ಸಹಕಾರ ಸಂಘಗಳ ಏಳಿಗೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯ. ಸಾಲ ತೆಗೆದುಕೊಳ್ಳುವುದು ಅಷ್ಟೇ ಅಲ್ಲ, ಠೇವಣಿ ಇಡುವ ಮೂಲಕ ರೈತರು, ಗ್ರಾಹಕರು ಕಾಲ ಕಾಲಕ್ಕೆ ಸಂಘದ ಸಿಬ್ಬಂದಿ ಜೊತೆಗೆ ಉತ್ತಮ ಬಾಂಧವ್ಯದಿಂದ ವ್ಯವಹಾರ ಮಾಡಿದಾಗ ಮಾತ್ರ ಆರ್ಥಿಕವಾಗಿ ಬ್ಯಾಂಕಿಗೆ ಜೀವ ಬರುತ್ತದೆ ಎಂದು ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ ಹೇಳಿದರು.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಧೂಳಖೇಡ ಗ್ರಾಮದ ಹಲಸಂಗಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಾಕಾರಿ ಸಂಘದ ಆವರಣದಲ್ಲಿ ನಡೆದ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ ಪ್ಯಾಟಿ ಮಾತನಾಡಿ, “ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಾಕಾರಿ ಸಂಘವು 2271 ಸದಸ್ಯತ್ವದ ಸುಮಾರು ರೂ. 84,92,030 ಶೇರು ಬಂಡವಾಳ ಹೊಂದಿದೆ. ನಿಧಿಗಳಿಂದ ರೂ. 6704800, ದುಡಿಯುವ ಬಂಡವಾಳ ರೂ.85998930, ಠೇವಣಿ ರೂ. 102935542, ಸದಸ್ಯರ ಒಟ್ಟು ಸಾಲ ರೂ. 66640792 ಮತ್ತು ವಾರ್ಷಿಕ ನಿವ್ವಳ ಲಾಭ ರೂ. 671737 ಗಳಿವೆ” ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಇಂಡಿ | ಮುಂದುವರೆದ ಮಹಾಮಳೆ; ನದಿಪಾತ್ರದ ಜನರಲ್ಲಿ ಪ್ರವಾಹದ ಆತಂಕ
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಅಪ್ಪಾಶ್ಯಾ ಜಕ್ಕೋಂಡಿ, ಶ್ರೀಕಾಂತ ಗುಬ್ಯಾಡ, ಸಂತೋಷ ವಾಲಿಕಾರ, ಚಂದ್ರಕಾಂತ ಕುಂಬಾರ, ಬಸವರಾಜ ಬಂದಾಳೆ, ಭೀಮಾಶಂಕರ ಹೂಗಾರ, ಪುಷ್ಪಾ ಗಲಗಲಿ, ಶ್ರೀಮತಿ ಸುರೇಖಾ ಕಲಬುರ್ಗಿ, ಕಾಶಿನಾಥ ಕಟ್ಟಿಮನಿ, ಚನ್ನಬಸಯ್ಯ ಹೀರೆಮಠ, ದೇವಣ್ಣ ಗಿಡದಮನಿ, ಕ್ಷೇತ್ರ ಸಿಬ್ಬಂದಿ ಸಾಯಬಣ್ಣ ರೊಟ್ಟಿ, ಚಿಕ್ಕಪ್ಪ ಕಂಬಾರ, ರವೀಂದ್ರ ಕಂಬಾರ, ಬಂಕಟಸಿಂಗ್ ರಜಪೂತ, ಮಂಜುನಾಥ ಶಿರಹಟ್ಟಿ ,ಸೇರಿದಂತೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಾಕಾರಿ ಸಂಘದ ಶೇರುದಾರರು, ಗ್ರಾಹಕರು ಇದ್ದರು.