ಆಳಂದ ಪಟ್ಟಣದಲ್ಲಿ ಕಲ್ಯಾಣ ಕರ್ನಾಟಕ ಸರ್ಕಾರಿ ನೌಕರರ ಸಂಘದ ಆಳಂದ ತಾಲೂಕು ಘಟಕ ಉದ್ಘಾಟನೆ ಸಮಾರಂಭ ನಡೆಯಿತು.
ಆಳಂದ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಜಿಲ್ಲಾಧ್ಯಕ್ಷ ಮಹೇಶಕುಮಾರ್ ಹೆಬ್ಬಾಳೆ ಅವರು ನೇಮಕಾತಿ ಆದೇಶ ಪ್ರತಿ ನೀಡಿ ಗೌರವಿಸಿದರು.
ವಿಜಯ್ ಕುಮಾರ್ ಜಿಡಗೆ( ತಾಲೂಕ ಅಧ್ಯಕ್ಷರು), ಶ್ರೀನಾಥ್ ನಾಗೂರ ( ತಾಲೂಕು ಪ್ರಧಾನ ಕಾರ್ಯದರ್ಶಿ), ಸುಭಾಷ್.ಎಸ್. ಪಾಟೀಲ್ ಗ್ರಾಮ ಆಡಳಿತ ಅಧಿಕಾರಿ (ತಾಲೂಕ ಉಪಾಧ್ಯಕ್ಷ), ರಮೇಶ್ ಸಿ ಕುಲಕರ್ಣಿ ಉಪನ್ಯಾಸಕರು (ಖಜಾಂಚಿ), ಬಸಣ್ಣ ಸಿಗರಕಂಟಿ ( ಕಾನೂನು ಸಲಹೆಗಾರ), ಜಗನ್ನಾಥ ಕುಂಬಾರ ಪಶು ವೈದ್ಯಕೀಯ ಪರಿವೀಕ್ಷಕರು ( ತಾಲೂಕು ಸಂಘಟನಾ ಕಾರ್ಯದರ್ಶಿ), ರಾಜೇಶ ಶಾಕಾ ದ್ವಿ.ದ.ಸ ಖಜಾನೆ (ತಾಲೂಕು ಉಪಾಧ್ಯಕ್ಷ), ಲಕ್ಷ್ಮಣ ಕಾಂಬಳೆ ಭೂಮಾಪಕ ಇಲಾಖೆ(ಸಹ ಕಾರ್ಯದರ್ಶಿ), ಧರ್ಮರಾಜ ದಂಗಾಪುರ ಸುಶ್ರುತ ಅಧಿಕಾರಿ(ತಾಲೂಕ ಸಹ ಕಾರ್ಯದರ್ಶಿ) ಯಾಶ್ಮಿನ್ ತಬಸುಮ (ತಾಲೂಕ ಉಪಾಧ್ಯಕ್ಷ), ವಿದ್ಯಾಸಾಗರ ಮೈನಾಳ (ತಾಲೂಕು ಮಾಧ್ಯಮ ಪ್ರತಿನಿಧಿ) ಅವರು ನೇಮಕಗೊಂಡಿದ್ದಾರೆ.
ಸಂಘದ ಕಲಬುರಗಿ ಜಿಲ್ಲಾಧ್ಯಕ್ಷ ಮಹೇಶಕುಮಾರ್ ಹೆಬ್ಬಾಳೆ ಮಾತನಾಡಿ, ʼಕಲ್ಯಾಣ ಕರ್ನಾಟಕ ಭಾಗದ 371(ಜೆ) ವ್ಯಾಪ್ತಿಯಲ್ಲಿರುವ ಎಲ್ಲ ಸರ್ಕಾರಿ ನೌಕರರು ಎದುರಿಸುವ ಸಮಸ್ಯೆಗಳು, ಈ ಭಾಗದಲ್ಲಿ ಆಗುತ್ತಿರುವ ಶೈಕ್ಷಣಿಕ ಹಿನ್ನಡೆಗೆ ಸಂಘಟನಾತ್ಮಕ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸೋಣʼ ಎಂದರು.
ʼಭಾರತೀಯ ಸಂವಿಧಾನದ ಆಶಯದಂತೆ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಸಮತೋಲನ ಕಾಪಾಡಿಕೊಳ್ಳಲು 371(ಜೆ) ಸಂವಿಧಾನಾತ್ಮಕ ವಿಶೇಷ ಸ್ಥಾನಮಾನ ನೀಡಲಾಗಿದ್ದು, ಅದನ್ನು ಸಂಪೂರ್ಣವಾಗಿ ಅನುಷ್ಠಾನವಾಗುವಲ್ಲಿ, ಸಂವಿಧಾನದ ಆಶಯ ಈಡೇರಿಸುವಲ್ಲಿ ಸರ್ಕಾರಿ ನೌಕರರಾದ ನಾವು ಸಂಘಟನಾತ್ಮಕವಾಗಿ ಕಾರ್ಯೋನ್ಮುಖರಾಗಬೇಕುʼ ಎಂದು ಕರೆ ನೀಡಿದರು.
ಇದನ್ನೂ ಓದಿ : ಬೀದರ್ | ಒಟಿಪಿ ಹೇಳದಿದ್ದರೂ ಖಾತೆಯಿಂದ ₹8 ಲಕ್ಷ ಹಣ ಕಳೆದುಕೊಂಡ ಕಾರ್ಮಿಕ!
ಸಭೆಯಲ್ಲಿ ಕಲಬುರಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಗುತ್ತೇದಾರ್, ಸದಸ್ಯ ಭೀಮಣ್ಣ ಹಂದ್ರಾಳ ಮತ್ತಿತರರು ಉಪಸ್ಥಿತರಿದ್ದರು.