ಮುಂದಿನ ದಿನಗಳಲ್ಲಿ ಅಲ್ ಇಂಡಿಯಾ ಮಜಲಿಸ್ -ಎ-ಇತ್ತಹಾದುಲ್ ಮುಸ್ಲಿಮೀನ್ ಪಕ್ಷ ಸದೃಢವಾಗಿ ಸಂಘಟನೆ ಮಾಡುವುದರ ಜತೆಗೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇವೆ. ಹೆಚ್ಚಿನ ಜನಸೇವೆ ಮಾಡಲು ಅಧಿಕಾರಕ್ಕಾಗಿ ಮುಂದೆ ಬರುವ ಎಲ್ಲ ಚುನಾವಣೆಗಳಲ್ಲಿ ಸ್ಪರ್ಧೆ ಮಾಡಲಾಗುವುದು ಎಂದು ಪಕ್ಷದ ರಾಜ್ಯಾಧ್ಯಕ್ಷ ಲತೀಫ್ ಖಾನ್ ಅಮೀರ್ ಪಠಾಣ್ ತಿಳಿಸಿದರು.
ಕೋಲಾರ ನಗರದಲ್ಲಿ ಪಕ್ಷದ ಕಚೇರಿ ಉದ್ಘಾಟನೆ ನಂತರ ಖಾಸಗಿ ಮದುವೆ ಮಂಟಪದಲ್ಲಿ ಪಕ್ಷದ ಜಿಲ್ಲಾ ಸಮಿತಿ ಆಯೋಜಿಸಿದ್ದ ಕಾರ್ಯಕರ್ತರ ಸಭೆ ಹಾಗೂ ನೂತನ ಕಾರ್ಯಕರ್ತರು ಸೇರ್ಪಡೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
“ಪರಿಪೂರ್ಣ ರಾಜಕಾರಣಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಬ್ಯಾರಿಸ್ಟರ್ ಅಸುದುದ್ದೀನ್ ಓವೈಸಿ ಅವರ ನೇತೃತ್ವದಲ್ಲಿ ಪಕ್ಷವನ್ನು ಇಡೀ ರಾಜ್ಯಾದ್ಯಂತ ಸಂಘಟಿಸಲಾಗುವುದು” ಎಂದು ಹೇಳಿದರು.
“ನಮ್ಮ ಪಕ್ಷದ ಅಜೆಂಡಾ ದೇಶವನ್ನು ಸಾಲ ಮುಕ್ತಗೊಳಿಸುವುದಲ್ಲದೆ, ಪ್ರಮುಖವಾಗಿ ದಾರಿ ತಪ್ಪುತ್ತಿರುವ ಯುವಕರಿಗೆ ಉದ್ಯೋಗ ನೀಡಿ ಮಾದಕ ಮುಕ್ತ ದೇಶವನ್ನಾಗಿಸುವುದು ಹಾಗೂ ಸ್ವಚ್ಛ ಭ್ರಷ್ಟಾಚಾರರಹಿತ ಆಡಳಿತ ನೀಡುವುದಾಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಡಿ.ದೇವರಾಜ ಅರಸು ಜನ್ಮದಿನಾಚರಣೆ
ಕಾರ್ಯಕ್ರಮದಲ್ಲಿ ರಾಜ್ಯದ ಇತರೆ ಜಿಲ್ಲೆಗಳಿಂದ ಆಗಮಿಸಿದ್ದ ಪಕ್ಷದ ಜಿಲ್ಲಾ ಅಧ್ಯಕ್ಷರು ಹಾಗೂ ಹೈದರಾಬಾದ್‌ನಿಂದ ಆಗಮಿಸಿದ್ದ ಮುಖಂಡರು, ಮತ್ತು ಕೋಲಾರ ಜಿಲ್ಲಾ ಅಧ್ಯಕ್ಷ ಸಯೈದ್ ನಜೀಬ್ ಪಾಷ, ಜಿಲ್ಲಾ ಜೆನರಲ್ ಸೆಕ್ರೆಟರಿ ಆಗಿ ಮೊಹಮ್ಮದ್ ಎನ್ ಅಲಿ ಸಾಹಿಕ್, ಜಾಯಿಂಟ್ ಸೆಕ್ರೆಟರಿಗಳಾಗಿ ನಾಗರಾಜ್, ಸಿಭಾಗತ್ ಉಲ್ಲಾ, ತಬ್ರೇಜ್ ಖಾನ್,
ಸಿ ವಿ ವರದರಾಜು, ಖಜಾಂಚಿಯಾಗಿ ಮೊಹಮ್ಮದ್ ಮಿನಹಜ್ ಆಲಿ, ಸದಸ್ಯರುಗಳಾಗಿ ಜಮೀರ್ ಪಾಷ ಎನ್, ಸೈಯದ್ ಅದಿಲ್, ಸೈಯದ್ ಅಯೂಬ್ ಪಾಷ, ಶೈಕ್ ಸರ್ದಾರ್ ಹಾಗೂ ನೂರಾರು ಕಾರ್ಯಕರ್ತರು ಇದ್ದರು.