ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಡೊಳ್ಳೇಶ್ವರ ಗ್ರಾಮದ ಜನತಾ ಪ್ಲಾಟನ ಮುಖ್ಯರಸ್ತೆಯಗೆ ಹೊಂದಿಕೊಂಡ ಗಟಾರವನ್ನು ಒಡೆದು ಅದರ ಮೇಲೆ ಅನಧಿಕೃತ ಕಾಲಂ ನಿರ್ಮಾಣ ಮಾಡುತ್ತಿರುವುದು ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಡೊಳ್ಳೇಶ್ವರ ಗ್ರಾಮದಲ್ಲಿ ಘಟನೆ ನಡೆದಿದೆ.
“ಗ್ರಾಮದ ಮಖಬೂಲದಅಹಮ್ಮದ ಮಟ್ಟಿಮನಿ ಅವರು ಮನೆ ನಿರ್ಮಾಣ ಮಾಡುತ್ತಿದ್ದು, ಊರಿನ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಗಟಾರವನ್ನು ಆಕ್ರಮಿಸಿ ಅದರ ಮೇಲೆ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಇದರಿಂದ ಜನರಿಗೆ, ವಾಹನಕ್ಕೆ ಸಮಸ್ಯೆ ಆಗುತ್ತಿದೆ” ಎಂದು ಸಾಮಾಜಿಕ ಹೋರಾಟಗಾರ ಮುಂಜುನಾಥ ಕುದರಿ ಅವರು ಆರೋಪಿಸಿದ್ದು ಗ್ರಾಮದ ಪಂಚಾಯತಿ ಪಿಡಿಒ, ಅಧ್ಯಕ್ಷರ ಗಮನಕ್ಕೆ ತಂದಿದ್ದಾರೆ.
ಪಿಡಿಒ ಅಧ್ಯಕ್ಷರುಕೂಡಲೇ ಸ್ಥಳಕ್ಕೆ ಹೋಗಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.