“ಮಣ್ಣು ಮತ್ತು ನೀರಿನ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ನೀರನ್ನು ಹಿತ ಮಿತವಾಗಿ ಬಳಸಬೇಕು , ರೈತರು ಪ್ರತಿ ಮನೆಗೆ ಇಂಗು ಗುಂಡಿ ನಿರ್ಮಿಸಿ ಮಳೆಗಾಲದಲ್ಲಿ ಮನೆ ಸೂರಿನಿಂದ ಬೀಳುವ ನೀರನ್ನು ಇಂಗು ಗುಂಡಿಗೆ ನೀರು ಬೀಳುವಂತೆ ವ್ಯವಸ್ಥೆ ಮಾಡಬೇಕು” ಎಂದು ಸಂಪನ್ಮೂಲ ವ್ಯಕ್ತಿ ಶಾನವಾಜ ಅಲ್ಲಾವುದ್ದೀನ ಚಿಣಗಿ ಹೇಳಿದರು.
ಹಾವೇರಿ ಜಿಲ್ಲೆಯ ಹಾನಗಲ್ಲ ತಾಲ್ಲೂಕಿನ ದಶರಥಕೊಪ್ಪ ಲೊಯೋಲ ವಿಕಾಸ ಕೇಂದ್ರ ಸಮಾಜ ಸೇವಾ ಸಂಸ್ಥೆ ಹಾಗೂ ಸಮಗ್ರ ಸುಸ್ಥಿರ ಯೋಜನೆ ಸಂಯುಕ್ತ ಆಶ್ರಯದಲ್ಲಿ ಮಹಿಳೆಯರಿಗೆ, ಪುರುಷರಿಗೆ ಹಾಗೂ ಸಮುದಾಯದ ಜನರಿಗೆ ಮಣ್ಣು ಮತ್ತು ನೀರು ಸಂರಕ್ಷಣೆ ಹಾಗೂ ನರೇಗಾ ಯೋಜನೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
“ಭಾರತ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಮಹಾತ್ಮಾ ಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಾಗಿದೆ. ದೇಶದ ಗ್ರಾಮೀಣ ಭಾಗದ ಬಡ ವರ್ಗದ ಜನರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಿ ಬಡತನ ನಾಶ ಮಾಡುವ ಉದ್ಯೇಶವಾಗಿದೆ. ಕನಿಷ್ಠ ೧೦೦ ದಿನಗಳ ಉದ್ಯೋಗ ನೀಡುವ ಕಾನೂನು ಬದ್ಧ ಯೋಜನೆಯಾಗಿದೆ” ಎಂದರು.
“ಶ್ರಮದ ಮೂಲಕ ಆದಾಯದ ಮೂಲ ಸೃಷ್ಠಿಸಿ ಆತ್ಮ ವಿಶ್ವಾಸ ಸೃಷ್ಟಿಸುವದು. ಮನೆ ಹತ್ತಿರ ಉದ್ಯೋಗಕ್ಕೆ ಅರ್ಜಿಸಲ್ಲಿಸುವದು, ಉದ್ಯೋಗಕ್ಕಾಗಿ ಕೆಲಸದ ಅರ್ಜಿ ಗ್ರಾಮ ಪಂಚಾಯಿತಿಗೆ ಹೇಗೆ ನೀಡಬೇಕು. ಗ್ರಾಮೀಣ ಜನರ ಬಡತನ ನಿರ್ವಹಣೆ ಮಹಿಳೆಯರಿಗೆ ಸಮಾನ ಉದ್ಯೋಗ ಅವಕಾಶ, ಸ್ಥಳೀಯ ಆದಾರಿತ ಅಭಿವೃದ್ಧಿ ಕಾರ್ಯ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ” ಎಂದು ಹೇಳಿದರು.
“ಇಳಿಜಾರಿಗೆ ಅಡ್ಡಲಾಗಿ ಬದುಗಳನ್ನು ಹಾಗೂ ಮರಗಳನ್ನು ಬೆಳೆಸುವದರಿಂದ ಮಣ್ಣಿನ ಸವಕಳಿ ಕಡಿಮೆ ಆಗುತ್ತದೆ. ಫಲವತ್ತಾದ ಮಣ್ಣು ಹರಿದು ಹೋಗದಂತೆ ಕ್ರಮಗಳನ್ನು ಕೈಗೊಳ್ಳಬೇಕು. ಭೂಮಿಗೆ ರಾಸಾಯನಿಕ ಗೊಬ್ಬರ ಅತಿಯಾದ ಬಳಕೆಯಿಂದ ಭೂಮಿ ಬಂಜರವಾಗದಂತೆ ತಡೆಗಟ್ಟುವದು ಪ್ರತಿಯೊಬ್ಬರ ಕರ್ತವ್ಯವಾಗಿದೆ” ಎಂದು ತಿಳಿಸಿದರು.
ತರಬೇತಿಯಲ್ಲಿ ಗ್ರಾಮದ ಮಹಿಳೆಯರು ಉಪಸ್ಥಿತರಿದ್ದರು. ಫೀರಪ್ಪ ಶಿರ್ಶಿ ನಿರೂಪಿಸಿದರು. ಸ್ವಾಗತ ಮಂಜುಳಾ ನಾಗೋಜಿ, ಮಂಜುಳಾ ಮರಗಡಿ ವಂದಿಸಿದರು.