ಹಾವೇರಿ | ಉತ್ತರ ಕರ್ನಾಟಕದಲ್ಲಿ ಕಬ್ಬಿಗೆ ಒಂದೇ ದರ ನಿಗದಿಗೆ ರೈತರ ಆಗ್ರಹ

Date:

ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆ ಎದುರು ತೂಕದ ಯಂತ್ರ ನಿರ್ಮಾಣವಾಗಬೇಕು, ಜಿಲ್ಲೆಗೆ ಪ್ರತ್ಯೇಕ ರಿಕವರಿ ಲ್ಯಾಬ್ ಮಾಡಿಕೊಡಬೇಕು, ಕಾರ್ಖಾನೆಯವರು ಉಳಿಸಿಕೊಂಡಿರುವ ಬಾಕಿ ಹಣ ಕೊಡಿಸಬೇಕು, ಉತ್ತರ ಕರ್ನಾಟಕದ ಕಬ್ಬು ಬೆಳೆಗಾರರಿಗೆ ಒಂದೇ ದರ ನಿಗದಿಯಾಗಬೇಕು”ಎಂದು ಕಬ್ಬು ಬೆಳೆಗಾರರು ಚರ್ಚಿಸಿದರು.

- Advertisement -

ಹಾವೇರಿ ತಾಲೂಕು ಗುತ್ತಲ ಪಟ್ಟಣದ ಸಂಗನಬಸವ ಕಲ್ಯಾಣ ಮಂಟಪದಲ್ಲಿ ರೈತರ ಬೃಹತ್ ಸಭೆ ನಡೆಯಿತು. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಾಲಿವುಡ್‌ ಮೇಲೆ ಭೂಗತ ಲೋಕದ ಕರಿನೆರಳು: ದಾವೂದ್ ಇಬ್ರಾಹಿಂನಿಂದ...

ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾಗಳಿಗೆ ಹಣ ಹೂಡುತ್ತಿದ್ದ, ನಟ-ನಟಿಯರ ವೃತ್ತಿಜೀವನದ ಮೇಲೆ ಪ್ರಭಾವ ಬೀರುತ್ತಿದ್ದ ಭೂಗತ ಲೋಕ, ಈಗ ಗುಂಡಿನ ದಾಳಿ ಮತ್ತು ಜೀವಬೆದರಿಕೆಗಳ ಮೂಲಕ ಮತ್ತೊಮ್ಮೆ ತನ್ನ ಅಸ್ತಿತ್ವ ಪ್ರದರ್ಶಿಸುತ್ತಿದೆ. ದಾವೂದ್...

ಲೋಕಸಭೆಯ ಬಲ 850ಕ್ಕೆ ಏರಿಕೆ: ಕಲಾಪದ ಸಮಯ ಹೆಚ್ಚಳವಿಲ್ಲದಿದ್ದರೆ...

ಲೋಕಸಭೆಯ ಸದಸ್ಯರ ಬಲವನ್ನು 550ರಿಂದ 850ಕ್ಕೆ ಹೆಚ್ಚಿಸುವ ‘ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ–2026’ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. ಜನಸಂಖ್ಯೆಗೆ ಅನುಗುಣವಾಗಿ ಸೀಟುಗಳ ಹೆಚ್ಚಳ ಅನಿವಾರ್ಯವಾದರೂ, ಸಂಸತ್ತಿನ ವಾರ್ಷಿಕ ಕಲಾಪದ ದಿನಗಳು ಮತ್ತು...

ಸೌದಿ ಅರೇಬಿಯಾದ ಕಂಠನಾಳಕ್ಕೇ ಕೈಹಾಕಿರುವ ಯೆಮನ್!

ಸೌದಿ ಅರೇಬಿಯಾದ ಜೀವನಾಡಿಗೇ ಕೈಹಾಕಿರುವ ಯೆಮನ್‌ನ ಈ ಪ್ರತಿರೋಧವು ಕೇವಲ ಒಂದು ಯುದ್ಧದ ಕಥೆಯಲ್ಲ; ಇದು ಮಧ್ಯಪ್ರಾಚ್ಯದ ರಾಜಕೀಯ ಇತಿಹಾಸವನ್ನೇ ಮರುಬರೆಯಬಹುದಾದ ಸಂಘರ್ಷವಾಗಿದೆ. ಅಲ್ಲಿಯವರೆಗೆ, ಯೆಮನ್ ಕೇವಲ ಅರಬ್ ಜಗತ್ತಿಗಷ್ಟೇ ಅಲ್ಲ, ಇಡೀ...

ಸಭೆಯಲ್ಲಿ ಕಬ್ಬು ಬೆಳೆಗಾರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಮಾತನಾಡಿ, “ಈ ವರ್ಷ ಒಂದು ಟನ್ ಕಬ್ಬಿಗೆ 5,500  ರೂಪಾಯಿಗಳನ್ನು ನಿಗದಿ ಮಾಡಬೇಕು. ರಿಕವರಿ ಎಂಬುದು ಕಾರ್ಖಾನೆಯವರು ಕಬ್ಬು ಬೆಳೆಗಾರರಿಗೆ  ಮೋಸ ಮಾಡುವ ಒಂದು ಅಸ್ತ್ರವಾಗಿದೆ. ದರ ನಿಗದಿಯಾಗುವವರೆಗೂ ಯಾವ ಕಾರ್ಖಾನೆಯನ್ನು ಶುರು ಮಾಡಬಾರದು. ಕಾರ್ಖಾನೆಯವರು ರೈತರನ್ನು ಒಗ್ಗಟ್ಟನ್ನು  ಒಡೆಯಲು ಪ್ರಯತ್ನಿಸುತ್ತಾರೆ ಯಾವುದೇ ಕಾರಣಕ್ಕೂ ರೈತರು ಕಬ್ಬನ್ನು ಕಡಿಸಲು ಮುಂದಾಗಬಾರದು” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಈಗ ಸಕ್ಕರೆಯ ದರ ಸಾಕಷ್ಟು ಹೆಚ್ಚಾಗಿದ್ದು, ಅದರ ಲಾಭ ರೈತರಿಗೂ ದೊರೆಯುವಂತಾಗಬೇಕು. ಮಾರುಕಟ್ಟೆಯಲ್ಲಿ ಸಕ್ಕರೆ ದರವನ್ನು ಸಾರ್ವಜನಿಕರಿಗೆ  ಐವತ್ತು ರೂಪಾಯಿ ಹಾಗೂ ವಾಣಿಜ್ಯ ಬಳಕೆಗೆ ನೂರು ರೂಪಾಯಿಯಂತೆ ಸಕ್ಕರೆ ದರ ನಿಗದಿಪಡಿಸಬೇಕು” ಎಂದು ತಿಳಿಸಿದರು. 

