ಹಾವೇರಿ | ರೈತರ ಬೇಡಿಕೆಗಳನ್ನು ಈಡೇರಿಸುವಂತೆ ರೈತ ಸಂಘ ಮನವಿ

Date:

ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದ ತಹಶೀಲ್ದಾರ ಕಛೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ರಾಜ್ಯಾಧ್ಯಕ್ಷರು ಕೋಡಿಹಳ್ಳಿ ಚಂದ್ರಶೇಖರ) ವತಿಯಿಂದ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ ನಡೆಸಿ, ತಹಶಿಲ್ದಾರರಿಗೆ ಮನವಿ ಸಲ್ಲಿಸಿದರು.

- Advertisement -

“ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನಲ್ಲಿ ಅಡಿಕೆ ಮತ್ತು ಮಾವು ಬೆಳೆಗಾರರು ಇದ್ದು, ರೈತರು ಕಳೆದ ವರ್ಷ ತುಂಬಿದ ಬೆಳೆ ವಿಮಾ ಮೊತ್ತ ಮಂಜೂರಾಗಿದ್ದು 2026ನೇ ಇಸ್ವಿ ಕಳೆಯುತ್ತಾ ಬಂದರು ಇಲ್ಲಿಯವರೆಗೆ ರೈತರಿಗೆ ಬೆಳೆ ವಿಮಾ ಹಣ ಜಮಾ ಆಗಿರುವುದಿಲ್ಲ. ಇದನ್ನು ಸರ್ಕಾರವಾಗಲೀ, ಶಾಸಕರಾಗಲೀ, ಇಲಾಖೆಯಾಗಲೀ ಗಂಭಿರವಾಗಿ ಪರಿಗಣಿಸಿಲ್ಲ. ರೈತರಿಗೆ ಅತೀ ಶೀಘ್ರದಲ್ಲಿ ರೈತರ ಖಾತೆಗೆ ಜಮೆ ಮಾಡಬೇಕು” ಎಂದು ಒತ್ತಾಯಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

“ಹಾನಗಲ್ಲ ತಾಲೂಕಿನಲ್ಲಿ ಅತೀ ಹೆಚ್ಚು ಅಡಿಕೆ ಬೆಳೆಗಾರರು ಇದ್ದು, ಅಡಿಕೆ ವ್ಯಾಪಾರದ ಮಾರುಕಟ್ಟೆ ಅವಶ್ಯಕತೆ ಇದೆ. ಇದನ್ನು ಸರ್ಕಾರ ಕೂಡಲೇ ಇದರ ಕಡೆ ಗಮನ ಹರಿಸಿ ರೈತರಿಗೆ ಹಾಗೂ ವ್ಯಾಪಾರಸ್ಥರಿಗೆ ಅನುಕೂಲವಾಗುವ ಹಾಗೆ ಎಪಿಎಂಸಿ ಮಾರುಕಟ್ಟೆಯನ್ನು ತೆರೆಯಬೇಕು. ಎಂದು ಮನವಿ ಮಾಡಿದರು.

“ಹಾವೇರಿ ಜಿಲ್ಲೆಯಲ್ಲಿ ಮೂರು ಸಕ್ಕರೆ ಕಾರ್ಖಾನೆಗಳು ಇದ್ದು, ಹಿಂದಿನಿಂದಲೂ ರೈತರಿಗೆ ಮೋಸ ಮಾಡುತ್ತಾ ಬಂದಿವೆ. ಮಾರುಕಟೆಯಲ್ಲಿ ಸಕ್ಕರೆ ದರ ಹೆಚ್ಚಿಗೆ ಆಗಿದ್ದು, ರೈತರಿಗೆ ಪ್ರತಿ ಟನ್ ಕಬ್ಬಿಗೆ 5500/-ರಿಂದ 6000/- ದವರೆಗೆ ದರ ನಿಗದಿಪಡಿಸಬೇಕು. ರೈತರಿಗೆ ಗೊಬ್ಬರ ಬೀಜ ಕಳೆ ನೀರು, ಕಟಾವು ಸಾಗಾಣಿಕೆ ವೆಚ್ಚ ಅತೀ ಹೆಚ್ಚಾಗಿರುವುದರಿಂದ ಕೂಡಲೇ ದರವನ್ನು ನಿಗದಿಪಡಿಸಬೇಕು” ಒತ್ತಾಯಿಸಿದರು.

