ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ಉಡುಪಿ ಘಟಕದ ಕಚೇರಿ ಉದ್ಘಾಟನೆ ಮತ್ತು ಓಣಂ ಸಂಭ್ರಮಾಚರಣೆ, ಕುಂಜಿಬೆಟ್ಟು ಐ ವೈ ಸಿ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಎಂಐಟಿ ಪ್ರಾಧ್ಯಪಕರಾದ ಡಾ .ಅಮೃತ್ ರಾಜ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಓಣಂ ಸಂಭ್ರಮ ನಡೆಸುತ್ತಿರುವ ಕೆಎನ್ ಎಸ್ ಎಸ್ ಕಾರ್ಯಕ್ರಮಗಳ ಬಗ್ಗೆ ಶ್ಲಾಘಿಸಿದರು.
ಓಣಂ ಹಬ್ಬದ ಪ್ರಮುಖ್ಯತೆಗಳನ್ನು ನಮಗೆ ನಮ್ಮ ಹಿರಿಯರುಗಳು ಹೇಳಿಕೊಡುತ್ತಿದ್ದರು,ಇದೀಗ ಬದಲಾವಣೆಯ ಪರ್ವವಾಗಿದೆ.
ಈ ಹಿಂದೆ ಅಚರಿಸುತ್ತಿದ್ದ ಅಚಾರಗಳು ಅನುಷ್ಟಾನಗಳನ್ನು ಮುಂದಿನ ಪಿಳೀಗೆಯ ಮಕ್ಕಳಿಗೆ ತಿಳಿಸಬೇಕಾಗಿದೆ. ನಮ್ಮ ಸಂಪ್ರದಾಯಗಳು ಬಿಟ್ಟು ಹೋಗದಂತೆ ನೋಡಿಕೊಳ್ಳುವ ಜಾವಬ್ದಾರಿ ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ಇದೆ ಎಂದರು.
ಕಾರ್ಯಕ್ರಮದಲ್ಲಿ ಕೆ ಎನ್ ಎಸ್ ರಾಜ್ಯಾಧ್ಯಕ್ಷರಾದ ಮನೋಹರ್ ಕುರುಪ್, ಕೆ ಎನ್ ಎಸ್ ರಾಜ್ಯ ಕಾರ್ಯದರ್ಶಿ ಶ್ರಿ ಟಿ ವಿ ನಾರಾಯಣ, ಮಂಗಳೂರು ಕೆ ಎನ್ ಎಸ್ ಅಧ್ಯಕ್ಷರಾದ ಶ್ರೀ ಮುರುಳಿ, ಶ್ರೀ ಎನ್ ಡಿ ಸತೀಶ್, ಶ್ರೀ ರಾಮಚಂದ್ರ ಪಲೇರಿ, ಉಡುಪಿ ಅಧ್ಯಕ್ಷರಾದ ಪಿ ಎ ಮೋಹನ್ ದಾಸ್, ಕಾರ್ಯದರ್ಶಿ ಸುಲೊಚನಾ ಜಯರಾಜ್, ಖಾಜಾಂಜಿ ಸಂತೋಷ್ ಕುಮಾರ್ ಎಂ ಉಪಸ್ಥಿತರಿದ್ದರು, ಅಪರ್ಣ, ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು.