ಹಾವೇರಿ | ಸೆಪ್ಟಂಬರ್ 1 ರಾಷ್ಟ್ರೀಯ ಚಾಲಕರ ದಿನಾಚರಣೆ ಮಾಡಲು ಒತ್ತಾಯ

Date:

Advertisements

“ಸರಕಾರ ಸೆಪ್ಟಂಬರ್ 1ರಂದು ರಾಷ್ಟ್ರೀಯ ಚಾಲಕರ ದಿನಾಚರಣೆಯನ್ನಾಗಿ ಘೋಷಣೆ ಮಾಡಿ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಚಾಲಕರಿಗೆ ವಿವಿಧ ಸೌಲಭ್ಯಗಳು ಸಿಗುವಂತಾಗಬೇಕು” ಎಂದು ರಾಷ್ಟ್ರೀಯ ಅಧ್ಯಕ್ಷ ಸುರೇಂದ್ರ ಪ್ರಸಾದ ಒತ್ತಾಯಿಸಿದರು.

ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದ ಶಾದಿ ಮಹಲ್ ನಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಚಾಲಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

“ದೇಶದ 22 ಕೋಟಿ ಚಾಲಕರಿಗೆ ನ್ಯಾಯ ಒದಗಿಸಲು ರಾಷ್ಟ್ರೀಯ ಚಾಲಕರ ಆಯೋಗ ಮತ್ತು ರಾಜ್ಯ ಚಾಲಕರ ಆಯೋಗವನ್ನು ರಚಿಸಬೇಕು, ಚಾಲಕರ ಮ್ಯೂಸಿಯಂ ಸ್ಥಾಪನೆ, ಚಾಲಕರು ಅಪಘಾತವಾದಲ್ಲಿ ಮರಣ ಹೊಂದಿದರೆ ಸರ್ಕಾರ ಕನಿಷ್ಠ ೧೦ ಲಕ್ಷ ರೂಪಾಯಿ ಪರಿಹಾರ ನೀಡುವಂತಾಗಬೇಕು, ಸರ್ಕಾರಿ ಸಂಸ್ಥೆಗಳಲ್ಲಿ ಗುತ್ತಿಗೆ ಹೊರಗುತ್ತಿಗೆಯಲ್ಲಿ ಕಾರ್ಮಿಕ ಚಾಲಕರನ್ನು ಸಮಾನ ವೇತನದ ಅಡಿ ಕಾಯಂಗೊಳಿಸಬೇಕು.

ಪಿಂಚಣಿ ನಿಗದಿ, ಚಾಲಕನಿಗೆ ಮೆಚ್ಯೂರಿಟಿ ವಿಮೆ, ವೈದ್ಯಕೀಯ ವಿಮೆ, ಚಾಲಕರ ಮಕ್ಕಳ ಶಿಕ್ಷಣಕ್ಕೆ ಸರಕಾರ ಸಹಕಾರ, ವಿಕಲಚೇತನ ಚಾಲಕರಿಗೆ ರಿಯಾಯತಿ ಸೇರಿದಂತೆ ವಿವಿಧ ಸೌಲಭ್ಯಗಳು ಚಾಲಕರಿಗೆ ಸಿಗುವಂತಾಗಬೇಕು” ಎಂದರು.

“ವೃತ್ತಿಪರ ಚಾಲಕರು ದೇಶಾದ್ಯಂತ ವಾಹನಗಳನ್ನು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಕೊಂಡೊಯ್ಯುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಸಾಮಾನ್ಯ ನಾಗರಿಕನು ಚಾಲಕನಿಂದ ಅಪಘಾತಕ್ಕೆ ಬಲಿಯಾಗುತ್ತಾನೆ. ಆದ್ದರಿಂದ ಅಪರಾಧದ ಅಡಿಯಲ್ಲಿ ಬಂಧನದಲ್ಲಿ ಜಾಮೀನು ಪಡೆಯುವ ಚಾಲಕನ ಹಕ್ಕನ್ನು ಅವನ ಕಾನೂನು ಪರವಾನಗಿ ಎಂದು ಪರಿಗಣಿಸಬೇಕು. ದೇಶಾದ್ಯಂತ ಸರಕುಗಳನ್ನು ಒಂದು ಪ್ರಾಂತ್ಯದ ಇನ್ನೊಂದು ಪ್ರಾಂತ್ಯಕ್ಕೆ ಸಾಗಿಸುವ ವೃತ್ತಿಪರ ಚಾಲಕರು. ಅವರ ಆಡಳಿತಾತ್ಮಕ ಪೊಲೀಸ್ ಸುಲಿಗೆ ಮತ್ತು ಕಿರುಕುಳವನ್ನು ನಿಲ್ಲಿಸಬೇಕು” ಎಂದು ಒತ್ತಾಯಿಸಿದರು.

