ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸ್ ಕೊಪ್ಪಳದ ಗಂಗಾವತಿ ತಾಲೂಕು ದಂಡಾಧಿಕಾರಿಗಳ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿತು.
ಈ ವೇಳೆ ಹುಮೆರಾ ಸಿದ್ದಿಕಿ ಮಾತನಾಡಿ, “ಈ ಕಾಯ್ದೆಯು ವಕ್ಫ್ ಸಂಘಗಳ ಸಮರ್ಥನೆ ಹಾಗೂ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುವ ನಿಯಮಗಳನೊಳಗೊಂಡಿದ್ದು, ಇದರಿಂದ ನಮ್ಮ ಸಮುದಾಯದ ಜನರಲ್ಲಿ ಕಳವಳವನ್ನು ಉಂಟುಮಾಡಿದೆ” ಎಂದು ಹೇಳಿದರು.
ಹಮಾತೆ ಇಸ್ಲಾಮಿನ ಮಾಜಿ ಮಹಿಳಾ ಅಧ್ಯಕ್ಷೆ ಸಾಲಿಹ ಬೇಗಂ ಮಾತನಾಡಿ, “ಧಾರ್ಮಿಕ ಉದ್ದೇಶಕ್ಕಾಗಿ ಬಳಸಲಾಗುತ್ತಿದ್ದ ಐತಿಹಾಸಿಕವಾಗಿ ದತ್ತಿ ಭೂಮಿಯನ್ನು ಅಪಾಯಕ್ಕೆ ಸಿಲುಕಿಸುವದು ಈ ಕಾಯ್ದೆಯ ಹಿಂದಿನ ಉದ್ದೇಶವಾಗಿದ್ದು, ಇದು ಕರಾಳ ಕಾನೂನು ಆಗಿದೆ. ಅಲ್ಪಸಂಖ್ಯಾತರನ್ನು ಕುಗ್ಗಿಸುವ ಹಾಗೂ ಸಂವಿಧಾನ ವಿರೋಧಿ ಕಾನೂನಾಗಿದೆ. ಇದು ಸ್ವೀಕಾರಹವಲ್ಲ. ವಕ್ಫ ಆಸ್ತಿಗಳ ಪ್ರಕಾರಗಳು, ಅವುಗಳ ಬಳಕೆ ಮತ್ತು ರಕ್ಷಣೆ ವಕ್ಫ ಕಾನೂನಿನಲ್ಲಿ ಇರುವ ಅಂಶಗಳನ್ನು ತಿಳಿಸಿದ ಅವರು ವಕ್ಫ ಕಲ್ಯಾಣ ವ್ಯವಸ್ಥೆಯನ್ನು ಹಾಳು ಮಾಡಲು ಕೇಂದ್ರ ಸರ್ಕಾರವು ವಕ್ಫ ತಿದ್ದುಪಡಿ ಮಸೂದೆ 2025 ಅನ್ನು ಜಾರಿಗೆ ತಂದಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕೊಪ್ಪಳ | ವಿದ್ಯಾರ್ಥಿ ಅಂಕಪಟ್ಟಿ, ಟಿಸಿ ಕೊಡದ ವಾಸವಿ ಶಾಲೆ ಮುಖ್ಯಶಿಕ್ಷಕ ಫಕ್ಕೀರಪ್ಪ ಎಮ್ಮಿನವರ: ಪಾಲಕರ ಪರದಾಟ
ಕಾರ್ಯಕರ್ತರು, ಜಮಾತೆ ಇಸ್ಲಾಮಿ ಮಾಜಿ ಮಹಿಳಾ ಆಧ್ಯಕ್ಷೆ ಸಾಲಿಹ ಬೇಗಮ್, ಜಮಾತೆ ಇಸ್ಲಾಮಿ ಮಾಜಿ ಅಧ್ಯಕ್ಷ ಅಬ್ದುಲ್ ಖುದ್ದೂಸ್, ಮೊಹಮ್ಮದ್ ರಫೀಕ್, ಜವ್ವಾದ ಸಿದ್ದಿಕಿ, ಹುಮ್ಯಾನಿಟರಿಯನ್ ರಿಲೀಫ್ ಸೊಸೈಟಿ ಅಧ್ಯಕ್ಷ ಆಸಿಫ ಅಲಿ, ಎಸ್‌ಐಒ ತಾಲೂಕು ಅಧ್ಯಕ್ಷ ಶಾಯಿದ್ ಆಫ್ರಿದಿ, ಎಸ್‌ವಾಯ್‌ಎಮ್ ತಾಲೂಕ ಅಧ್ಯಕ್ಷ ರಾಜ, ಜಿಐಒ ಕಾರ್ಯಕರ್ತರು ಹಾಗೂ ಇತರರು ಇದ್ದರು.