ಸುಮಾರು 1.44 ಕೋಟಿ ರೂ., ಹೈ ಮಾಸ್ಟ್ ದ್ವೀಪ ಕಾಮಗಾರಿಗಳಿಗೆ ಚಾಲನೆ..!

Date:

Advertisements

ಬೇತಮಂಗಲ: ಕೆಜಿಎಫ್ ವಿಧಾನಸಭಾ ಕ್ಷೇತ್ರದ ಪ್ರತಿ ಗ್ರಾಮ ಹಾಗೂ ವಾರ್ಡ್ ನಲ್ಲಿ ವಿದ್ಯುತ್ ದ್ವೀಪ, ಶುದ್ಧ ಕುಡಿಯುವ ನೀರು, ರಸ್ತೆ, ಚರಂಡಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಶಾಸಕಿ ಎಂ.ರೂಪಕಲಾ ಹೇಳಿದರು.

ಪಟ್ಟಣದ ಬಳಿಯ ಶ್ರೀನಿವಾಸಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೀಲವಾರ, ಶ್ರೀನಿವಾಸಂದ್ರ, ಬೆನ್ನವಾರ, ಚೌಡೇಪಲ್ಲಿ, ಚಿಂಚಾಡ್ಲಹಳ್ಳಿ, ಕರಡಗೂರು ಸೇರಿದಂತೆ ಒಟ್ಟು 7 ಗ್ರಾಮಗಳಲ್ಲಿ ಹೈ ಮಾಸ್ಟ್ ವಿದ್ಯುತ್ ದ್ವೀಪಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕ್ಷೇತ್ರದಲ್ಲಿ ಅಂದಾಜು 1.40 ಕೋಟಿ ರೂ., ಗಳ ವೆಚ್ಚದಲ್ಲಿ ಎಸ್ಸಿಪಿ ಹಾಗೂ ಟಿಎಸ್ಪಿ ಯೋಜನೆಯಡಿ ಪರಿಶಿಷ್ಟ ಪಂಗಡದ ಕಾಲೋನಿಗಳಲ್ಲಿ ಹೈ ಮಾಸ್ಟ್ ದ್ವೀಪ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದರು.

ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂ ಉತ್ತಮವಾದ ರಸ್ತೆ ಅಭಿವೃದ್ಧಿ ಕೈಗೊಳ್ಳಲಾಗಿದೆ. ಅದೇ ರೀತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ಮಾಡಲಾಗಿದೆ. ಸಿಸಿ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಇದೀಗ ಹೈ ಮಾಸ್ಟ್ ದ್ವೀಪ ಕಾಮಗಾರಿಗಳನ್ನು ಹಂತ ಹಂತವಾಗಿ ಲೋಕಾರ್ಪಣೆ ಮಾಡಲಾಗುತ್ತಿದೆ ಎಂದರು. ಆಯಾ ಪ್ರದೇಶದಲ್ಲಿ ಗ್ರಾಮಸ್ಥರ ಬಹು ವರ್ಷಗಳ ಈಡೇರಿಕೆಯಂತೆ ಅವರ ಉಪಸ್ಥಿತಿಯಲ್ಲಿ ಚಾಲನೆ ನೀಡುತ್ತಿರುವುದು ಹೆಮ್ಮೆ ಇದೆ ಎಂದರು.

ಗಡಿ ಭಾಗದಲ್ಲಿ ರೈತರ ಪಿ ನಂಬರ್ ದುರಸ್ತಿ ಹಾಗೂ ಗೋಮಾಳ ಭೂಮಿಯನ್ನು ರೈತರು ಉಳುಮೆ ಮಾಡುತ್ತಿದ್ದು, ಈ ಜಮೀನು ಅರಣ್ಯ ಇಲಾಖೆಗೆ ಸೇರಿದೆ ಎಂದು ನಾಮಫಲಕ ಅಳವಡಿಸುವ ಮೂಲಕ ಭೂಮಿಯನ್ನು ಕಸಿಯುವ ಹುನ್ನಾರ ನಡೆಯುತ್ತಿದೆ ಎಂದು ರೈತರು ಶಾಸಕರಿಗೆ ಮನವಿ ಮಾಡಿದರು ತಕ್ಷಣ ಈ ಬಗ್ಗೆ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ದಾಖಲೆ ಪರಿಶೀಲನೆ ಮಾಡಲಾಗುವುದು ಎಂದು ರೈತರಿಗೆ ಶಾಸಕರು ಭರವಸೆ ನೀಡಿದರು.

