ಕೊಡಗು ಜಿಲ್ಲೆ, ಮಡಿಕೇರಿ ನಗರ ಬಸ್ ಡಿಪೋದಿಂದ ಕೆಲವೇ ಅಂತರದಲ್ಲಿರುವ, ಅಂದರೆ ಬ್ಲಾಕ್ ನಂಬರ್ 16, ಸರ್ವೆ ನಂಬರ್ 53/6 ರಲ್ಲಿ ಅನಧಿಕೃತವಾಗಿ ಯಾವುದೇ ಪರವಾನಿಗೆ ಪಡೆಯದಿರುವ ಅಂಗಡಿಗಳನ್ನು ತೆರವುಗೊಳಿಸುವಂತೆ ಕೊಡಗು ಅಭಿವೃದ್ಧಿ ಸಮಿತಿ ಅಪರ ಜಿಲ್ಲಾಧಿಕಾರಿ ಆರ್. ಐಶ್ವರ್ಯ ಅವರಿಗೆ ಮನವಿ ಸಲ್ಲಿಸಿದೆ.
ಸದರಿ ಜಾಗದಲ್ಲಿ ಅಂಗಡಿಗಳನ್ನು ತೆರವುಗೊಳಿಸಲು ಮಾಹಿತಿ ನೀಡಿದ್ದರೂ ಕೂಡ ಸುಮಾರು 10ಕ್ಕೂ ಹೆಚ್ಚು ಅಂಗಡಿಗಳನ್ನು ನಿರ್ಮಾಣ ಮಾಡಿಕೊಂಡು, ರಸ್ತೆಯನ್ನು ಒತ್ತುವರಿ ಮಾಡಿಕೊಂಡು, ಪರವಾನಗಿ ತೆಗೆದುಕೊಳ್ಳದೆ ವ್ಯಾಪಾರವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಗರಸಭೆ ಸದಸ್ಯರಿಂದ ಹಿಡಿದು, ಸಮಾಜದಲ್ಲಿ ಗಣ್ಯ ವ್ಯಕ್ತಿಗಳು ಎನಿಸಿಕೊಂಡಿರುವವರ ಬೇನಾಮಿ ಹೆಸರಿನಲ್ಲಿ ಇರುವ ಆಸ್ತಿಯನ್ನು, ಈ ರೀತಿಯಾಗಿ ನಗರಸಭೆಗೆ ಮೋಸ ಮಾಡಿ, ನಗರಸಭೆಯಿಂದ ಪರವಾನಗಿ ಪಡೆಯದೆ, ವ್ಯವಹಾರಗಳನ್ನು ಮಾಡುತ್ತಿರುವುದು ಸರಿಯೇ ಎಂದು ಪ್ರಶ್ನೆ ಮಾಡಿದ್ದಾರೆ.
ಜನ ಸಾಮಾನ್ಯರಿಗೆ ಒಂದು ನ್ಯಾಯ, ಬಡವನಿಗೆ ಒಂದು ನ್ಯಾಯ ಆಗಿದೆ. ಈ ನಗರಸಭೆ ಆಡಳಿತದಲ್ಲಿ ಬೇಲಿಯೇ ಎದ್ದು ಹೊಲವನ್ನು ಮೇಯುವಂತಿದೆ. ಆದುದರಿಂದ, ಕೊಡಗು ಅಭಿವೃದ್ದಿ ಸಮಿತಿಯಿಂದ ಮನವಿ ಸಲ್ಲಿಸುತ್ತಿದ್ದು ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಇಂತಹ ಅನಧಿಕೃತ ಶೆಡ್‌ಗಳಿಗೆ ಪರವಾನಗಿ ಇದಿಯಾ?, ಕಾನೂನಿನ ಪ್ರಕಾರ ಈ ಶೆಡ್‌ಗಳನ್ನು ನಿರ್ಮಾಣ ಮಾಡಿದ್ದಾರಾ? ಪರಿಶೀಲನೆ ಮಾಡಿ, ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಕೊಳ್ಳೆಗಾಲ | ಆನ್ಲೈನ್ ಸಾಲದ ಆಪ್ ನಿಂದ ವಂಚನೆ; ಯುವಕನ ಅಸಹಜ ಸಾವು
ಮನವಿ ಸಲ್ಲಿಸುವಾಗ ಕಾವೇರಪ್ಪ,ಲೀಲಾ ಶೇಷಮ್ಮ, ಪ್ರಮೋದ್, ಸಂದೀಪ್ ಹಾಗೂ ಪ್ರಸನ್ನ ಭಟ್ ಇದ್ದರು.