“ಕರ್ನಾಟಕ ರಾಜ್ಯದಲ್ಲಿ ಉತ್ಪಾದಿಸುತ್ತಿರುವ ಯಥನಾಲನ್ನು ಸಂಪೂರ್ಣವಾಗಿ ಸರಕಾರ ಖರೀದಿ ಮಾಡಿದರೆ ರೈತರಿಗೆ ಹೆಚ್ಚಿನ ಕಬ್ಬಿನ ದರ ನೀಡಲು ಅನುಕೂಲವಾಗುತ್ತದೆ. ಕೇಂದ್ರ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಯನ್ನು ಕೃಷಿಗೆ ಅನುಕೂಲವಾಗುವಂತೆ ಅಳವಡಿಸಿದರೆ ಅದರಿಂದ ರೈತರಿಗೆ ಆರ್ಥಿಕ ಹೊರೆ ತಪ್ಪಿಸಿದಂತಾಗುತ್ತದೆ. ಹಾಗೂ ಸ್ವಾಮಿನಾಥನ್ ವರದಿ ಈಗಲಾದರೂ ಜಾರಿಗೆ ಬರುವಂತಾಗಬೇಕು” ಎಂದು ಹೇಳಿದರು.

“ಈ ಎಲ್ಲ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ ನಮ್ಮ ಜಿಲ್ಲೆಯಲ್ಲಿ ಇರುವ ಸಕ್ಕರೆ ಸಚಿವರು ರುದ್ರಪ್ಪ ಲಮಾಣಿ ಅವರ ಮನೆಯ ಎದುರುಗಡೆ ಕಬ್ಬು ಬೆಳೆಗಾರರ ಹೋರಾಟವನ್ನು ಮಾಡಲಾಗುವುದು. ಆದಷ್ಟು ಬೇಗನೆ ಜಿಲ್ಲಾಧಿಕಾರಿಗಳು ಕಬ್ಬು ಬೆಳೆಗಾರರ ಸಭೆಯನ್ನು ಕರೆದು ಸಚಿವರ ನೇತೃತ್ವದಲ್ಲಿ ಸಭೆ ಮಾಡಬೇಕು” ಎಂದು ಕಬ್ಬು ಬೆಳೆಗಾರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಎಚ್ಚರಿಕೆ ನೀಡಿದರು.

ಸಭೆಯಲ್ಲಿ ರೈತ ಮುಖಂಡರು ಅಶೋಕ್ ರೆಡ್ಡಿ ಮರ್ಚ ರೆಡ್ಡೆರ, ಹನುಮಂತಪ್ಪ ಹುಚ್ಚಣ್ಣನವರ್, ಮುತ್ತಣ್ಣ ಎಲಿಗಾರ್, ಸಿದ್ದಣ್ಣ ಕೋಟಿ, ಅಲ್ತಾಫ್  ಶಿರಹಟ್ಟಿ, ವೀರಯ್ಯ ಹಿರೇಮಠ, ರವಿಕುಮಾರ್ ಸವಣೂರು, ಶಂಭುಲಿಂಗ ಅಣ್ಣಿಗೇರಿ ಸೇರಿದಂತೆ ಗುತ್ತಲ ಭಾಗದ 30ಕ್ಕೂ ಹೆಚ್ಚು ಹಳ್ಳಿಗಳ ರೈತರು ಕಬ್ಬು ಬೆಳೆಗಾರರು ರೈತ ಮುಖಂಡರು ಹಾಜರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಲಾರ | ನನ್ನ ರಾಜಕೀಯ ಏಳಿಗೆಯಲ್ಲಿ ಮಾಜಿ ಸಚಿವ ಆರ್.ಎಲ್. ಜಾಲಪ್ಪ ಅವರ ಪಾತ್ರ ದೊಡ್ಡದು | ಸಿದ್ದರಾಮಯ್ಯ

ನಗರದ ಶ್ರೀದೇವರಾಜ ಅರಸು ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರ ಹಾಗೂ...

ಚಿಕ್ಕಮಗಳೂರು | ಭೀಕರ ಅಪಘಾತ: ಇಬ್ಬರಿಗೆ ಗಂಭೀರ 

ವಾಹನ ಅಪಘಾತ,ಜೆಸಿಬಿ ಮತ್ತು ಬೈಕ್ ನಡುವೆ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು...

ಬಾಗೇಪಲ್ಲಿ: ಅಂತರರಾಜ್ಯ ಮಟ್ಟದ ಬಹುಭಾಷಾ ದಸರಾ ಕವಿಗೋಷ್ಠಿ

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ಪಟ್ಟಣಕ್ಕೆ ಸಮೀಪದ ಗಡಿದಂ ರಾಜರಾಜೇಶ್ವರಿ...