ಹಾಸನ  | ಯಾರು ಎಷ್ಟೇ ದೊಡ್ಡಮಟ್ಟದ ಸಾಧನೆ ಮಾಡಿದರೂ ತಂದೆ- ತಾಯಿ ಗೌರವಿಸಿ; ತಾವರೆಕೆರೆ ಕಾಳಪ್ಪಸ್ವಾಮಿ ಮಠದ ಶಿವಪುತ್ರ ಸ್ವಾಮೀಜಿ

Date:

ಜಿಲ್ಲೆಯ ಅರಕಲಗೂಡು ಸಮೀಪದ ರಾಮನಾಥಪುರದಲ್ಲಿ ಭಾನುವಾರ ಕುರುಬರ ಸಂಘ, ಕನಕ ನೌಕರರ ಸಂಘ, ಹಾಲುಮತ ಮಹಾಸಭಾ ಹಾಗೂ ರೇವಣಸಿದ್ದೇಶ್ವರ ಮಠ, ಕನಕ ಭವನ ಅರಕಲಗೂಡು ಆಶ್ರಯದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಆಶೀರ್ವಚನ ಏರ್ಪಡಿಸಲಾಗಿತ್ತು.

- Advertisement -

‘ಯಾರು ಎಷ್ಟೇ ದೊಡ್ಡಮಟ್ಟದ ಸಾಧನೆ ಮಾಡಿದರೂ ತಂದೆ-ತಾಯಿಯರನ್ನು ನಿರ್ಲಕ್ಷಿಸಿದಲ್ಲಿ ನಿಮ್ಮ ವಿದ್ಯೆ ಮತ್ತು ಸಾಧನೆ ವ್ಯರ್ಥವಾಗುತ್ತದೆ’ ಎಂದು ತಾವರೆಕೆರೆ ಕಾಳಪ್ಪಸ್ವಾಮಿ ಮಠದ ಶಿವಪುತ್ರ ಸ್ವಾಮೀಜಿ ‘ ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಾಲಿವುಡ್‌ ಮೇಲೆ ಭೂಗತ ಲೋಕದ ಕರಿನೆರಳು: ದಾವೂದ್ ಇಬ್ರಾಹಿಂನಿಂದ...

ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾಗಳಿಗೆ ಹಣ ಹೂಡುತ್ತಿದ್ದ, ನಟ-ನಟಿಯರ ವೃತ್ತಿಜೀವನದ ಮೇಲೆ ಪ್ರಭಾವ ಬೀರುತ್ತಿದ್ದ ಭೂಗತ ಲೋಕ, ಈಗ ಗುಂಡಿನ ದಾಳಿ ಮತ್ತು ಜೀವಬೆದರಿಕೆಗಳ ಮೂಲಕ ಮತ್ತೊಮ್ಮೆ ತನ್ನ ಅಸ್ತಿತ್ವ ಪ್ರದರ್ಶಿಸುತ್ತಿದೆ. ದಾವೂದ್...

ಲೋಕಸಭೆಯ ಬಲ 850ಕ್ಕೆ ಏರಿಕೆ: ಕಲಾಪದ ಸಮಯ ಹೆಚ್ಚಳವಿಲ್ಲದಿದ್ದರೆ...

ಲೋಕಸಭೆಯ ಸದಸ್ಯರ ಬಲವನ್ನು 550ರಿಂದ 850ಕ್ಕೆ ಹೆಚ್ಚಿಸುವ ‘ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ–2026’ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. ಜನಸಂಖ್ಯೆಗೆ ಅನುಗುಣವಾಗಿ ಸೀಟುಗಳ ಹೆಚ್ಚಳ ಅನಿವಾರ್ಯವಾದರೂ, ಸಂಸತ್ತಿನ ವಾರ್ಷಿಕ ಕಲಾಪದ ದಿನಗಳು ಮತ್ತು...

ಸೌದಿ ಅರೇಬಿಯಾದ ಕಂಠನಾಳಕ್ಕೇ ಕೈಹಾಕಿರುವ ಯೆಮನ್!

ಸೌದಿ ಅರೇಬಿಯಾದ ಜೀವನಾಡಿಗೇ ಕೈಹಾಕಿರುವ ಯೆಮನ್‌ನ ಈ ಪ್ರತಿರೋಧವು ಕೇವಲ ಒಂದು ಯುದ್ಧದ ಕಥೆಯಲ್ಲ; ಇದು ಮಧ್ಯಪ್ರಾಚ್ಯದ ರಾಜಕೀಯ ಇತಿಹಾಸವನ್ನೇ ಮರುಬರೆಯಬಹುದಾದ ಸಂಘರ್ಷವಾಗಿದೆ. ಅಲ್ಲಿಯವರೆಗೆ, ಯೆಮನ್ ಕೇವಲ ಅರಬ್ ಜಗತ್ತಿಗಷ್ಟೇ ಅಲ್ಲ, ಇಡೀ...

‘ಹಣ ಸಂಪಾದನೆ ಒಂದು ಕುಟುಂಬದ ಆಸ್ತಿಯಾದರೆ, ವಿದ್ಯೆಗೆ ಸಮುದಾಯ, ರಾಜ್ಯ, ದೇಶದ ಆಸ್ತಿಯಾಗುವ ಶಕ್ತಿಯಿದೆ. ಎಲ್ಲರಲ್ಲೂ ಸಾಧನೆ ಮಾಡುವ ಸಾಮರ್ಥ್ಯವಿದೆ. ನಿಮ್ಮನ್ನು ನೀವು ನಿರ್ಲಕ್ಷಿಸಿಕೊಳ್ಳದೆ ನಿಮ್ಮ ಹಣೆಬರಹ ನೀವೇ ಬರೆದುಕೊಳ್ಳುವ ಶಪಥಮಾಡಿ ಬದುಕನ್ನು ಗೆಲ್ಲುವ ಪಣ ತೊಡುವವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ’ ಎಂದು ತಾವರೆಕೆರೆ ಕಾಳಪ್ಪಸ್ವಾಮಿ ಮಠದ ಶಿವಪುತ್ರ ಸ್ವಾಮೀಜಿ ತಿಳಿಸಿದರು.

Advertisements

ಈ ಕಾರ್ಯಕ್ರಮ ಉಧ್ಘಾಟಿಸಿದ ಶಾಸಕ ಎ.ಮಂಜು, ‘ಕುರುಬ ಸಮುದಾಯದಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಎಲ್ಲಾ ಸಮುದಾಯಗಳ ವಿದ್ಯಾರ್ಥಿಗಳನ್ನು ಗೌರವಿಸುತ್ತಿರುವುದು ಹೆಮ್ಮೆಯ ವಿಷಯ. ರಾಮನಾಥಪುರ ಕನಕಭವನ ನಿರ್ಮಾಣಕ್ಕೆ ಅತಿ ಹೆಚ್ಚು ಅನುದಾನ ನೀಡಿದ ತೃಪ್ತಿ ನನಗಿದೆ’ ಎಂದರು.

ಕನಕ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಎನ್. ಶಿವಕುಮಾರ್‌, ’12 ವರ್ಷಗಳಿಂದ ತಾಲ್ಲೂಕು ಕನಕ ನೌಕರರ ಸಂಘದ ವತಿಯಿಂದ ಮುನ್ನಡೆಸಿಕೊಂಡು ಬರುತ್ತಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಕಳೆದೆರಡು ವರ್ಷಗಳಿಂದ ಕುರುಬರ ಸಂಘದ ಸಹಯೋಗದಲ್ಲಿ ನಡೆಸುತ್ತಿದ್ದೇವೆ’ ಎಂದರು.

ಇದನ್ನೂ ಓದಿದ್ದೀರಾ?ಹಾಸನ | ರಾಜ್ಯದ ಹಲವು ಕಡೆ ಮಳೆ ಮುನ್ಸೂಚನೆ 

ಈ ವೇಳೆ ಎಸ್‌ಎ‌ಸ್‌ಎಲ್‌ಸಿ, ದ್ವಿತೀಯ ಪಿಯುಸಿ, ಪದವಿ, ವೈದ್ಯಕೀಯ ಎಂಜಿನಿಯರಿಂಗ್, ಸೇರಿದಂತೆ ವಿವಿಧ ವಿಭಾಗದ ‍ಪ್ರತಿಭಾವಂತ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಬರೆದಿರುವ ಕುರುಬ ಜನಾಂಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಈ ಸಂದರ್ಭದಲ್ಲಿ  ಸಂಸದ ಶ್ರೇಯಸ್‌ ಪಟೇಲ್‌, ಯುವ ವಿಜ್ಞಾನಿ ಡಾ. ಕೋಮಲ್‌ ಕುಮಾರ್‌, ಡಾ. ಮಹದೇಶ್‌ ಪ್ರಸಾದ್‌ ಮಾತನಾಡಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗೇಪಲ್ಲಿ: ಅಂತರರಾಜ್ಯ ಮಟ್ಟದ ಬಹುಭಾಷಾ ದಸರಾ ಕವಿಗೋಷ್ಠಿ

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ಪಟ್ಟಣಕ್ಕೆ ಸಮೀಪದ ಗಡಿದಂ ರಾಜರಾಜೇಶ್ವರಿ...

ಬಡತನ ಮೆಟ್ಟಿ ಬಿಲ್ಲುಗಾರಿಕೆ ಒಲಿಸಿಕೊಂಡ ದೇವಮ್ಮ: ಒಲಂಪಿಕ್ಸ್‌ ಕನಸಿಗೆ ಸ್ಪೂರ್ತಿ ತುಂಬಿದ ಎಂ.ಬಿ ಪಾಟೀಲ್‌

ಬಡತನದ ನಡುವೆಯೂ ಬಿಲ್ಲುಗಾರಿಕೆಯಲ್ಲಿ ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿರುವ ಕಲ್ಯಾಣ ಕರ್ನಾಟಕದ ಪ್ರತಿಭೆ...

ಉತ್ತರ ಕನ್ನಡ | ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ: ಜಿಲ್ಲೆಯಲ್ಲಿ 25 ಮತಗಟ್ಟೆ ಸಿದ್ಧ

ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಗೆ ಅಕ್ಟೋಬರ್ 23ರಂದು...