ಹಾವೇರಿ | 65 ಲಕ್ಷ ರೂ ಬಾಳಂಬೀಡ-ಚನ್ನಾಪುರ ರಸ್ತೆ ಅಭಿವೃದ್ಧಿ ಕಾಮಗಾರಿಯ ಭೂಮಿಪೂಜೆ

Date:

Advertisements

“ಹಾನಗಲ್ಲ ತಾಲೂಕಿನ ಹಲವೆಡೆ ಗ್ರಾಮೀಣ ಭಾಗದ ರಸ್ತೆಗಳು ಆಧುನಿಕ ಸ್ವರೂಪ ಹೊಂದುತ್ತಿದ್ದು, ಬಹಳ ದಿನಗಳಿಂದ ಹಾಳಾಗಿ ಸಂಚಾರಕ್ಕೆ ತೀವ್ರ ಅನಾನುಕೂಲ ಉಂಟಾಗಿದ್ದ ಬಾಳಂಬೀಡ-ಚನ್ನಾಪುರ ರಸ್ತೆಯನ್ನು ಅಭಿವೃದ್ಧಿ ಪಡಿಸಿ, ಹೊಸರೂಪ ನೀಡಲಾಗುತ್ತಿದೆ” ಎಂದು ವಿಶೇಷ ಮಂಜೂರಾತಿ ಕಾರ್ಯಕ್ರಮದಡಿ 65 ಲಕ್ಷ ರೂ ಕಾಮಗಾರಿ ಭೂಮಿಪೂಜೆ ಸಲ್ಲಿಸಿ ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಹಾವೇರಿ ಜಿಲ್ಲೆಯ ಹಾನಗಲ್  ತಾಲೂಕಿನ ಬಾಳಂಬೀಡ ಗ್ರಾಮದ ಬಳಿ ಪಂಚಾಯತರಾಜ್ ಇಂಜನೀಯರಿಂಗ್ ವಿಭಾಗದಿಂದ 2023-24 ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ ಕಾರ್ಯಕ್ರಮದಡಿ 65 ಲಕ್ಷ ರೂ. ವೆಚ್ಚದಲ್ಲಿ ಬಾಳಂಬೀಡ-ಚನ್ನಾಪುರ ರಸ್ತೆ ಅಭಿವೃದ್ಧಿ ಕಾಮಗಾರಿಯ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

“ಸಂಪರ್ಕ ರಸ್ತೆಗಳ ಸುಧಾರಣೆಯಿಂದ ಗ್ರಾಮೀಣರ ಬದುಕಿನ ಚಿತ್ರಣ ಬದಲಾಗಲಿದೆ. ಹಾಗಾಗಿ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ. ತಾಲೂಕಿನಲ್ಲಿ ಇನ್ನಷ್ಟು ರಸ್ತೆಗಳ ಅಭಿವೃದ್ಧಿಗೆ ಶೀಘ್ರ ಮತ್ತೆ ಅನುದಾನ ದೊರಕುವ ವಿಶ್ವಾಸವಿದೆ” ಎಂದು ಹೇಳಿದರು.

“ಗ್ರಾಮೀಣ ಭಾಗಗಳ ಸಂಪರ್ಕಕ್ಕೆ ಅನುಕೂಲಕರವಾದ ರಸ್ತೆಗಳ ನಿರ್ಮಾಣಕ್ಕೆ ನೆರವು ನೀಡುವುದು ರಾಜ್ಯ ಸರ್ಕಾರದ ಆದ್ಯತೆಗಳಲ್ಲಿ ಒಂದಾಗಿದೆ. ಗ್ರಾಮಗಳಿಂದ ನಗರ ಪ್ರದೇಶಗಳನ್ನು ಜೋಡಿಸುವ ರಸ್ತೆಗಳು ಗ್ರಾಮೀಣರ ಬದುಕು ಸುಧಾರಿಸಲಿವೆ. ಈ ನಿಟ್ಟಿನಲ್ಲಿ ರಸ್ತೆಗಳ ಸುಧಾರಣೆಗೆ ಕಾಳಜಿ ವಹಿಸಲಾಗಿದೆ” ಎಂದು ಜನರಿಗೆ ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಉಡುಪಿ | ಹಿರಿಯ ಬಸ್ ಏಜೆಂಟ್ ಆತ್ಮ*ಹತ್ಯೆ, ಪ್ರಕರಣ ದಾಖಲು

ಗ್ರಾಪಂ ಸದಸ್ಯ ಭರಮಗೌಡ ನಂದಿಹಳ್ಳಿ, ಜಿಪಂ ಮಾಜಿ ಸದಸ್ಯ ಎಂ.ಎಂ.ಕಂಬಳಿ, ಮುಖಂಡರಾದ ಅಶೋಕ ಮೋರೆ. ಮಂಜಣ್ಣ ತಡಸದ, ನಾಗಯ್ಯ ಹಿರೇಮಠಮ ರಾಜೇಂದ್ರ ಜಿನ್ನಣ್ಣನವರ, ಮಹ್ಮದ್ರಪೀಕ್ ಉಪ್ಪುಣಸಿ, ಇಸ್ಟೈಲ್ ಹಲಸೂರ. ನಿಂಗಪ್ಪ ನಂದಿಹಳ್ಳಿ ಮಾರುತಿ ದೇವಸೂರ, ಸಂತೋಷ್ ದುಂಡಣ್ಣವರ್ ಮಕ್ಯೂಲ್ಅಹ್ಮದ್ ಚಂದಗಿರಿ. ಮೌಲಾಸಾಬ ನರೇಗಲ್, ಹಜರತ್ ಅಲಿ ನರೇಗಲ್, ನಾಗರಾಜ ಬೊಮ್ಮಣ್ಣನವರ, ಫಕ್ಕೀರಪ್ಪ ಚಿಕ್ಕಣ್ಣನವರ, ಮಾರುತಿ ನಂದಿಹಳ್ಳಿ ಸೇರಿದಂತೆ ಗ್ರಾಪಂ ಸದಸ್ಯರು, ಗ್ರಾಮಸ್ಥರು ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕೊಲೆಗೈದು ಅಸಹಜ ಸಾವು ಎಂದು ಬಿಂಬಿಸಿದ ತಾಯಿ : ಪೊಲೀಸರಿಂದ ಬಂಧನ

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಕಾನಂಗಿಯಲ್ಲಿ ಬೆಚ್ಚಿಬೀಳಿಸುವಂತಹ ಘಟನೆಯೊಂದು...

ಶಿವಮೊಗ್ಗ | ಟೈಮ್ ಪಾಸ್ ಜಾಬ್ ಆಸೆಗೆ 6.78 ಲಕ್ಷ ರುಪಾಯಿ ಕಳೆದುಕೊಂಡ ಮಹಿಳೆ ; ಪ್ರಕರಣ ದಾಖಲು

ಶಿವಮೊಗ್ಗ ನಗರದ ಮಹಿಳೆಯೊಬ್ಬರು ಹೆಚ್ಚು ಹಣ ಗಳಿಸುವ ಉದ್ದೇಶದಿಂದ ಪಾರ್ಟ್‌ ಟೈಮ್‌...

Download Eedina App Android / iOS

X