“ಹಾವೇರಿ ಜಿಲ್ಲೆ ಹಾನಲಗಲ್ಲ ತಾಲೂಕಿನಲ್ಲಿ ವರದಾ ಹಾಗೂ ಧರ್ಮಾ ಎರಡು ನದಿಗಳು ಸಂಚರವಾಗಿದ್ದು ವರದಾ ನದಿಯಿಂದ ಲಿಪ್ಪ ಇರಿಗೇಶನ ಅಂದರೆ ಬಾಳಂಬೀಡ ಏತ ನೀರಾವರಿಯಿಂದ ಬೊಮ್ಮನಹಳ್ಳಿ ಭಾಗದ ಕಡೆಗೆ ಇನ್ನು ಹಲವಾರು ಕೆರೆಗಳು ನೀರು ತುಂಬಿರುವುದಿಲ್ಲ. ಇಲಾಖೆಯ ಬೇಜವಾಬ್ದಾರಿತನದಿಂದ ಕೆರೆಗಳಲ್ಲಿ ನೀರು ಕಡಿಮೆ ಇದ್ದು, ಕೂಡಲೇ ಇಲಾಖೆಯವರು ಗಮನಹರಿಸಬೇಕು” ಎಂದು ಆಗ್ರಹಿಸಿದರು.

“ವರದಾ ನದಿಗೆ ತಾಲೂಕಿನಲ್ಲಿ 5 ಕಡೆ ಬ್ರಿಜ್ ಕಂ ಬ್ಯಾರೇಜಗಳು ಇದ್ದು, ಅವುಗಳಿಗೆ ಸರಿಯಾದ ರೀತಿಯಲ್ಲಿ ಗೇಟುಗಳು ಇರುವುದಿಲ್ಲ. ಕಳೆದ ವರ್ಷ ನೀರಿಲ್ಲದೇ ರೈತರು ನೋವನ್ನು ಅನುಭವಿಸಿದ್ದಾರೆ. ಈ ಬಾರಿ ಸಂಪೂರ್ಣ ಬರಗಾಲ ಇದ್ದು, ಬ್ರಿಡ್ಜ್ ಕಂ ಬ್ಯಾರೇಜ ಕಡೆ ಗಮನ ಹರಿಸಿ ಎಲ್ಲ ಬ್ರಿಡ್ಜ್ ಕಂ ಬ್ಯಾರೇಜ ತುಂಬಲು ಗಮನ ಹರಿಸಬೇಕು” ಎಂದು ಒತ್ತಾಯಿಸಿದರು.

