ಯುವಕರನ್ನು ಹಂತ ಹಂತವಾಗಿ ಸಂಘಟಿಸುವ ನಿಟ್ಟಿನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೋಲಾರ ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ತಾಲೂಕಿನ ವೇಮಗಲ್ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ತಾಲೂಕು ಮಟ್ಟದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಸಂಘಟನಾ ಸಂಚಾಲಕ ಸುಧಾಕರ್, “ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ತೋರಿರುವ ಮಾರ್ಗದರ್ಶನದಲ್ಲಿ ನಡೆಯುವ ಕರ್ತವ್ಯ ಪದಾಧಿಕಾರಿಗಳು ಮಾಡಬೇಕು. ದಲಿತ, ಹಿಂದುಳಿದ, ಅಲ್ಪಸಂಖ್ಯಾರ ಆಶಾದಾಯಕ ಸಂಘಟನೆಯಾಗಿ ಸಂಘಟನೆ ಮುನ್ನುಗ್ಗುತ್ತಿದೆ. ಸಂಘಟನೆಗೆ ಕಾರ್ಯಕರ್ತರೇ ಜೀವಾಳ. ಮುಂಬರುವ ದಿನಗಳಲ್ಲಿ ತಾಲೂಕಿನ ಪ್ರತಿಯೊಂದು ಗ್ರಾಮಗಳಿಗೆ ಸಂಚರಿಸುವ ನಿಟ್ಟಿನಲ್ಲಿ ಸಂಘಟನೆ ಬಲಿಷ್ಠ ಪಡಿಸುವ ದಿಸೆಯಲ್ಲಿ ನಿರಂತರ ಹೋರಾಟ ನಡೆಸಬೇಕು. ಯುವಕರನ್ನು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಸಂಘಟಿಸುವ ಉದ್ದೇಶದಿಂದಲೇ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತಿದೆ” ಎಂದರು.
ಹೋಬಳಿ ಮಟ್ಟದ ಪದಾಧಿಕಾರಿಯಾಗಿ ಮನೋಜ್ ಕುಮಾರ್, ತಾಲೂಕು ಸಂಘಟನಾ ಸಂಚಾಲಕ ಮೇಡಿಹಾಳ ಹರೀಶ್, ಮಹಿಳಾ ಘಟಕದ ತಾಲೂಕು ಸಂಘಟನಾ ಸಂಚಾಲಕಿ ಶಶಿಕಲಾ, ಶ್ರೀನಿವಾಸ್, ಅಂಜಿನಪ್ಪ, ವರಲಕ್ಷ್ಮಿ, ಬೈರೇಗೌಡ, ಎಂ.ರಮೇಶ್, ಮುನಿರಾಜ, ಲಕ್ಷ್ಮಿ, ಮುನಿನಾರಾಯಣ, ನಂದೀಶ, ಆರ್.ಆರ್.ರಮೇಶ್, ಕಮಲಮ್ಮ, ಚಿಟ್ಟಿ, ಉಷಾ, ರವಿಕುಮಾರ್, ನಿಖಿಲ್ ಕುಮಾರ್, ಅವರನ್ನು ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಲಾಯಿತು.
ಇದನ್ನೂ ಓದಿ: ಕೋಲಾರ | ಕಾಂಗ್ರೆಸ್ ಹಿರಿಯ ನಾಯಕ ಮೊಹಮ್ಮದ್ ಇಕ್ಬಾಲ್ ನಿಧನ
ಸಭೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ವಾಭಿಮಾನಿ ಪ್ರೊ. ಬಿ ಕೃಷ್ಣಪ್ಪ ಬಣದ ರಾಜ್ಯ ಸಂಘಟನಾ ಸಂಚಾಲಕ ವಿ ನಾರಾಯಣಸ್ವಾಮಿ, ಮಾಲೂರು ಶೇಷಾದ್ರಿ, ಕೆಂಬೋಡಿ ರವೀಂದ್ರ ಕುಮಾರ್, ಮಹಿಳಾ ಘಟಕದ ಜಿಲ್ಲಾ ಸಂಘಟನಾ ಸಂಚಾಲಕಿ ಮಂಜುಳ, ತಾಲೂಕು ಸಂಚಾಲಕ ಶೆಟ್ಟಿ ಮಾದಮಂಗಳ ರಾಜಣ್ಣ, ತಾಲೂಕು ಸಂಘಟನಾ ಸಂಚಾಲಕ ಸಿ ಎಚ್ ಚಂದ್ರಶೇಖರ್ ಮುನಿರಾಜು ಉಪಸ್ಥಿತರಿದ್ದರು.