ದಲಿತ ಕಾಲೋನಿಗಳಲ್ಲಿ ಉತ್ತಮ ಬೆಳಕು ಚೆಲ್ಲುವ ಪ್ರಯತ್ನಕ್ಕಾಗಿ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ ಶೀಘ್ರದಲ್ಲೇ ಕ್ಷೇತ್ರಾದ್ಯಂತ ಹೈ ಮಾಸ್ಟ್ ದ್ವೀಪ ದ್ವೀಪ ಅಳವಡಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಕಲಾ ವೆಂಕಟೇಶ್, ಉಪಾಧ್ಯಕ್ಷ ಭಾರತಿ ಷಣ್ಮುಗಂ, ಸದಸ್ಯರಾದ ವಸಂತ್ ರೆಡ್ಡಿ, ಮಾಧವಿ, ಗಜೇಂದ್ರ ರೆಡ್ಡಿ, ಮಾಜಿ ಸದಸ್ಯೆ ಭವಾನಿ ರಾಮಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಾಧಾಕೃಷ್ಣ ರೆಡ್ಡಿ, ತಾಪಂ ಮಾಜಿ ಅಧ್ಯಕ್ಷ ರಾಮಕೃಷ್ಣ ರೆಡ್ಡಿ, ಮುಖಂಡರಾದ ಯಶೋಧಮ್ಮ ಶ್ರೀನಿವಾಸ್ ರೆಡ್ಡಿ, ಬಾಬು, ಭಾಸ್ಕರ್ ರೆಡ್ಡಿ, ಪೀಲವಾರ ರಾಮಕೃಷ್ಣಪ್ಪ, ವಕೀಲ ಪದ್ಮನಾಭ ರೆಡ್ಡಿ, ಅನೇಕ ಕಾರ್ಯಕರ್ತರು ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು.

ಇದನ್ನು ಓದಿದ್ದೀರಾ..? ಪೊಲೀಸರ ಬಗ್ಗೆ ಭಯ ಬೇಡ ಬದಲಿಗೆ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟಲು ಸಹಕರಿಸಿ: ಎಸ್.ಪಿ. ಕುಶಾಲ್ ಚೌಕ್ಸೆ

ಚಿತ್ರ 01 ಬೇತಮಂಗಲ ಬಳಿಯ ಶ್ರೀನಿವಾಸಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗಕುಪ್ಪ ಗ್ರಾಮದಲ್ಲಿ ಶಾಸಕಿ ಎಂ ರೂಪಕಲಾ, ಗ್ರಾಪಂ ಅಧ್ಯಕ್ಷೆ ಗೀತಕಲಾ ವೆಂಕಟೇಶ್, ಉಪಾಧ್ಯಕ್ಷ ಭಾರತಿ ಷಣ್ಮುಗಂ ಹಾಗೂ ಅನೇಕ ಗಣ್ಯರು ಹೈ ಮಾಸ್ಟ್ ವಿದ್ಯುತ್ ದ್ವೀಪಗಳನ್ನು ಉದ್ಘಾಟಿಸಿದರು.

WhatsApp Image 2025 06 24 at 16.24.21 6207fd1d
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೋಮುಲ್ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತಿನ ಚಕಮಕಿ

ಕೋಲಾರ: ಆಡಳಿತಾಧಿಕಾರಿ ಡಾ.ಮೈತ್ರಿ ಅವಧಿಯಲ್ಲಿ ಕೈಗೊಂಡ ನಿರ್ಧಾರಗಳಿಗೆ‌ ಅನುಮೋದನೆ ಪಡೆಯುವ ವಿಚಾರದಲ್ಲಿ...

ಕೋಲಾರದಲ್ಲಿ ಸಮೀಕ್ಷಾ ಕಾರ್ಯ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ : ಪರಿಶೀಲನೆ

ಕೋಲಾರ : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕೋಲಾರ...

ಶ್ರೀ ವಿದ್ಯಾಸಂಸ್ಕೃತಿ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ಶಿಕ್ಷಕರ ಕೆಲಸ ದೇವರ ಕೆಲಸ. ಶಿಕ್ಷಕರಿಲ್ಲದೆ ಸಮೃದ್ಧ ಸಮಾಜ ನಿರ್ಮಾಣ ಅಸಾಧ್ಯ....

ಕೋಲಾರದ ಎಸ್ ಎನ್ ಆರ್ ಜಿಲ್ಲಾಸ್ಪತ್ರೆ ವೈದ್ಯರು ಲಂಚ ಕೇಳಿ ಚಿಕಿತ್ಸೆ ವಿಳಂಬದ ಮಾಡಿದ ಆರೋಪ

ಕೋಲಾರ: ಸೀಮೆಹಸು ಗುದ್ದಿ ಕೈ ಮೂಳೆ ಮುರಿದುಕೊಂಡಿದ್ದ ವೃದ್ಧರೊಬ್ಬರ ಶಸ್ತ್ರಚಿಕಿತ್ಸೆಗೆ ನಗರದ...

Download Eedina App Android / iOS

X