“ಹಾನಗಲ್ಲ ತಾಲೂಕಿನಲ್ಲಿ ಧರ್ಮಾ ನದಿಗೆ 19 ಕಡೆ ಬ್ರಿಡ್ಜ್ ಕಂ ಬ್ಯಾರೇಜಗಳು ಇದ್ದು, ಕಳೆದ ವರ್ಷ ಬೇಸಿಗೆಯಲ್ಲಿ ನದಿಯಲ್ಲಿ ನೀರು ಇಲ್ಲದೇ ಗೇಟುಗಳನ್ನು ಹಾಕಿದರು. ರೈತರಿಗೆ ಯಾವುದೇ ಅನುಕೂಲ ಆಗಿಲ್ಲ. ಈ ಸಾರಿ ಸಂಪೂರ್ಣ ಬರಗಾಲ ಇದ್ದು_ ಧರ್ಮಾ ನದಿಗೆ 19 ಬಾಂದಾರಗಳಿಗೆ ಗೇಟುಗಳನ್ನು ಕಬ್ಬಿಣ ಕದವನ್ನು ಸರಿಯಾದ ರೀತಿಯಲ್ಲಿ ಹಾಕಬೇಕು. ಗೇಟುಗಳು ಕಳುವಾಗಿವೆ, ಕಡಿಮೆ ಇವೆ ಎಂದೂ ಸಬೂಬ ಹೇಳುವಂತಿಲ್ಲ. ಯಾವುದೇ ಬಾಂದಾರ ತುಂಬಿಲ್ಲ ಅಂದರೆ ಅದಕ್ಕೆ ಸಣ್ಣ ನೀರಾವರಿ ಇಲಾಖೆಯೇ ಜವಾಬ್ದಾರಿ. ನೀರು ಕಡಿಮೆ ಯಾದರೆ ಅಲ್ಲಿಯ ರೈತರಿಗೆ ನಷ್ಟವನ್ನು ಭರಿಸುವಂತಹ ಆಯಾ ಇಲಾಖೆಯೇ ಜವಾಬ್ದಾರಿ ವಹಿಸಬೇಕು” ರೈತರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರು ಚನ್ನಬಸಪ್ಪ ಹಾವಣಗಿ, ಗೌರವಾಧ್ಯಕ್ಷರು ಜಿಲ್ಲಾ ನಿಸಾಬ್ ನೆಗಳೂರ್, ಜಿಲ್ಲಾ ಕಾರ್ಯಧ್ಯಕ್ಷರು ಬಸವಂತಪ್ಪ ಮೆಳ್ಳಿಹಳ್ಳಿ, ತಾಲೂಕ ಕಾರ್ಯಾಧ್ಯಕ್ಷರು ಜಗದೀಶ್ ಪಾಟೀಲ್, ಪ್ರಧಾನ ಕಾರ್ಯದರ್ಶಿ ವೀರನಗೌಡ ಮಾಳಗಿ, ಸದಸ್ಯರು ಚಂದ್ರಶೇಖರ್ ಬೈಲವಾಳ, ರಾಜು ರಾಗಿಕೊಪ್ಪ, ಬಸವರಾಜ್ ಉತ್ತಂಗಿ, ಅಬ್ದುಲ್ ಖಾದರ್ ಪಾಳ, ಬಸಣ್ಣ ಸಿ ಗಂಜಿಗಟ್ಟಿ, ವಿಜಯಕುಮಾರ ಬೖಲವಾಳ, ಗುರುಶಾಂತಪ್ಪ ಶಿವಣ್ಣನವರ, ಮಲ್ಲಿಕಾರ್ಜುನ ರಾಮಾಪುರ, ಸತೀಶ್ ಸಂಗಪ್ಪ ಹುಣಸಿಕಟ್ಟಿ, ನಿಷಿಮ್ಮಪ್ಪ ವರ್ದಿ, ಸತೀಶ್ ಪಾಟೀಲ್, ಪಂಚಾಕ್ಷರಿ ಪಾಟೀಲ್, ಶಿವರಾಜ್ ಪಟ್ಟಣಶೆಟ್ಟಿ, ಪಂಚಾಕ್ಷರಿ ನೀರಲಗಿ, ಕಿರಣ ಹಂಚಿನಮನಿ, ರಾಜು ದಾನಮ್ಮನವರ ಸೇರಿದಂತೆ ಇನ್ನು ಅನೇಕ ರೈತರು  ಈ ಸಂದರ್ಭದಲ್ಲಿ ಭಾಗವಹಿಸಿದ್ದರು

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಎಸ್‌ಐಆರ್ ರದ್ದತಿಗೆ ಆಗ್ರಹಿಸಿ ತಿರಂಗಾ ಯಾತ್ರೆ: ಮುಖ್ಯ ಚುನಾವಣಾ ಆಯುಕ್ತರ ವಜಾಕ್ಕೆ ಒತ್ತಾಯ

ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು, ಮುಖ್ಯ...

ಉಡುಪಿ | ಭೂಗತ ಪಾತಕಿ ಹೇಮಂತ್ ಪೂಜಾರಿ ಜೊತೆ ಸೇರಿ ಉದ್ಯಮಿಗಳಿಗೆ ಬೆದರಿಕೆ ಪ್ರಕರಣ: ಆರೋಪಿ ಸೆರೆ

ಭೂಗತ ಪಾತಕಿ ಹೇಮಂತ್ ಪೂಜಾರಿ ಜೊತೆ ಸೇರಿಕೊಂಡು ಜಿಲ್ಲೆಯ ಉದ್ಯಮಿ ಹಾಗೂ...

ಉಡುಪಿ | ಮಲಬಾರ್ ಗೋಲ್ಡ್‌ನಲ್ಲಿ ‘ಆರ್ಟಿಸ್ಟ್ರಿ’ ಆಭರಣ ಪ್ರದರ್ಶನಕ್ಕೆ ಚಾಲನೆ

ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಉಡುಪಿ ಶಾಖೆಯಲ್ಲಿ ಆಯೋಜಿಸಲಾಗಿರುವ ‘ಆರ್ಟಿಸ್ಟ್ರಿ’ ಕಲಾತ್ಮಕ...

ಗದಗ | ಪಶ್ಚಿಮ ಪದವೀಧರರ  ಚುನಾವಣೆ; ಜಿಲ್ಲೆಯಲ್ಲಿ ಶೇ. 77.66  ರಷ್ಟು ಮತದಾನ ದಾಖಲು

ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ದ್ವೈವಾರ್ಷಿಕ ಚುನಾವಣೆಯ ಮತದಾನವು ಅಕ್ಟೋಬರ್ 23...