“ಪ್ರತಿಯೊಂದು ಜೀವಿ ಜೀವಿಸಲು ಪರಿಸರ ಪ್ರಮುಖ ಪಾತ್ರವಹಿಸುತ್ತದೆ. ಪರಿಸರ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ಪರಿಸರಕ್ಕೆ ನಾವೇನು ಕೊಟ್ಟಿದ್ದೇವೆ ಎಂಬ ಪ್ರಶ್ನೆ ನಮ್ಮೆಲ್ಲರಲ್ಲಿ ಮೂಡಬೇಕಿದೆ” ಎಂದು ಸಂರಕ್ಷಣಾ ಜಾಗೃತಿ ಜಾಥಾ, ಸ್ವಚ್ಛತಾ ಕಾರ್ಯಕ್ರಮದಲ್ಲಿ ಲೊಯೋಲ ವಿಕಾಸ ಕೇಂದ್ರ ಸಂಸ್ಥೆಯ ಸಹನಿರ್ದೇಶಕರಾದ ಫಾದರ್ ಚೇಸನ್ ಪಾಯ್ಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಾವೇರಿ ಜಿಲ್ಲೆಯ ಹಾನಗಲ್ಲ ತಾಲ್ಲೂಕಿನ ಶಿರಗೋಡ ಗ್ರಾಮದಲ್ಲಿ ಲೊಯೋಲ ವಿಕಾಸ ಕೇಂದ್ರ ಹಾನಗಲ್ಲ, ಸಂತ ಅಲೋಶಿಯಸ್ ವಿಶ್ವವಿದ್ಯಾಲಯ ಮಂಗಳೂರು. ಗ್ರಾಮ ಪಂಚಾಯ್ ಶಿರಗೋಡ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಶಿರಗೋಡ ವತಿಯಿಂದ ಪರಿಸರ ಸಂರಕ್ಷಣಾ ಜಾಗೃತಿ ಜಾಥಾ ಮತ್ತು ಸ್ವಚ್ಛತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ನಾವು ಜೀವಿಸುತ್ತಿರುವ ಈ ಭೂಮಿಯು ಪ್ರಕೃತಿಯ ಅಮೂಲ್ಯ ಕೊಡುಗೆ. ವನಗಳು ನದಿಗಳು ಪಶು-ಪಕ್ಷಿಗಳು, ಗಾಳಿ,ನೀರು, ಮಣ್ಣು ಇವೆಲ್ಲವೂ ನಮ್ಮ ಬದುಕಿಗೆ ಅವಿಭಾಜ್ಯವಾಗಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಮಾನವ ತನ್ನ ಸುಖಕ್ಕಾಗಿ ಪ್ರಕೃತಿಯನ್ನು ದುರಪಯೋಗ ಮಾಡಿಕೊಳ್ಳುತ್ತಿರುವುದು ದುರಂತದ ಸಂಗತಿಯಾಗಿದೆ. ಮರ ಕಡಿಯುವುದು ನದಿಗಳನ್ನು ಮಲೀನಗೊಳಿಸುವುದು. ಪ್ಲಾಸ್ಟಿಕ್ ಉಪಯೋಗ ಹೆಚ್ಚಿಸುವುದು ಇವೆಲ್ಲವೂ ಪರಿಸರವನ್ನು ನಾಶಗೊಳಿಸುತ್ತವೆ” ಎಂದು ಹೇಳಿದರು.
ಶಿರಗೋಡ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಕಿರಣ ಹುಣಸಳ್ಳಿ ಮಾತನಾಡಿ, “ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಪರಿಸರವನ್ನು ನಾವು ಕಾಪಾಡಿದರೆ ಮುಂದಿನ ಪೀಳಿಗೆ ನೆಮ್ಮದಿಯಾಗಿ ಉಸಿರಾಡುತ್ತದೆ” ಎಂದು ಹೇಳಿದರು.
ಸಂತ ಅಲೋಶಿಯಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಊರಿನ ಪ್ರಮುಖ ಬಿದಿಗಳಲ್ಲಿ, ಘೋಷಕ ಫಲಕಗಳೊಂದಗೆ ಜಾಥಾದಲ್ಲಿ ಘೋಷಣೆ ಕೂಗಿದರು.

ಬೀದಿ ನಾಟಕ ಪ್ರದರ್ಶನದೊಂದಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಶ್ರಮದಾನ ಮಾಡಿದರು. ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಕಂಪೌಂಡ ಗೋಡೆಯ ಮೇಲೆ ಪರಿಸರ ಜಾಗೃತಿಯ ಕೈ ಬರಹದ ಪೇಂಟಿಂಗ್ ಮಾಡಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾದಿಕಾರಿಗಳು, ಸಿಬ್ಬಂದಿವರ್ಗ, ಮಹಿಳಾ ಸ್ವ ಸಹಾಯ ಸಂಘದವರು, ಲೊಯೋಲ ಸಂಸ್ಥೆಯ ಸಿಬ್ಬಂದಿ ವರ್ಗದವರು, ಪಂಚಾಯತ ಸಿಬ್ಬಂದಿಯವರು. ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು ಹೊನ್ನಮ್ಮ ವಾಯ್ ಎಸ್ ನಿರೂಪಿಸಿದರು ಫಕ್ಕೀರೇಶ ಸ್ವಾಗತಿಸಿದರು