“ರಾಷ್ಟ್ರೀಯ ಮಜ್ದೂರ ಕಾಂಗ್ರೇಸ್ ಜಿಲ್ಲಾದ್ಯಕ್ಷ ಎಂ ಎಂ ಕಾಲೆಬಾನ್, ಅಸಂಘಟಿತ ಕಾರ್ಮಿಕ ಇಲಾಖೆಯ ಶಶಿಧರ ಎಸ್, ಅಸಂಘಟಿತ ಕಾರ್ಮಿಕ ಮತ್ತು ನೌಕರರ ವಿಭಾಗದ ಜಿಲ್ಲಾದ್ಯಕ್ಷ ಎ ಎಂ ಪಟವೇಗಾರ, ಜಿಲ್ಲಾದ್ಯಕ್ಷ ಗಂಗಾಧರ ಅಣ್ಣೀಗೇರಿ, ಸಂಘದ ಸಭಾಪತಿ ಪ್ರರ್ವೇಜ್ ಅಹ್ಮದ್ ಮುಲ್ಲಾ, ಮಾರುತಿ ಬಡಿಗೇರ, ಗುರುನಗೌಡ ದುಂಡಿಗೌಡ್ರ, ಜಿಲ್ಲಾ ಪ್ರಚಾರಕ ಮೌಲಾಲಿ ಗುಜರಾತಿ, ಶಂಜ್ರಪ್ಪ ಮೋತೆನವರ, ಮಲ್ಲಿಕ್ ಜಾನ್ ದುಂಡಶಿ, ಇಮ್ತಿಯಾಜ್ ಚಳ್ಳಾಳ, ದುದ್ದು ಬನ್ನಿಮಟ್ಟಿ, ಗೌಸ್ ಅಗಸನಮಟ್ಟಿ, ಮಖ್ಬುಲ್ ದನ್ನೆವಾಲೆ, ಮಹ್ಮದ್ ಗೌಸ್ ಒಂಟಿ,  ತಾಲೂಕ ಕುರುಬ ಸಮಾಜದ ಅದ್ಯಕ್ಷ ಪಕ್ಕೀರಪ್ಪ ಕುಂದೂರ, ಸಮಾಜಿಕ ಹೋರಾಟಗಾರ ಮಂಜುನಾಥ ಮಣ್ಣಣ್ಣವರ ಸೇರಿದಂತೆ ಸಂಘದ ಸದಸ್ಯರು, ವಿವಿಧ ಚಾಲಕರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಕಾಡುಕೋಣ ದಾಳಿ ವ್ಯಕ್ತಿ ಗಂಭೀರ

ಕಾಡುಕೋಣ ದಾಳಿಯಿಂದ ವ್ಯಕ್ತಿ ಗಂಭೀರ ಗಾಯವಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಬಾಳೂರು...

ರಾಯಚೂರು | ರಕ್ತಹೀನತೆ, ತಾಯಿ ಶಿಶು ಮರಣ ನಿಯಂತ್ರಣಕ್ಕೆ ಒತ್ತಾಯಿಸಿ ಮಹಿಳಾ ಒಕ್ಕೂಟ ಪ್ರತಿಭಟನೆ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಮಹಿಳೆಯರಲ್ಲಿ ರಕ್ತ ಹೀನತೆ ಹಾಗೂ...

ಚಿಕ್ಕಮಗಳೂರು l ಗುಡ್ಡಹಳ್ಳದಲ್ಲಿ ಪುಂಡಾನೆ ಸೆರೆ; ಕಾರ್ಯಾಚರಣೆ ಯಶಸ್ವಿಗೊಳಿಸಿದ ಅರಣ್ಯ ಇಲಾಖೆ

ಸುಮಾರು ಒಂದುವರೆ ವರ್ಷಗಳಿಂದ ಬೀಡು ಬಿಟ್ಟಿದ್ದ, ಪುಂಡಾನೆ ಕೊನೆಗೂ ಸೆರೆಯಾಗಿರುವ ಘಟನೆ,...

ಚಿಕ್ಕಮಗಳೂರು l 1% ಮೀಸಲಾತಿಯನ್ನು ಕೂಡಲೇ ಜಾರಿ ಮಾಡಬೇಕು; ಎದ್ದೇಳು ಕರ್ನಾಟಕ

ಬದುಕಿನ್ನುದ್ದಕ್ಕೂ ಅಲೆಯುತ್ತಲೇ ಬದುಕಿದ ಅಲೆಮಾರಿ ಬಂಧುಗಳು ಇಂದು ನ್ಯಾಯ ಅರೆಸುತ್ತಾ ದೆಹಲಿಗೆ...

Download Eedina App Android / iOS

X