ಹಾವೇರಿ | ಬಂಜಾರ ಸಮುದಾಯದ ಕಲೆ ಬೆಳಸಬೇಕು : ಸೈನಾ ಭಗತ್ ಮಹಾರಾಜ

Date:

“ತಮ್ಮ ಉಡುಪು ಮತ್ತು ನೃತ್ಯದ ಮೂಲಕ ಈಗಲೂ ಅನನ್ಯತೆಯನ್ನು ಉಳಿಸಿಕೊಂಡಿರುವ ಲಂಬಾಣಿ ಜನಾಂಗ ಸದಾ ಕಷ್ಟ ಜೀವಿಗಳು. ಇಂಥಹ ಸಣ್ಣ ಸಮುದಾಯದ ಕಲೆ ಸಂಸ್ಕೃತಿಯನ್ನು ಬಹು ಸಂಖ್ಯಾತ ಸಮಾಜದವರು. ಪ್ರೀತಿ ವಿಶ್ವಾಸದಿಂದ  ಬಂಜಾರ ಸಮುದಾಯದ ಕಲೆ ಬೆಳೆಸಬೇಕು” ಎಂದು ಬಂಜಾರ ಸಮುದಾಯದ ಸಾಲೂರಮಠದ ಸೈನಾ ಭಗತ್ ಮಹಾರಾಜರು ಹೇಳಿದರು.

- Advertisement -

ಹಾವೇರಿ ಪಟ್ಟಣದ ಗುರುಭವನದಲ್ಲಿ ಪೂರ್ವಿಕ ಬಂಜಾರ ಸಾಂಸ್ಕೃತಿಕ ಕಲಾ ಸಂಸ್ಥೆಯ ವಾರ್ಷಿಕೋತ್ಸವವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಆಶೀರ್ವಚನವನ್ನು ನೀಡಿದ ಹೊಸಮಠದ ಬಸವಶಾಂತಲಿಂಗ ಮಹಾಸ್ವಾಮಿಗಳು ಮಾತನಾಡಿ, “ಕಲೆ ಕಲಾವಿದನಿಗೆ ಸಮಾಜದಲ್ಲಿ ಬೆಲೆ ತರುತ್ತವೆ. ಬಂಜಾರುಗಳು ಉತ್ತಮ ಹಾಡುಗಾರರು ಮತ್ತು ನೃತ್ಯ ಪಟುಗಳು. ಅವರ ಕಲೆ ಒಟ್ಟು ಸಮಾಜದ ಶ್ರೀಮಂತಿಕೆಯನ್ನು ಹೆಚ್ಚಿಸಿದೆ. ಇಂತಹ ಸಮಾಜದ ಪ್ರತಿನಿಧಿಯಾಗಿ ಗೀತಾಬಾಯಿ ಲಮಾಣಿ ತಮ್ಮ ಪೂರ್ವಿಕಾ ಕಲಾ ಸಂಸ್ಥೆಯ ಮೂಲಕ ಘನತೆ ಹೆಚ್ಚಿಸಿದ್ದಾರೆ” ಎಂದರು.

ಸಮಾರಂಭವನ್ನು ಉದ್ದೇಶಿಸಿ ಆರ್.ಬಿ. ಪಾಟೀಲ, ಪ್ರಭಾಕರ ತಳವಾರ ಅಲ್ಪಸಂಖ್ಯಾತರ ಆಯೋಗದ ಸದಸ್ಯೆ ಶ್ರೀಮತಿ ಪರಿಮಳಾ ಜೈನ್, ಜಿಲ್ಲಾ ಸಾಂಸ್ಕೃತಿಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರು ಬಸವರಾಜ ಸಾವಕ್ಕನವರ, ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಬಡವೆಪ್ಪ ಆನವಟ್ಟಿ, ದಲಿತ ನಾಯಕರು ಸಂಜಯಗಾಂಧಿ ಸಂಜೀವಣ್ಣನವರ, ಚೇತನರಾಜ ಎನ್ ಮುಂತಾದವರು ಮಾತನಾಡಿದರು.

ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಝಿ ಟಿ.ವ್ಹಿ ಸರಿಗಮ ರನ್ನರ್ ಅಪ್ ರಮೇಶ ಲಮಾಣಿ ಆಕರ್ಷಣಿಯಾಗಿದ್ದರು. ಗೌತಮ ಸಾವಕ್ಕನವನರವರ ಸ್ಯಾಕ್ಸೊಫೋನ್, ರೇಣುಕಾ ಗೋರಿಮಟ್ಟಿ ಅವರ ಸೋಬಾನಿ ಪದ, ಆರುಂಧತಿ ಅವರ ಜೋಗತಿ ನೃತ್ಯ, ಎಸ್. ಕುಶಾಲ ಚಿತ್ರಗಾರರ ಭಕ್ತಿಗೀತೆ, ಜ್ಯೋತಿ ಅರ್ಕಸಾಲಿ ಅವರ ಕೋಲಾಟ, ರಕ್ಷಿತಾ ಬಂಜಾರ, ಮೇಘಾ ಲಂಬಾಣಿ ಅವರುಗಳ ಲಂಬಾಣಿ ನೃತ್ಯ ಪ್ರದರ್ಶನವಾದವು.

