ಬೀದರ್ ಜಿಲ್ಲೆಯ ಹುಮನಾಬಾದ್ ತಾಲ್ಲೂಕಿನ ಸುಲ್ತಾನ್‌ಬಾದ್ ವಾಡಿ ಗ್ರಾಮದ ನಿವಾಸಿ ಹಣಮಂತಪ್ಪ ಎಂಬುವವರ ಪತ್ನಿ ಶಂಕ್ರೆಮ್ಮ ಹಾಲ್ಲಳ್ಳೆ (72) ಕಾಣೆಯಾಗಿರುವ ಬಗ್ಗೆ ಹಳ್ಳಿಖೇಡ(ಬಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆ.10ರಂದು ಬೆಳಿಗ್ಗೆ ಆಸ್ಪತ್ರೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಮನೆಯಿಂದ ಹೋದವರು ಮರಳಿ ವಾಪಸ್ ಬರಲಿಲ್ಲ. ಭಾಲ್ಕಿ ಬಸ್‌ಗೆ ಹತ್ತಿ ಹೋಗಿದ್ದಾರೆ ಎಂಬ ಪ್ರತ್ಯಕ್ಷದರ್ಶಿಗಳು ತಿಳಿಸಿದ ಹಿನ್ನೆಲೆ ಖಟಕಚಿಂಚೋಳಿ, ಭಾಲ್ಕಿ ಬಸ್ ನಿಲ್ದಾಣ ಸೇರಿದಂತೆ ನಮ್ಮೂರು ಸುತ್ತಮುತ್ತಲೂ ಹುಡುಕಾಟ ನಡೆಸಿದರೂ ಎಲ್ಲಿಯೂ ಪತ್ತೆಯಾಗಿಲ್ಲ. ಎಲ್ಲ ಕಡೆ ವಿಚಾರಿಸಿದ ಬಳಿಕ ಶಂಕ್ರೆಮ್ಮ ಅವರ ಮಗ ರಮೇಶ ಹಾಲ್ಲಳ್ಳೆ ದೂರು ದಾಖಲಿಸಿದ್ದಾರೆ.
ಚಹರೆ: ಶಂಕ್ರೆಮ್ಮ 5 ಅಡಿ 5 ಇಂಚು, ಬಿಳುಪು ಮೈಬಣ್ಣ, ಉದ್ದನೆಯ ಮುಖ, ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಕೆಂಪು ಮತ್ತು ಕಪ್ಪು ಮಿಶ್ರಿತ ಬಣದ್ಣ ಸೀರೆ, ಕಪ್ಪು ಬಣ್ಣದ ಕುಪ್ಪಸ ಧರಿಸಿರುತ್ತಾರೆೆ. ಕನ್ನಡ ಭಾಷೆ ಮಾತನಾಡುತ್ತಾರೆ.
ಇದನ್ನೂ ಓದಿ : ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ರೈತರ ಆತ್ಮಹತ್ಯೆ ಇಳಿಮುಖ
ಮಹಿಳೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾದಲ್ಲಿ ಪಿಎಸ್‌ಐ ಹಳ್ಳಿಖೇಡ(ಬಿ) ಅಥವಾ ಶಂಕ್ರೆಮ್ಮ ಅವರ ಮಗ ರಮೇಶ 9845446206ಗೆ ಸಂಪರ್ಕಿಸಲು ಕೋರಿದ್ದಾರೆ.