ಬೈಕ್‌ನಿಂದ ಬಿದ್ದು ತೀವ್ರ ಗಾಯಗೊಂಡ ಪ್ರೇಮಾ ಮಲ್ಲಿಕಾರ್ಜುನ ಸುಳ್ಳಳ್ಳಿ (45) ಎಂಬುವವರು ಮೃತಪಟ್ಟ ಘಟನೆ ಹಾವೇರಿ ಪಟ್ಟಣದ ಪಿ.ಬಿ.ರಸ್ತೆಯಲ್ಲಿ ನಡೆದಿದೆ.
ಬಸವೇಶ್ವರನಗರದ 1ನೇ ಕ್ರಾಸ್ ನಿವಾಸಿ ಪ್ರೇಮಾ ಅವರು ಆ. 29ರಂದು ಬೈಕ್‌ನಲ್ಲಿ ಹೊರಟಿದ್ದಾಗ ಹಳೇ ಪಿ.ಬಿ.ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು, ಈ ಅವಘಡ ಸಂಭವಿಸಿದೆ.
ಅಪಘಾತಕ್ಕೆ ಕಾರಣರಾದ ಆರೋಪದಡಿ ಅವರ ಮಗ ಕರಬಸು ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಹಾವೇರಿ ಸಂಚಾರ ಠಾಣೆ ಪೊಲೀಸರು ಹೇಳಿದರು.
‘ಆರೋಪಿ ಕರಬಸು, ತಮ್ಮ ತಾಯಿ ಪ್ರೇಮಾ ಅವರನ್ನು ಬೈಕ್‌ನಲ್ಲಿ ಹತ್ತಿಸಿಕೊಂಡು ಮೋಟೆಬೆನ್ನೂರು ಕಡೆಯಿಂದ ಹಳೇ ಪಿ.ಬಿ.ರಸ್ತೆ ಮೂಲಕ ಹಾವೇರಿಗೆ ಬಂದಿದ್ದರು. ಮಾರ್ಗಮಧ್ಯೆ ಅತೀ ವೇಗವಾಗಿ ಬೈಕ್ ಚಲಾಯಿಸಿದ್ದರು. ಇದರಿಂದಾಗಿ ಬೈಕ್‌ನಿಂದ ರಸ್ತೆಗೆ ಬಿದ್ದಿದ್ದ ಪ್ರೇಮಾ ಅವರ ತಲೆಗೆ ತೀವ್ರ ಪೆಟ್ಟಾಗಿತ್ತು. ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹುಬ್ಬಳ್ಳಿ ಖಾಸಗಿ ಆಸ್ಪತ್ರೆ, ಅಲ್ಲಿಂದ ಕಿಮ್ಸ್‌ಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿಯೇ ಪ್ರೇಮಾ ತೀರಿಕೊಂಡಿದ್ದಾರೆ”ಎಂದು ತಿಳಿಸಿದ್ದಾರೆ.