ಈ ಸುದ್ದಿ ಓದಿದ್ದೀರಾ? ಗದಗ | ಅವಳಿ ನಗರಕ್ಕೆ ಸಮರ್ಪಕ ನೀರಿನ ಪೂರೈಕೆಗೆ ಆದ್ಯತೆ ಇರಲಿ : ಸಚಿವ ಎಚ್ ಕೆ ಪಾಟೀಲ

ಗಣ್ಯರಾದ ರಾಜಾಸಾಹೇಬ ಮಾನೇಗಾರ, ಪ್ರದೀಪಗೌಡ್ರ, ನಾಗರಾಜ ಲಮಾಣಿ, ಶಾಂತಪ್ಪ ಲಮಾಣಿ, ಶೇಖಪ್ಪ ದೇವಪ್ಪ ಲಮಾಣಿ, ಹಾಲೇಶ ಗೋಪಿನಾಯಕ್, ಸುನೀಲ್ ಲಮಾಣಿ, ಯೂಸುಫ್ ಸೈಕಲ್‌ಗಾರ, ಶಿವಯೋಗಿ ಗುರ್ಜನವರ ಮುಂತಾದವರು ಉಪಸ್ಥಿತರಿದ್ದರು. ಆರಂಭದಲ್ಲಿ ನಾಗರಾಜ ನಡುವಿನಮಠ ಸ್ವಾಗತಿಸಿದರು. ಪೂರ್ವಿಕಾ ಬಂಜಾರು ಕಲಾಸಂಸ್ಥೆಯ ಮುಖ್ಯಸ್ಥರಾದ ಗೀತಾಬಾಯಿ ಲಮಾಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶ್ರೀಮತಿ ಅನಿತ ಹರನಗಿರಿ ಮತ್ತು ಕುಬೇರ ನಾಯ್ಕ ನಿರೂಪಿಸಿದರು. ಕೊನೆಯಲ್ಲಿ ಶಿವಪ್ಪ ಲಮಾಣಿ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಾರ್ಮಿಕರು ಹಕ್ಕು ಮತ್ತು ಸೌಲಭ್ಯಗಳಿಂದ ವಂಚಿತರಾಗದಂತೆ ನೋಡಿಕೊಳ್ಳಿ: ಟಿ.ಎಂ. ಶಾಹಿದ್ ತೆಕ್ಕಿಲ್

ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡುವುದರೊಂದಿಗೆ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ...

ಬಾಗೇಪಲ್ಲಿಯಲ್ಲಿ ರಸ್ತೆ ಅಪಘಾತ:ರೈತ ನಂಜಪ್ಪ ಸಾವು

ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ದ್ವಿಚಕ್ರ ವಾಹನದಲ್ಲಿ ಹೊಲಕ್ಕೆ ತೆರಳುತ್ತಿದ್ದ ನಡಂಪಲ್ಲಿ...

ಮಂಗಳೂರು | ಕೊಳ್ತಮಜಲು ರಹ್ಮಾನ್ ಹತ್ಯೆ ಪ್ರಕರಣ: ಆರೋಪಿಗಳ ಜಾಮೀನು ರದ್ದುಪಡಿಸಿದ ಸುಪ್ರೀಂ ಕೋರ್ಟ್

ಕೊಳ್ತಮಜಲು ರಹ್ಮಾನ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳಿಗೆ ಇತ್ತೀಚೆಗೆ ನ್ಯಾಯಾಲಯ ಜಾಮೀನು ನೀಡಿತ್ತು....

ಕೋಲಾರ | ಚೈನಾ ಶಾಂಘೈನಲ್ಲಿ ಕನ್ನಡದ ಮೊದಲ ಜಾನಪದ ಕಾರ್ಯಕ್ರಮ: ಗೋ.ನಾ. ಸ್ವಾಮಿ ಭಾಗಿ

ಚೈನಾ ದೇಶದ ಶಾಂಘೈನಲ್ಲಿ ಕನ್ನಡಿಗರ ಸಂಘದ ವತಿಯಿಂದ ಆಯೋಜಿಸಿದ್ದ ಕನ್ನಡದ ಮೊದಲ...