ಉಡುಪಿ ಜಿಲ್ಲೆಯ ಎರ್ಲಪಾಡಿ ಗ್ರಾಮದ ಜಾರ್ಕಳ ಎಂಬಲ್ಲಿ ಅಕ್ರಮ ಗಣಿಗಾರಿಕೆಗೆ ದಾಳಿ ನಡೆಸಿದ ಕಾರ್ಕಳ ನಗರ ಪೊಲೀಸರು ಹಲವು ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕಲ್ಲುಕೋರೆ ಪಾದೆಯಲ್ಲಿ ಅಕ್ರಮ ಗಣಿಕಾರಿಕೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿಯಂತೆ ಬಗ್ಗೆ ಪೊಲೀಸರು ದಾಳಿ ನಡೆಸಿದ್ದು, ರಮೇಶ್ ಶೆಟ್ಟಿ ಸೂಚನೆಯಂತೆ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಿ ಕಳವು ಮಾಡಿ ಸಂಘಟಿತ ಅಪರಾಧವೆಸಗಿರುವುದು ಕಂಡುಬಂದಿದೆ.
ಅದರಂತೆ ರಮೇಶ್ ಶೆಟ್ಟಿ, ರಾಜೇಶ, ರಾಜ, ದುರ್ಗೇಶ, ಗೋಪಾ ನಾಯರ್, ಶಿವರಾಜ್, ಸುಬ್ರಹ್ಮಣ್ಯ, ರವಿ, ಚೆಲುವ, ರವಿ, ಚಿನ್ನು, ರಾಜ ಎಂಬವರ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.