ಹಾವೇರಿ ಎಸ್.ಪಿ ಕಚೇರಿಯಲ್ಲಿ ಎಸ್ಸಿ. ಎಸ್ಟಿ ಹಾಗೂ ಒಬಿಸಿ ಸಮಿತಿ ವತಿಯಿಂದ ನೂತನ ಪೋಲಿಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಅವರನ್ನು ಗೌರವಿಸಿ ಸನ್ಮಾನಿಸಿ ಉಡಚಪ್ಪ ಮಾಳಗಿ ಮಾತನಾಡಿದರು.
“ನಮ್ಮ ಜಿಲ್ಲೆಗೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾಗಿ ಆಗಮಿಸಿದ್ದಕ್ಕೆ ನಮ್ಮ ಸಮಾಜದ ಪರವಾಗಿ ಹಾಗೂ ಜಿಲ್ಲೆಯ ಪರವಾಗಿ ಸ್ವಾಗತ ಕೋರುತ್ತೇವೆ. ಜಿಲ್ಲೆಗೆ ಮೊದಲ ಮಹಿಳಾ ಎಸ್.ಪಿ ಗಳಾಗಿ ಆಗಮಿಸಿದ್ದು ಹೆಮ್ಮೆಯ ವಿಷಯವಾಗಿದೆ. ಕ್ರಿಯಾಶೀಲರಾಗಿರುವ ತಮ್ಮಿಂದ ಜಿಲ್ಲೆಯ ಜನತೆಗೆ ಉತ್ತಮ ಸೇವೆ ದೊರೆಯಲಿ” ಎಂದು ಶುಭ ಕೋರಿದರು.
ಈ ಸಂದರ್ಭದಲ್ಲಿ ಭೀಮ ಘರ್ಜನೆ ಸಂಘಟನೆಯ ರಾಜಾಧ್ಯಕ್ಷರಾದ ತಿರಕಪ್ಪ ಚಿಕ್ಕೇರಿ, ಕಲ್ಯಾಣ ಸಮಿತಿ ಜಿಲ್ಲಾಧ್ಯಕ್ಷರಾದ ಮಂಜಪ್ಪ ನಾಗಪ್ಪ ಮರೋಳ, ಮುಖಂಡರಾದ ಮೃತ್ಯಂಜಯ ಮುಷ್ಠಿ,ಪ್ರಮೋದ ಕಾಲ್ಪಲ್,ವಿಭೂತಿ ಶೆಟ್ಟಿ,ಜಗದೀಶ ಹರಿಜನ, ಹನುಮಂತಪ್ಪ ಸಿ.ಡಿ,ಸುರೇಶ ಹಳ್ಳಳ್ಳಿ,ಪರಸಪ್ಪ ದಾಸನಕೇರಿ,ಬಸವಣ್ಣೆಪ್ಪ ಹಳ್ಳಿಳ್ಳಿ,ಬಸವರಾಜಪ್ಪ ಹಳ್ಳಳ್ಳಿ,ಬಸವರಾಜ ದೇವರಮನಿ,ರೇಣುಕಾ ಬಡಕಣ್ಣನವರ,ಪರಸಪ್ಪ ಹೌಂಸಿ,ಅನ್ನಪೂರ್ಣ ಹರಿಕೇರಿ,ಲಕ್ಷ್ಮೀ ಹುಕ್ಕೇರಿ, ಶಿವಲಿಂಗಪ್ಪ ನಿಂಗಪ್ಪನವರ, ರಾಘವೇಂದ್ರ ಹಾವನೂರ,ಆರ್ ಬಿ ಪಾಟೀಲ ಇನ್ನು ಮುಂತಾದವರು ಪಾಲ್ಗೊಂಡಿದ್ದರು.