54 52 37 7352322957d4404136654ef4adb64504

ಕಸಕ್ಕೆ ಬೆಂಕಿ ಹಚ್ಚುವುದರಿಂದ ಹೊರಬರುವ ವಿಷಕಾರಿ ಹೊಗೆಯಿಂದಾಗಿ ಜನರಲ್ಲಿ ಅಸ್ತಮಾ, ಬ್ರಾಂಕೈಟಿಸ್ ಮತ್ತು ಇತರ ಉಸಿರಾಟದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಹಾಗೆಯೇ, ಪರಿಸರ ಮಾಲಿನ್ಯ ಹೆಚ್ಚಾಗುತ್ತದೆ. ಕಸದ ರಾಶಿ ಕೊಳೆಯುವಾಗ ಮೀಥೇನ್ ಮತ್ತು ಕಾರ್ಬನ್ ಡೈಆಕ್ಸೈಡ್‌ನಂತಹ ಹಸಿರುಮನೆ ಅನಿಲಗಳು ಬಿಡುಗಡೆಯಾಗಿ ಜಾಗತಿಕ ತಾಪಮಾನ ಏರಿಕೆಗೆ (Global Warming) ಕಾರಣವಾಗುತ್ತದೆ. ಮಳೆ ಬಂದಾಗ ಕಸದ ರಾಶಿಯಲ್ಲಿರುವ ವಿಷಕಾರಿ ರಾಸಾಯನಿಕಗಳು ನೀರಿನೊಂದಿಗೆ ಬೆರೆತು ಹತ್ತಿರದ ಕೆರೆ, ನದಿಗಳನ್ನು ಸೇರುತ್ತವೆ. 

Screenshot 2026 09 11 12 55 02 09 7352322957d4404136654ef4adb64504

ಮಹಿಳಾ ಕಾಲೇಜು ಹಿಂಭಾಗದ ರಸ್ತೆಯಲ್ಲಿ ಕಸದ ರಾಶಿ ಬಿದ್ದಿದೆ. ಪ್ಲಾಸ್ಟಿಕ್ ಚೀಲಗಳು ಕಾಗದ ಆಹಾರದ ಪಟ್ಟಣಗಳು ಹಾಗೂ ಇತರೆ ತ್ಯಾಜ್ಯಗಳು ಸೇರಿದಂತೆ ಮಧ್ಯದ ಬಾಟಲಿಗಳು ಮತ್ತು ಸಿಗರೇಟ್ ಕವರ್ ಗಳು ಮತ್ತು ಮಧ್ಯದ ಬಾಟಲಿಯ ಗಾಜುಗಳು ಮಧ್ಯದ ರಸ್ತೆಯಲ್ಲಿ ಎಲ್ಲೆಂದರಲ್ಲಿ ಹರಡಿಕೊಂಡಿವೆ. ಕಸದ ರಾಶಿಯ ಸಮೀಪದಲ್ಲಿಯೇ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸಂಚರಿಸುವುದರಿಂದ ದುರ್ವಾಸನೆ ಹಾಗೂ ಅನಾರೋಗ್ಯಕರ ವಾತಾವರಣ ಉಂಟಾಗಿದ್ದು,  ವಿದ್ಯಾರ್ಥಿನಿಯರಿಗೆ ಗಾಜುಗಳ ಚೂರುಗಳು ಕಾಲುಗಳಿಗೆ ತಾಗಿ ತೊಂದರೆ ಉಂಟಾಗುವ ಆತಂಕ ಎದುರಾಗಿದೆ ಎಂದು ಈದಿನ.ಕಾಮ್ ಜೊತೆ ಅದೇ ಕಾಲೇಜಿನ ಪತ್ರಿಕೋದ್ಯಮ ವಿಭಾಗ, ವಿದ್ಯಾರ್ಥಿ ಮಾತಾಡಿದ್ದಾರೆ .

