“ಮಹಿಳೆಯರು ಇಂದಿನ ದಿನದಲ್ಲಿ ಆರೋಗ್ಯ ಕಾಪಾಡಲು ಆಹಾರ ಬಹಳ ಮುಖ್ಯ. ಮನೆಯ ಆಹಾರ, ತಾಜಾ ಆಹಾರ, ಬಹಳ ಆವಶ್ಯಕವಾಗಿದೆ. ಪರಿವಾರದ ಎಲ್ಲರ ಯೋಗ ಕ್ಷೇಮ ಮಹಿಳೆಯದೆ ಆಗಿರುತ್ತದೆ” ಎಂದು ಆಪ್ತ ಸಮಾಲೋಚಕ ತಜ್ಞ ವೈದ್ಯೆ ಡಾಕ್ಟರ್ ಉಮಾ ಬಳಿಗಾರ ಹೇಳಿದರು.
ಹಾವೇರಿ ಪಟ್ಟಣದ ಶ್ರೀ ಬೀರೇಶ್ವರ ಸಮುದಾಯ ಭವನದಲ್ಲಿ ಆರೋಗ್ಯ ಭಾರತಿ ಹಾಗೂ ಕನಕ ಮಹಿಳಾ ಬಳಗ ಸಹಯೋಗದಲ್ಲಿ ಮಹಿಳಾ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ‘ಮಹಿಳೆಯರ ಆರೋಗ್ಯ ಹಾಗೂ ಮನೆ ಮದ್ದಿನ ಮಾಹಿತಿ ಕುರಿತು ಅವರು ಮಾತನಾಡಿದರು.
“ಮಹಿಳೆ ತನ್ನ ಆರೋಗ್ಯವನ್ನು ಗಮನಿಸದೆ, ಬೆಳಗಿನಿಂದ ರಾತ್ರಿಯವರಿಗೆ ಸದಾ ಕ್ರಿಯಾಶೀಲಳಾಗಿ ಎಲ್ಲರ ಆರೋಗ್ಯದ ಬಗ್ಗೆ ಗಮನವಿಟ್ಟು ದಿನ ಕಳೆಯುವುದು ಸರ್ವೇಸಾಮಾನ್ಯವಾಗಿದೆ. ತನ್ನ ಶರೀರದ ಸಹಜ ಕ್ರಿಯೆಗಳನ್ನು ಗಮನಿಸದೇ, ವಿಶ್ರಾಂತಿಯನ್ನು ಪಡೆಯದೆ ಕೆಲಸ ಮಾಡುತ್ತಾರೆ. ಇದರಿಂದ ಅನಾರೋಗ್ಯ, ಕಾಯಿಲೆಗಳಿಗೆ ತುತ್ತಾಗುತ್ತಾರೆ” ಎಂದರು.
“ಮಹಿಳೆಯರು ನಿತ್ಯ ಸ್ವಚ್ಛತೆ, ಆಹಾರ, ಯೋಗ, ಧ್ಯಾನ,ರೂಡಿಸಿಕೊಂಡರೆ ಆರೋಗ್ಯ ಸುಧಾರಿಸುತ್ತದೆ. ಅದಕ್ಕಾಗಿ ಪ್ರತಿನಿತ್ಯ ಆರೋಗ್ಯಕ್ಕಾಗಿ ಒಂದಿಷ್ಟು ಸಮಯವನ್ನು ಮೀಸಲೀಡಬೇಕು” ಎಂದು ಮಹಿಳೆಯರಿಗೆ ಸಲಹೆ ನೀಡಿದರು.
ಮನೆ ಮದ್ದಿನ ಕುರಿತು ಆರೋಗ್ಯ ಭಾರತೀಯ ನಾಗೇಶ್ ಅವರು, “ನಮ್ಮ ಮನೆ, ರಸ್ತೆ ಬದಿಯಲ್ಲಿ ಇರುವಂತ ಅನೇಕ ಔಷಧಿ ಸಸ್ಯಗಳ ಕುರಿತು, ಮನೆಯ ಆಹಾರದ ಬಗ್ಗೆ ಮಾಹಿತಿಯನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ಆರೋಗ್ಯ ಭಾರತೀಯ ಗೌರವಾಧ್ಯಕ್ಷರು ಪ್ರಭಾಕರ ಮಂಗಳೂರು, ಆರೋಗ್ಯ ಭಾರತಿಯ ಮಹಿಳಾ ಪ್ರಮುಖರಾದ ಚಂಪಾ ಹುಣಸೆ ಮರದ, ಕನಕ ಮಹಿಳಾ ಬಳಗದ ಅಧ್ಯಕ್ಷರು ಕವಿತಾ ಮುದುಕಣ್ಣನವರ ಸ್ವಾಗತಿಸಿದರು. ಕನಕ ಮಹಿಳಾ ಬಳಗದ ಕೋಶಾಧ್ಯಕ್ಷರು ರೇಣುಕಾ ಅಂಗಡಿ ಕಾರ್ಯಕ್ರಮದ ಪ್ರಾರ್ಥನೆ ಹಾಗೂ ನಿರೂಪಣೆಯನ್ನು ಕನಕ ಮಹಿಳಾ ಬಳಗದ ಕಾರ್ಯದರ್ಶಿಯಾದ ಶ್ರೀಮತಿ ಶಿಲ್ಪಾ ಚುರ್ಚಿಹಾಳ ನಡೆಸಿಕೊಟ್ಟರು.