“ಸ್ಥಳೀಯ ಆಡಳಿತವು ಸರ್ಕಾರದ ಅತೀ ಕೆಳಮಟ್ಟದ ಘಟಕವಾಗಿದ್ದು, ಜನ ಸಾಮಾನ್ಯರ ಜೀವನಕ್ಕೆ ನೇರವಾಗಿ ಸಂಬಂಧ ಹೊಂದಿದೆ. ಇದು ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಸಾರ್ವಜನಿಕ ಸೇವೆಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ” ಎಂದು ಸ್ಥಳೀಯ ಆಡಳಿತ, ಸಂವಿಧಾನ ಅರಿವು ಜಾಗೃತಿ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಫಕ್ಕಿರೇಶ ಗೌಡಳ್ಳಿ ಮಾತನಾಡಿದರು.
ಹಾವೇರಿ ಜಿಲ್ಲೆಯ ಹಾನಗಲ್ಲ ತಾಲ್ಲೂಕಿನ ಹಸನಾಬಾದಿ ಗ್ರಾಮದಲ್ಲಿ ಲೊಯೋಲ ವಿಕಾಸ ಕೇಂದ್ರ ಸಮಾಜ ಸೇವಾ ಸಂಸ್ಥೆ ವತಿಯಿಂದ ಯುವಜನರಿಗೆ ಸ್ಥಳೀಯ ಆಡಳಿತ ಮತ್ತು ಸಂವಿಧಾನ ಅರಿವು ಕುರಿತು ಜಾಗೃತಿ ತರಬೇತಿ ಕಾರ್ಯಕ್ರಮ ನಡೆಯಿತು.
“ಸ್ಥಳೀಯ ಆಡಳಿತವು ಜನಸಾಮನ್ಯರ ಹಿತಾಸಕ್ತಿಗಳನ್ನು ಇಟ್ಟುಕೊಂಡು ಕಾರ್ಯ ಮಾಡುತ್ತದೆ. ಕೆಲ ಚುನಾಯಿತ ಪ್ರತಿನಿಧಿಗಳು ಹಿತಾಸಕ್ತಿಗಳನ್ನು ಸಾದಿಳಗೊಳಿಸಲು ಪ್ರಯತ್ನಮಾಡುವ ಸಾಧ್ಯತೆಗಳಿರುತ್ತವೆ. ಯುವಕರು ಗಮನಹರಿಸಿ ಪ್ರಶ್ನೆ ಮಾಡಿದಾಗ ನಿಜವಾಗಿಯೂ ಜನರ ಹಿತಾಸಕ್ತಿ ಕಾಪಾಡಲು ಸಾಧ್ಯ” ಎಂದು ಹೇಳಿದರು.
“ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯತ ರಚನೆ, ವಾರ್ಡ ಸಭೆ, ಗ್ರಾಮ ಸಭೆ ಮತ್ತು ನರೇಗಾದಿಂದ ವಯಕ್ತಿಕ ಹಾಗೂ ಸಾರ್ವಜನಿಕ ಕಾಮಗಾರಿಗಳ ಅಭಿವೃದ್ದಿ” ಕುರಿತು ತಿಳಿಸದರು.
“ಸಂವಿಧಾನದ ನಮ್ಮ ಮೂಲ ಗ್ರಂಥವಾಗಿರಬೇಕು. ಸಂವಿಧಾನವನ್ನು ಓದುವುದರ ಮೂಲಕ ಅದರ ಆಶಯಗಳನ್ನು ಮೈಗೂಡಿಸಿಕೊಳ್ಳಬೇಕು. ಆಗ ಈ ಸಮಾಜದ ತಲ್ಲಣಗಳಿಗೆ ಕಿವಿಯಾಗಲು ಸಾಧ್ಯ” ಎಂದು ಯುವಕರಿಗೆ ಹೇಳಿದರು.
ಈ ಸುದ್ದಿ ಓದಿದ್ದೀರಾ? ಗದಗ | ರೈತರ ಬದುಕು ಸಂಕಷ್ಟ; ಬೆಳೆ ಪರಿಹಾರ ನೀಡುವಂತೆ ರೈತ ಸಂಘ ಮನವಿ
ಕಾರ್ಯಕ್ರಮದಲ್ಲಿ ಹಸನಾಬಾದಿ ಗ್ರಾಮದ ಯುವಕರು ಹಾಜರಿದ್ದರು. ಪಿರಪ್ಪ ಸಿರ್ಸಿ ನಿರೂಪಿಸಿದರು. ಬಸವರಾಜ ಸ್ವಾಗತಿಸಿದರು. ಶಿವಲಿಂಗ ಬಸಾಪುರ ಧನ್ಯವಾದ ಸಲ್ಲಿಸಿದರು. ಲೊಯೋಲ ಸಂಸ್ಥೇಯ ಸಿಬ್ಬಂದಿ ಹೊನ್ನಮ್ಮ ಸೇರಿದಂತೆ ಇನ್ನೂ ಅನೇಕರು ಉಪಸ್ಥೀತರಿದ್ದರು.