ಕೊಪ್ಪಳ | ಅ.17 ರಂದು ಜಿಲ್ಲಾ ಮಟ್ಟದ ಯುವಜನೋತ್ಸವ

Date:

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಕೊಪ್ಪಳ ಜಿಲ್ಲಾ ಮಟ್ಟದ ‘ಯುವಜನೋತ್ಸವ-2025-26’ ಕಾರ್ಯಕ್ರಮವನ್ನು ಅಕ್ಟೋಬರ್ 17ರಂದು ನಗರದ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

- Advertisement -

ಕೇಂದ್ರ ಸರ್ಕಾರದ ಯುವ ವ್ಯವಹಾರ ಹಾಗೂ ಕ್ರೀಡಾ ಮಂತ್ರಾಲಯವು ರಾಷ್ಟ್ರಮಟ್ಟದ ಯುವಜನೋತ್ಸವವನ್ನು ಪ್ರತಿ ವರ್ಷ ಜನವರಿ 12 ರಿಂದ 16ರವರೆಗೆ ಆಯೋಜಿಸುತ್ತದೆ. ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ 15 ರಿಂದ 29 ವರ್ಷ ವಯೋಮಾನದೊಳಗಿನ ಯುವಜನರು ಭಾಗವಹಿಸಲು ಅವಕಾಶವಿರುತ್ತದೆ. ಈ ಕಾರ್ಯಕ್ರಮಕ್ಕೆ ಕರ್ನಾಟಕ ವಿಜೇತ ಸ್ಪರ್ಧಾಳುಗಳ ತಂಡವನ್ನು ಕಳುಹಿಸುವ ಸಲುವಾಗಿ ಜಿಲ್ಲಾ ಮತ್ತು ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ಸಂಘಟಿಸಬೇಕಾಗಿದ್ದು, ಅದರಂತೆ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ದಿವಾಳಿ ಕಂಪನಿಗಳ ಬಿಡ್‌ನಲ್ಲಿ ಅದಾನಿಯದ್ದೇ ಮೇಲುಗೈ; ಸಾಲಗಾರರಿಗೆ ₹97,700...

ಭಾರತದ ದಿವಾಳಿ ಹಂತದಲ್ಲಿದ್ದ ಕಂಪನಿಗಳ ಬಿಡ್‌ ಪ್ರಕ್ರಿಯೆಗಳಲ್ಲಿ ಅದಾನಿ ಗ್ರೂಪ್‌ನ ಅಸಾಧಾರಣ ಯಶಸ್ಸಿನ ಹಿಂದೆ ರಹಸ್ಯವೊಂದಿದೆ! ಪ್ರತಿ ಐದರಲ್ಲಿ ಮೂರು ಬಿಡ್‌ಗಳನ್ನು ಗೆದ್ದು, ದೇಶದ ಅತಿ ದೊಡ್ಡ ಕಾರ್ಪೊರೇಟ್ ಸ್ವಾಧೀನದಾರನಾಗಿ ಹೊರಹೊಮ್ಮಿರುವ ಅದಾನಿ...

ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ, ವ್ಯವಸ್ಥೆಯ ಮೇಲಿನ...

ಜೆಪಿಯ ಟೀಕೆಗಳು ತೀಕ್ಷ್ಣವಾಗಿದ್ದರೂ, ಅದು ಅಹಿಂಸಾತ್ಮಕವಾಗಿದೆ. ಹೆದ್ದಾರಿ ತಡೆಗಳಿಲ್ಲ, ಬಲವಂತದ ಬಂದ್‌ಗಳಿಲ್ಲ. ವಾಸ್ತವವಾಗಿ, ಶಾಂತಿಯುತ ಸಭೆಗೆ ಜಾಗ ನೀಡದೆ ಸರ್ಕಾರವೇ ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ಈ ಉದ್ದೇಶವನ್ನು ಬೆಂಬಲಿಸುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗೆ...

ನೊಬೆಲ್‌ ಪ್ರಶಸ್ತಿ ಸರಣಿ | ಭಾರತೀಯ ಮೂಲದ ದಕ್ಷಿಣ...

ಈ ಬಾರಿಯ ಶಾಂತಿ ನೊಬೆಲ್‌ ಪ್ರಶಸ್ತಿಯನ್ನು ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳಿಗಾಗಿ, ಮಾನವ ಹಕ್ಕುಗಳ ರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಡಾ. ನವನೀತಮ್‌...

ಜಿಲ್ಲಾ ಮಟ್ಟದ ಯುವ ಜನೋತ್ಸವ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನ ಪಡೆದವರು ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಅರ್ಹರಾಗುತ್ತಾರೆ. ರಾಜ್ಯ ಮಟ್ಟದಲ್ಲಿ ಭಾಗವಹಿಸಿ ವಿಜೇತರಾದವರು ರಾಷ್ಟ್ರ ಮಟ್ಟದ ಯುವ ಜನೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಾರೆ.

ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದ ಸ್ಪರ್ಧೆಗಳಲ್ಲಿ ಸಾಂಸ್ಕೃತಿಕ ವಿಭಾಗದಲ್ಲಿ ಜನಪದ ನೃತ್ಯ (ತಂಡ), ಜನಪದ ಗೀತೆ (ತಂಡ) ಪ್ರಾದೇಶಿಕ ಭಾಷೆಯಲ್ಲಿ ಕಥೆ ಬರೆಯುವುದು (1000 ಪದಗಳಿಗೆ ಮೀರದಂತೆ), ಹಿಂದಿ, ಆಂಗ್ಲ, ಪ್ರಾದೇಶಿಕ ಭಾಷೆಯಲ್ಲಿ ಬರೆಯಬಹುದು. ಚಿತ್ರಕಲೆ, ಘೋಷಿತ ಕವಿತೆಗಳು ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ಬರೆಬೇಕು. ಸ್ಪರ್ಧಿಗಳು ಸಿದ್ದಪಡಿಸಿಕೊಂಡಿರುವ ಆಯ್ದ ವಿಷಯಗಳ ಬಗ್ಗೆ 7 ನಿಮಿಷಗಳ ಭಾಷಣ ಮಾಡಬೇಕು. (ವೈಯಕ್ತಿಕ: ಹಿಂದಿ, ಆಂಗ್ಲ, ಪ್ರಾದೇಶಿಕ ಭಾಷೆಯಲ್ಲಿ) ಹಾಗೂ ‘ಇನ್ನೋವೆಶಿಯನ್ ಟ್ರಾಕ್’ ವಿಭಾಗದಲ್ಲಿ ‘ಎಕ್ಸಿಬಿಷನ್ ಆಫ್ ಸೈನ್ಸ್ ಮೇಳ’ ರಾಜ್ಯ ಮಟ್ಟದವರೆಗೆ ಮಾತ್ರ ಆಯೋಜಿಸಲಾಗುವುದು.

ಇದನ್ನೂ ಓದಿ: ಕೊಪ್ಪಳ | ಸಿಜೆಐಗೆ ಅಪಮಾನ; ಆರೋಪಿ ವಕೀಲನ ಗಡಿಪಾರಿಗೆ ಡಿಎಸ್‌ಎಸ್ ಆಗ್ರಹ

ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವ ಸ್ಪರ್ಧಾಳುಗಳು ಆಧಾರ್ ಕಾರ್ಡ್ ಝರಾಕ್ಸ್ ಪ್ರತಿ, ಬ್ಯಾಂಕ್ ಪಾಸಬುಕ್ ಪ್ರತಿ, 2-ಭಾವಚಿತ್ರದೊಂದಿಗೆ ಕಾರ್ಯಕ್ರಮ ದಿನದಂದು ಬೆಳಿಗ್ಗೆ 9 ಗಂಟೆಯೊಳಗಾಗಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ದೂರವಾಣಿ ಮುಖಾಂತರ ನೋಂದಣಿಗಾಗಿ ಬಿ.ಕೀರ್ತಿವರ್ಧನ ದ್ವಿ.ದ.ಸ-7676343554, ತುಕಾರಾಮ, ಕಚೇರಿ ಸಿಬ್ಬಂದಿ-8197398600 ಇವರನ್ನು ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಾರ್ಯಾಲಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜಿಲ್ಲಾ ಕ್ರೀಡಾಂಗಣ, ಗದಗ ರಸ್ತೆ, ಕೊಪ್ಪಳ ಕಛೇರಿಯ ದೂರವಾಣಿ ಸಂಖ್ಯೆ: 08539-230121 ಗೆ ಕಛೇರಿ ಅವಧಿಯಲ್ಲಿ ಸಂಪರ್ಕಿಸಬಹುದು ಎಂದು ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ್ ಹುದ್ದೆಯಿಂದ ವಜಾಗೊಳಿಸಿ: ಬಸವರಾಜ ಎಸ್ ಆಗ್ರಹ

"ಪ್ರಜಾಪ್ರಭುತ್ವ ಭಾರತದಲ್ಲಿ ಜನರ ಅತ್ಯಂತ ಪವಿತ್ರವಾದದ್ದು. ಮತದಾನದ ಹಕ್ಕನ್ನೇ ಕಸಿದುಕೊಳ್ಳುತ್ತಿರುವ ಚುನಾವಣಾ...

ಚಿಕ್ಕಮಗಳೂರು | ಭೂಮಿಯ ರಕ್ಷಣೆ ಹಾಗೂ ಮುಂದಿನ ಪೀಳಿಗೆಗೆ ಸ್ವಚ್ಛ; ಸಿ.ಟಿ ರವಿ 

ಚಿಕ್ಕಮಗಳೂರು ನಗರ ಘಟಕದ ವತಿಯಿಂದ ಬಾಳೇಹಳ್ಳಿಯ ಶ್ರೀ ಸಿದ್ದೇಶ್ವರ ಮತ್ತು ಶ್ರೀ...

ಅ.17ರಿಂದ ಮೂರು ದಿನಗಳ ಕಾಲ ಅದ್ದೂರಿ ಚಾಮರಾಜನಗರ ದಸರಾ

ಚಾಮರಾಜನಗರದಲ್ಲಿ ಅಕ್ಟೋಬರ್ 17, 18 ಮತ್ತು 19ರಂದು ಮೂರು ದಿನಗಳ ಕಾಲ...