“ಕನ್ನಡ ನಾಡು, ನುಡಿ, ನೆಲ, ಜಲ ಭಾಷೆಯ ರಕ್ಷಣೆಗೆ ಕನ್ನಡ ಪರ ಸಂಘಟನೆಗಳು ಅಗತ್ಯವಿದೆ” ಎಂದು ಕರವೇ ಸ್ವಾಭಿಮಾನಿ ಬಣ ಜಿಲ್ಲಾಧ್ಯಕ್ಷ ಯಲ್ಲಪ್ಪ ಮರಾಠೆ ಹೇಳಿದರು.
ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ದಾಸನಕೊಪ್ಪ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಗ್ರಾಮ ಘಟಕ ಉದ್ಘಾಟನೆ ಮಾಡಿ ಮಾತನಾಡಿದರು.
“ಇವತ್ತಿನ ಸಂದರ್ಭದಲ್ಲಿ ಕನ್ನಡ ಪರ ಸಂಘಟನೆಗಳ ಮಹತ್ವ ಅಪಾರ. ಕರ್ನಾಟಕದ ನೆರೆಯ ರಾಜ್ಯಗಳು ಮಹಾರಾಷ್ಟ್ರ, ಗೋವಾ, ಆಂಧ್ರ, ತಮಿಳುನಾಡು ರಾಜ್ಯಗಳು ಕರ್ನಾಟಕವನ್ನು ಕಬಳಿಸಲು ಯತ್ನಿಸಿದಾಗ, ಕನ್ನಡಪರ ಸಂಘಟನೆಗಳು ಧ್ವನಿ ಎತ್ತದೇ ಹೋಗಿದ್ದರೆ ಕರ್ನಾಟಕ ಹರಿದು ಹಂಚಿ ಹೋಗುತ್ತಿತ್ತು. ಕಾರಣ ಕನ್ನಡ ನೆಲ ಜಲ ಭಾಷೆಗೆ ಸ್ಥಳೀಯ ಸಮಸ್ಯೆಗಳಿಗೆ ಸಂಘಟನೆ ಅವಶ್ಯಕತೆ ಇದೆ” ಎಂದು ಹೇಳಿದರು.
“ಇವತ್ತಿನ ದಿನ ದಾಸನಕೊಪ್ಪ ಗ್ರಾಮ ಘಟಕದ ಕಾರ್ಯಕರ್ತರು ಶ್ರೀ ಆಂಜನೇಯ ದೇವಸ್ಥಾನದಲ್ಲಿ ಬಹಳ ಅರ್ಥಪೂರ್ಣವಾಗಿ ಸರಳ ಸಂಭ್ರಮದಿಂದ ಉದ್ಘಾಟನೆ ಮಾಡಿದ್ದೀರಿ. ಶಾಲಾ ಮಕ್ಕಳಿಗೆ ನೊಟಬುಕ್ ಮತ್ತು ಪೇನ್ ವಿತರಣೆ ಮಾಡಿರಿವುದು, ಬಡ ಮಕ್ಕಳಿಗೆ ಶಿಕ್ಷಣ ಅನುಕೂಲಕರವಾಗಿದೆ” ಎಂದು ಹೇಳಿದರು
ಈ ವೇಳೆಯಲ್ಲಿ ಗ್ರಾಮ ಘಟಕ ಅಧ್ಯಕ್ಷರನ್ನಾಗಿ ದೇವರಾಜ್ ಈಳಗೇರ ಅವರನ್ನು ಆಯ್ಕೆ ಮಾಡಿ ಆದೇಶ ಪತ್ರ ನೀಡಲಾಯಿತು.
ಈ ಸುದ್ದಿ ಓದಿದ್ದೀರಾ? ಗದಗ | ಕೈಗೆ ಬಂದ ತುತ್ತು ಕಸಿದ ಮಳೆ; ಸಂಕಷ್ಟದಲ್ಲಿ ಹೆಸರು ಬೆಳೆದ ರೈತರ ಬದುಕು
ಈ ಒಂದು ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಅಧ್ಯಕ್ಷರಾದ ಗೀತಾಬಾಯಿ ಲಮಾಣಿ ಜಿಲ್ಲಾ ಉಪಾಧ್ಯಕ್ಷರಾದ ರಾಜೇಸಾಬ ಮನೇಗಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೊಸುಫ್ ಸೈಕಲಗಾರ, ಹಿರೇಕೆರೂರು ತಾಲೂಕು ಅಧ್ಯಕ್ಷ ಪ್ರಕಾಶ್ ಡೊಂಬರ, ಜಿಲ್ಲಾ ಯುವ ಘಟಕ ಅಧ್ಯಕ್ಷರು ಖಲಂದರ್ ಎಲೆದಹಳ್ಳಿ,ಶಂಕರ ಬಡಿಗೇರ, ಬಸವರಾಜ ಪಟ್ಟಣಶೆಟ್ಟಿ,ದಾದಾಫೀರ ಮಲ್ಲಾಡದ,ರವಿ ಮಾಮನಿ,ಸನಾಉಲ್ಲಾ ಪುರದಗೇರಿ, ಗಿರೀಶ ಉಪ್ಪಾರ, ರವಿ ಬಾವರ್ಕರ್, ಪುಷ್ಪ ಲಮಾಣಿ, ಸೇರಿದಂತೆ ಸ್ಥಳೀಯ ಗ್ರಾಮಸ್ಥರು ಗಣ್ಯವ್ಯಕ್ತಿಗಳು ಭಾಗವಹಿಸಿದ್ದರು,