ಉದ್ಯಮಿದಾರರು ಹಾಗೂ ಮಹಾಗಾಂವ ಯುವ ಮುಖಂಡರಾದ ಮಲ್ಲಿಕಾರ್ಜುನ ಮರತೂರಕರ್ ಅವರ ಹುಟ್ಟುಹಬ್ಬವನ್ನು ಆಡಂಬರದಿಂದಲ್ಲ, ಸಮಾಜಮುಖಿ ಕಾರ್ಯದ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಗರದ ಸಿದ್ಧರೂಢ ಕಾಲೋನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 130ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೋಟ್ ಬುಕ್ ಹಾಗೂ ಪೆನ್ನುಗಳನ್ನು ವಿತರಿಸಲಾಯಿತು. ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಮರತೂರಕರ್ ಅಭಿಮಾನಿಗಳ ಸಂಘದ ಕಾರ್ಯಕರ್ತ ಆನಂದ ತೆಗನೂರ, “ಮಲ್ಲಿಕಾರ್ಜುನ ಮರತೂರಕರ್ ಅವರು ಸದಾ ಸರಳತೆ ಮತ್ತು ಸೇವಾ ಮನೋಭಾವಕ್ಕೆ ಆದ್ಯತೆ ನೀಡುವ ವ್ಯಕ್ತಿ. ಹೀಗಾಗಿ ಅವರ ಜನ್ಮದಿನವನ್ನು ಕೇಕ್ ಕತ್ತರಿಸುವುದು, ಹಾರ-ತುರಾಯಿ ಹಾಕುವಂತಹ ಆಡಂಬರದ ಆಚರಣೆಯ ಬದಲು ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸುವ ಮೂಲಕ ಆಚರಿಸಿದ್ದೇವೆ. ಸಮಾಜಕ್ಕೆ ಉಪಯುಕ್ತವಾಗುವ ಕಾರ್ಯವೇ ನಿಜವಾದ ಜನ್ಮದಿನದ ಆಚರಣೆ. ಅವರ ಆದರ್ಶದ ಹಾದಿಯಲ್ಲೇ ನಾವು ಮುಂದುವರೆಯುತ್ತೇವೆ,” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಯಾದಗಿರಿ | ನೀಟ್ ಅಕ್ರಮ, ವಿದ್ಯಾರ್ಥಿಗಳ ಮೇಲಿನ ಲಾಠಿ ಚಾರ್ಜ್ ಖಂಡಿಸಿ ಶಹಾಪುರದಲ್ಲಿ ಬೃಹತ್ ಪ್ರತಿಭಟನೆ
ಕಾರ್ಯಕ್ರಮದಲ್ಲಿ ಶಾಲೆಯ ಪ್ರಭಾರ ಮುಖ್ಯಗುರು ಮೌನೇಶ ನಿಂಬಾಳ, ಆಸೀಪ ಮಿಯ್ಯಾ, ಶರಣು ಮೇತ್ರೆ, ಶ್ರೀಕಾಂತ ತೊಂಡಿ, ಸಂತೋಷ ಗುತ್ತೇದಾರ, ಜಗನ್ನಾಥ ಪೂಜಾರಿ, ಗಫಾರ್ ಶಾ, ಶಂಕರ ಮರಗುತ್ತಿ, ನಾಗರಾಜ ಜಮಾದಾರ, ಶಾಲೆಯ ಸಹ ಶಿಕ್ಷಕಿಯರು ಹಾಗೂ ಅಭಿಮಾನಿಗಳ ಸಂಘದ ಸದಸ್ಯರು ಉಪಸ್ಥಿತರಿದ್ದರು.