ಕಸದ ರಾಶಿಯಿಂದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ  ಸಂಬಂಧಪಟ್ಟ ಅಧಿಕಾರಿಗಳು ಕಸ ಎಸೆಯುವವರ ವಿರುದ್ಧ ದಂಡ ವಿಧಿಸಿ ಕ್ರಮ ಕೈಗೊಳ್ಳಳಬೇಕು. ಹಾಗೂ ಕಾಲೇಜಿನ ಸುತ್ತಮುತ್ತ CCTV ಅಳವಡಿಸಿ, ಕಸ ತೆರವುಗೊಳಿಸಬೇಕು ಎಂದು ವಿದ್ಯಾರ್ಥಿನಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಬದಿಯ ಕಸವನ್ನು ಶೀಘ್ರ ತೆರವುಗೊಳಿಸಿ ನಿಯಮಿತವಾಗಿ ಕಸ ಸಂಗ್ರಹಿಸುವ ವ್ಯವಸ್ಥೆ ಕಲ್ಪಿಸಬೇಕು. ಸಾರ್ವಜನಿಕರು ಕೂಡ ರಸ್ತೆ ಬದಿ ಅಥವಾ ಖಾಲಿ ಜಾಗದಲ್ಲಿ ಕಸ ಹಾಕದಂತೆ ಕ್ರಮ ಕೈಗೊಳ್ಳಬೇಕು ಎಂದು ಕಾಲೇಜಿನ ಉಪನ್ಯಾಸಕರು ಈ ದಿನ. ಕಾಮ್ ಜೊತೆ ತಿಳಿಸಿದ್ದಾರೆ.

ಇದನ್ನೂ ಓದಿದ್ದೀರಾ?ಹಾಸನ | ಅರಕಲಗೂಡು ‘ದ್ವಿತಳಿ ಬಿತ್ತನೆ ವಲಯ’ ಎಂದು ಘೋಷಿಸಲಾಗಿಲ್ಲ; ಸಂಸದ ಶ್ರೇಯಸ್ ಪಟೇಲ್ 

ಪರಿಸರ ಸೌಂದರ್ಯ ಮತ್ತು ಆರ್ಥಿಕತೆಯ ನಾಶ ರಸ್ತೆ ಬದಿಯ ಕಸದ ರಾಶಿಗಳು ದುರ್ವಾಸನೆ ಬೀರುವುದಲ್ಲದೆ, ನಗರ ನೈಸರ್ಗಿಕ ಸೌಂದರ್ಯವನ್ನು ಹಾಳುಮಾಡುತ್ತಿದೆ. ಇದು ಪ್ರವಾಸೋದ್ಯಮದ ಮೇಲೆಯೂ ಕೆಟ್ಟ ಪರಿಣಾಮ ಬೀರುತ್ತಿದೆ. ಇದನ್ನೂ ಸಂಬಂಧ ಪಟ್ಟ ಅಧಿಕಾರಿಗಳು ಗಮನವಹಿಸಿ ಈ ಸಮಸ್ಯೆಯನ್ನು ಆದಷ್ಟು ಬೇಗ ಬಗೆ ಹರಿಸಬೇಕಾಗಿದೆ.

WhatsApp Image 2024 10 24 at 12.02.30
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಕೃಷ್ಣ ಮೇಲ್ದಂಡೆ ಯೋಜನೆ; ಕೆರೆಗಳಿಗೆ ನೀರು ತುಂಬಿಸದ ಜನಪ್ರತಿನಿಧಿಗಳು; ರೈತರು ಆಕ್ರೋಶ

"ಅನೇಕ ವರ್ಷಗಳಿಂದ ತಾಲೂಕು ಬರಗಾಲಕ್ಕೆ ತುತ್ತಾಗುತ್ತಿದ್ದರೂ ಸಹ ಕೃಷ್ಣಾ ಮೇಲ್ದಂಡೆ ಯೋಜನೆ...

ಕಲಮರಹಳ್ಳಿಯ ಮಾದಿಗರ ಹಟ್ಟಿಯಲ್ಲಿ ಚರಂಡಿಯಿಲ್ಲದೆ ಹದಗೆಟ್ಟ ರಸ್ತೆ; ಸಾಂಕ್ರಾಮಿಕ ರೋಗದ ಭೀತಿ!

ಚಳ್ಳಕೆರೆ ತಾಲೂಕಿನ ಬೆಳಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲಮರಹಳ್ಳಿ ಗ್ರಾಮದ ಮಾದಿಗರ...

ರಾಮಮಂದಿರ ಲೂಟಿ: ಕಳ್ಳರು, ಅಪರಾಧಿಗಳನ್ನು ಮೋದಿ, ಶಾ, ಯೋಗಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್ ಆರೋಪ

ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಭಕ್ತರು ನೀಡಿದ ಕಾಣಿಕೆ ಹಣ ಮತ್ತು ದಾನದ...