ಪ್ರಸಕ್ತ 2026-27ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ತಲಾ ಏಳು ಶಿಕ್ಷಕರು ಸೇರಿದಂತೆ ಒಟ್ಟು 21 ಶಿಕ್ಷಕರು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನೋತ್ಸವ ಅಂಗವಾಗಿ ಪ್ರತಿ ವರ್ಷ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನ ಆಚರಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಜಿಲ್ಲಾಡಳಿತದಿಂದ ಜಿಲ್ಲಾ ಮಟ್ಟದ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರಿಗೆ ₹ 5 ಸಾವಿರ ನಗದು ಸಮೇತ ಸ್ಮರಣಿಕೆ ನೀಡಿ ಗೌರವಿಸಲಾಗುತ್ತದೆ.
ಕಿರಿಯ ಪ್ರಾಥಮಿಕ ವಿಭಾಗ: ಮಾಲತೇಶ ಎಸ್. ಗುಡಗೂರ (ಬ್ಯಾಡಗಿ), ಹನುಮಂತಪ್ಪ ಬ. ಹಳ್ಳಪ್ಪನವರ (ಹಾವೇರಿ), ಎನ್.ಎಫ್. ಭಜಂತ್ರಿ (ಹಾನಗಲ್), ಗೀತಮ್ಮ ಮರಳಪ್ಪನವರ (ಹಿರೇಕೆರೂರು), ಬಿಲಕಿಸ್ ಜಹಾಂ ಕಲ್ಮನಿ (ರಾಣಿಬೆನ್ನೂರ), ನೀಲಮ್ಮ ಕೆಂಡದಮಠ (ಸವಣೂರು), ಸರೋಜಾ ವಡಕಮ್ಮನವರ (ಶಿಗ್ಗಾಂವಿ) ಶಿಕ್ಷಕರು ಆಯ್ಕೆಯಾಗಿದ್ದಾರೆ.
ಹಿರಿಯ ಪ್ರಾಥಮಿಕ ವಿಭಾಗ: ಶಿವಬಸವ ಎಸ್.ಅಜಗೊಂಡರ (ಬ್ಯಾಡಗಿ), ಶ್ರೀಮತಿ ದಾಕ್ಷಾಯಣಿ ಕೆ. (ಹಾವೇರಿ), ಜೀಲಾನಿ ಕಡಕೋಳ (ಹಾನಗಲ್), ಸಿದ್ದಪ್ಪ ಕೆ. ಕುರಿಯವರ (ಹಿರೇಕೆರೂರು), ಜಿ. ರೇಣುಕಮ್ಮ (ರಾಣಿಬೆನ್ನೂರ) ಮಂಜುನಾಥ್ ಬಾವಿಕಟ್ಟಿ ಸವಣೂರು), ಮುಬಿನತಾಜ್ ಆರ್. ದಖನಿ (ಶಿಗ್ಗಾಂವಿ) ಶಿಕ್ಷಕರು ಆಯ್ಕೆಯಾಗಿದ್ದಾರೆ.
ಪ್ರೌಢ ವಿಭಾಗ: ಅರ್ಪಣಾ ಎಲ್. (ಬ್ಯಾಡಗಿ), ಎಸ್.ಎಸ್. ನಡುವಿನಮಠ (ಹಾವೇರಿ), ಪರಶುರಾಮ ವೈ. ಹುನಗುಂದ (ಹಾನಗಲ್), ಶಿವಕುಮಾರ ಸಿ.ಬೆಳಕೇರಿ (ರಾಣಿಬೆನ್ನೂರ), ಕುಸುಮಾವತಿ ಕೆ. ಮೇಗಳಮನಿ (ಹಿರೇಕೆರೂರ), ಶಶಿಕಲಾ ಹೊಸಳ್ಳಿ (ಸವಣೂರ), ರವೀಂದ್ರ ದುಂದೂರ (ಶಿಗ್ಗಾಂವಿ) ಅವರು ಆಯ್ಕೆಯಾಗಿದ್ದಾರೆ.
2026ರ ಸೆಪ್ಟೆಂಬರ್ 5ರಂದು ಹಾವೇರಿಯ ಜಿಲ್ಲಾ ಗುರುಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ.





