ತುಮಕೂರು ಜಿಲ್ಲೆಯ ಶಿರಾ ತಾಲೂಕಿಗೆ ಹೇಮಾವತಿ ನೀರು ಹೋಗುತ್ತಿದೆ. ಆದರೆ ಮಧುಗಿರಿ, ಕೊರಟಗೆರೆ ತಾಲೂಕುಗಳಿಗೆ ಹೇಮಾವತಿ ನೀರು ಹರಿಯುತ್ತಿಲ್ಲ. ಈ ಎರಡು ತಾಲೂಕಿಗೆ ಹೇಮಾವತಿ ನೀರು ಕೊಡಲು ಅವಕಾಶವಿದ್ದರು ರಾಜ್ಯದ ಗೃಹ ಮಂತ್ರಿ ಪರಮೇಶ್ವರ್ ಅವರು ಹೇಮಾವತಿ ನೀರು ಕೊಡಿಸದೆ ಪಲಾಯನ ಮಾಡುತ್ತಿದ್ದಾರೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ. ಗೋವಿಂದರಾಜು ಆರೋಪಿಸಿದರು
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ರೈತ ಸಂಘ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ನೀರನ್ನು ಡಿಸಿಎಂ ಡಿ. ಕೆ ಶಿವಕುಮಾರ್ ಅವರು ಕುಣಿಗಲ್ ಹೆಸರೇಳಿಕೊಂಡು ಮಾಗಡಿ, ರಾಮನಗರ, ಬೆಂಗಳೂರಿಗೆ ನಮ್ಮ ಪಾಲಿನ ನೀರನ್ನು ಕದಿಯುತ್ತಿದ್ದಾರೆ. ಈಗಿದ್ದರು ಕಾಂಗ್ರೆಸ್ ಶಾಸಕರು ಮೌನ ವಹಿಸಿದ್ದಾರೆ. ಇವರಿಗೆ ಮತದಾರರ ಭಯ ಇಲ್ಲದಂತ್ತಾಗಿದೆ. ಮತದಾರರ ಭಯವಿಲ್ಲದೆ ಈ ರೀತಿ ಮಾಡುತ್ತಿದ್ದಾರೆ ಎಂದರು

ಐಐಟಿ ಮೂಲಕ ಈ ಯೋಜನೆ ಬಗ್ಗೆ ಪರಿಶೀಲಿಸಲು ಶಾಸಕರ ಸಭೆಯಲ್ಲಿ ತಿಳಿಸಿದ ಉಪ ಮುಖ್ಯಮಂತ್ರಿಗಳು ಸ್ಥಳಕ್ಕೆ ಬಂದು ಕೆಲಸ ಈಗಾಗಲೇ 400 ಕೋಟಿ ಬಿಡುಗಡೆಯಾಗಿದೆ. ಕೆಲಸ ಮಾಡುತ್ತೇವೆ ಎಂದು ಉದ್ಧಟತನ ಮಾತುಗಳಾಡಿರುವುದು ಸರಿಯಲ್ಲ. ಜೊತೆಯಲ್ಲಿ ಬಂದು ಮೌನ ಸಮ್ಮತಿ ನೀಡಿದ ಶಾಸಕರಿಬ್ಬರ ನಡೆಗೆ ರೈತರಲ್ಲಿ ಆಕ್ರೋಶ ಮೂಡಿದೆ. ಮತ್ತೂಮ್ಮೆ ದೊಡ್ಡ ಹೋರಾಟಕ್ಕೆ ಸಜ್ಜಾಗಿದ್ದಾರೆ ಎಂದು ಎಚ್ಚರಿಸಿದರು.
ಇತ್ತೀಚೆಗೆ ಗುಬ್ಬಿ ತಾಲೂಕಿನ ಸುಂಕಾಪುರದ ಬಳಿ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಪರಿಶೀಲನೆ ನಡೆಸಿದ್ದ ಡಿಸಿಎಂ ಡಿ. ಕೆ ಶಿವಕುಮಾರ್ ಅವರು ಕಾಮಗಾರಿ ನಿಲ್ಲಸುವುದಿಲ್ಲ, ಈಗಾಗಲೇ ಪೖಪ್ ಖರೀದಿಗೆ 400 ಕೋಟಿ ಹಣ ಮಂಜೂರು ಮಾಡಿದ್ದೇವೆ. ಸಹೋದರಂತೆ ನೀರು ಹಂಚಿಕೆ ಮಾಡಿಕೊಳ್ಳೋಣ ಎಂದು ಹೇಳಿದ್ದರು, ಈ ಹೇಳಿಕೆಗೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು, ಹಾಗೇ ಗುಬ್ಬಿಯಲ್ಲಿ ಸಭೆಯನ್ನು ನಡೆಸಿದ್ದರು.