ನಿರಂತರವಾಗಿ ರಾಜ್ಯ ಸರ್ಕಾರದ ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ದಿನಗೂಲಿ ನೌಕರರಿಗೆ ಸೇವಾಭದ್ರತೆ ನೀಡಿ, ಅವರನ್ನು ಖಾಯಂ ನೇಮಕಾತಿ ಮಾಡಿಕೊಳ್ಳಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ(ರಿ)ಯ ರಾಜ್ಯಾಧ್ಯಕ್ಷ ಉಡಚಪ್ಪ ಮಾಳಗಿ ಒತ್ತಾಯಿಸಿದರು.
ಹಾವೇರಿಯ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಳಿ ಜಿಲ್ಲಾ ಮಟ್ಟದ ಸಭೆಯಲ್ಲಿ ಭಾಗವಹಿಸಿ, ಕರುನಾಡ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗ(ರಿ) ನೀಡಿದ ರಾಜ್ಯ ಮಟ್ಟದ ಕರುನಾಡ ಹೋರಾಟ ಸೇವಾರತ್ನ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
“ರಾಜ್ಯದಲ್ಲಿ 15-20 ವರ್ಷಗಳಿಂದ ದಿನಗೂಲಿ ನೌಕರರು ಯಾವುದೇ ಜೀವನ ಭದ್ರತೆ ಇಲ್ಲದೇ, ಸರಿಯಾದ ಭತ್ಯೆ ಇಲ್ಲದೆ ಕೆಲಸ ಮಾಡುತ್ತಿದ್ದಾರೆ ಅವರನ್ನು ಖಾಯಂ ನೌಕರರಾಗಿ ನೇಮಿಸಿಕೊಂಡರೆ, ಅವರು ಘನತೆಯ ಬದುಕು ಕಟ್ಟಿಕೊಳ್ಳಲು ನೆರವಾಗುತ್ತದೆ. ಈ ನಿಟ್ಟಿನಲ್ಲಿ ಮುಂದಿನ ಬಜೆಟ್ ಮಂಡನೆಯ ವೇಳೆ ದಿನಗೂಲಿ ನೌಕರರ ಬೇಡಿಕೆ ಈಡೇರಿಸಲು ಸರ್ಕಾರ ಮುಂದಾಗಬೇಕು. ಕಾರ್ಮಿಕರ ಪರವಾಗಿ ಹೋರಾಟಕ್ಕೆ, ಶ್ರಮಿಕ ವರ್ಗದ ಪರವಾಗಿ ನಿಮ್ಮೊಂದಿಗೆ ನಾವಿದ್ದೇವೆ, ನಿಮ್ಮ ಹೋರಾಟಕ್ಕೆ ಜಯವಾಗಲಿ” ಎಂದು ಆಶಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಳಿದ ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ ಕೊಂಗಿನವರ ಮಾತನಾಡಿ, “ರಾಜ್ಯ ಸರ್ಕಾರದ ಯೋಜನೆಗಳು ಸಕಾರಗೊಳ್ಳಲು ಎಲ್ಲಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ದಿನಗೂಲಿ ನೌಕರರ ಶ್ರಮವಿದೆ. ಎಲ್ಲಾ ರೀತಿಯಿಂದಲೂ ಹೋರಾಟ ಮಾಡುತ್ತಾ ಬರುತ್ತಿದ್ದೇವೆ. ನೂತನ ಮುಖ್ಯಮಂತ್ರಿಗಳು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ನಾವು ಒತ್ತಾಯಿಸುತ್ತೇವೆ. ಉಡಚಪ್ಪ ಮಾಳಗಿ ಅವರು ನಮ್ಮ ಹೋರಾಟಕ್ಕೆ ನಿರಂತರವಾಗಿ ಬೆಂಬಲ ನೀಡುತ್ತಿದ್ದು, ಅವರಿಗೆ ಮುಂದಿನ ದಿನಮಾನಗಳಲ್ಲಿ ಉನ್ನತ ಸ್ಥಾನ ದೊರೆಯಲಿ” ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಸುಭಾಸ ಕ್ಯಾಲಕೊಂಡ, ಶಿವಯ್ಯ ಗಡ್ಡದವರ,ಮಾಹಾಂತೇಶ ಕಮ್ಮಾರ,ಪ್ರವೀಣ ಕ್ಷೀರಸಾಗರ,ಭಾರತಿ ಹಾನಗಲ್ಲ,ಪ್ರಶಾಂತ ಒಕ್ಕಣ್ಣನವರ,ರೇಣುಕಾ ಮುಗದೂರ,ಕವಿತಾ ಕೆಳಗಿನಮನಿ,ಶಿವಲೀಲಾ ಸೋಮಕ್ಕನವರ, ರೇಣುಕಾ ಮಡಿವಾಳರ, ದಾವಲಬಿ,ಮಂಜುಳಾ ಕಮತರ ಇನ್ನಿತರರಿದ್ದರು.
ಹಾವೇರಿ | ದಿನಗೂಲಿ ನೌಕರರ ಖಾಯಂ ನೇಮಕಾತಿಗೆ ಒತ್ತಾಯ
ಪೋಸ್ಟ್ ಹಂಚಿಕೊಳ್ಳಿ:





