ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಬ್ಯಾರಿ ಭಾಷೆ, ಸಂಸ್ಕೃತಿ, ಸಾಹಿತ್ಯದ ಬೆಳವಣಿಗೆಗೆ ಪ್ರತೀ 2 ತಿಂಗಳಿಗೊಮ್ಮೆ ಹೊರತರುವ ‘ಬೆಲ್ಕಿರಿ’ ದ್ವೈಮಾಸಿಕ ಸಂಚಿಕೆಯಲ್ಲಿ ಪ್ರಕಟಿಸಲು ಬ್ಯಾರಿ ಇತಿಹಾಸ/ಸಂಶೋಧನಾ ಲೇಖನಗಳು, ಪುಸ್ತಕ ಪರಿಚಯ, ಮರೆಯಬಾರದ ಬ್ಯಾರಿ ಮಹನೀಯರು, ಕಥೆ/ಕವನ/ಚುಟುಕುಗಳನ್ನು ಆಹ್ವಾನಿಸಲಾಗಿದೆ.
ಲೇಖನಗಳನ್ನು ಟೈಪ್ ಮಾಡಿ ಕಳುಹಿಸುವುದಾದರೆ ನುಡಿ/ಬರಹ ಫಾಂಟ್ನಲ್ಲಿ ಕಳುಹಿಸಬೇಕು. ಹೆಸರು ಮತ್ತು ವಿಳಾಸವಿಲ್ಲದ ಲೇಖನಗಳನ್ನು ಪ್ರಕಟಿಸಲಾಗುವುದಿಲ್ಲ. ಪ್ರಕಟಿತ ಲೇಖನಗಳ ಲೇಖಕರಿಗೆ ಗೌರವ ಸಂಭಾವನೆ ಪಾವತಿಸಲಾಗುತ್ತದೆ.
ಆಸಕ್ತರು ತಮ್ಮ ಬರಹಗಳನ್ನು ಸಂಪೂರ್ಣ ವಿಳಾಸ ಮತ್ತು ದೂರವಾಣಿ ಸಂಖ್ಯೆಯೊಂದಿಗೆ ತಾಲೂಕು ಪಂಚಾಯತ್ ಹಳೇ ಕಟ್ಟಡ, ಮಿನಿ ವಿಧಾನಸೌಧದ ಬಳಿ, ಸಾಮರ್ಥ್ಯ ಸೌಧ, 2ನೇ ಮಹಡಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಥವಾ [email protected] ಅಥವಾ ಬೆಲ್ಕಿರಿ ದ್ವೈಮಾಸಿಕ ಸಂಪಾದಕಿ ಹಫ್ಸಾ ಬಾನು ಬೆಂಗಳೂರು (‘ವಾಟ್ಸಪ್ ಸಂಖ್ಯೆ 9900762555ʼ ಅಥವಾ ಅಕಾಡೆಮಿಯ ವಾಟ್ಸಪ್ ಸಂಖ್ಯೆ 7483946578 ಸಂಖ್ಯೆಗೆ ಕಳುಹಿಸಿಕೊಡುವಂತೆ ಅಕಾಡೆಮಿಯ ರಿಜಿಸ್ಟ್ರಾರ್ ರಾಜೇಶ್.ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





