ಆಟೋ ಪಲ್ಟಿಯಾಗಿ 65 ವರ್ಷದ ಮಹಿಳೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕುಷ್ಟಗಿ ತಾಲೂಕಿನ ನಿಡಶೇಸಿ ಗ್ರಾಮದ ಬಳಿ ನಡೆದಿದೆ.
- Advertisement -
ಶುಕ್ರವಾರ ಈ ದುರ್ಘಟನೆ ಸಂಭವಿಸಿದ್ದು, ಕುಷ್ಟಗಿಯ ಶಿವಮ್ಮ ಶಂಕ್ರಪ್ಪ ಕೆಂಚೋಡಿ (65) ಮೃತರು ಎಂದು ತಿಳಿದು ಬಂದಿದೆ.
ಕುಷ್ಟಗಿ ಪಟ್ಟಣದಿಂದ ನಿಡಶೇಸಿ ಗ್ರಾಮಕ್ಕೆ ತೆರಳುತ್ತಿದ್ದ ಆಟೋ ಅಪಘಾತಕ್ಕೀಡಾಗಿದ್ದು, ಗಂಭೀರ ಗಾಯಗೊಂಡ ಶಿವಮ್ಮ ಘಟನಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ವಿಷಯ ತಿಳಿದು ಘಟನಾ ಸ್ಥಳಕ್ಕೆ ಕುಷ್ಟಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





